Tuesday, 26th November 2024

ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದ 13 ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ

10 ಮಿಲಿಯನ್‌ ಮಕ್ಕಳಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಕರುಳಿನ ಕ್ಯಾನ್ಸರ್‌

ಬೆಂಗಳೂರು: ಅತಿ ಸಣ್ಣ ವಯಸ್ಸಿನಲ್ಲಿ ಅಪರೂಪದ ಕರುಳಿನ ಕ್ಯಾನ್ಸರ್‌ಗೆ ಒಳಗಾಗಿದ್ದ 13 ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಫೋರ್ಟಿಸ್‌ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಅವರ ತಂಡ ಈ ಚಿಕಿತ್ಸೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಡಾ. ಸಂದೀಪ್‌ ನಾಯಕ್‌, ತಾಂಜೇನಿಯಾ ಮೂಲಕದ 13 ವರ್ಷದ ಬಾಲಕಿಯು ಒಂದು ವರ್ಷದಿಂದ ರಕ್ತಹೀನತೆಯಿಂದಾಗಿ ಮಲಬದ್ಧತೆ, ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಳು, ಹತ್ತಿರದ ಆಸ್ಪತ್ರೆಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಹೀಗಾಗಿ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು, ಪ್ರಾರಂಭದಲ್ಲಿ ಮಕ್ಕಳ ತಜ್ಞರು ರಕ್ತ ಹೀನತೆಗೆ ಇರುವ ಸಾಧ್ಯತೆಗಳ ಬಗ್ಗೆ ಪರೀಕ್ಷೆ ನಡೆಸಿದರು, ಆದರೆ, ಬಾಲಕಿಯು ಕ್ಯಾನ್ಸರ್‌ ಹೊಂದಿರುವ ಲಕ್ಷಣ ಇದಿದ್ದರಿಂದ ಪರೀಕ್ಷೆ ನಡೆಸಿದ ಬಳಿಕ ಎಂಡೋಸ್ಕೋಪಿ ನಡೆಸಿ ಮೌಲ್ಯಮಾಪನ ಮಾಡಿದ ಬಳಿಕ ಆಕೆಗೆ ದೊಡ್ಡಕರುಳಿನಲ್ಲಿ ಗಡ್ಡೆ ಬೆಳೆದಿರುವುದು ತಿಳಿದು ಬಂತು.

ಇದು ಕ್ಯಾನ್ಸರ್‌ ಆಗಿ ಬೆಳೆಯ ತೊಡಗಿತ್ತು, ಹೀಗಾಗಿ ಆ ಗಡ್ಡೆಯನ್ನು ತೆಗೆಯುವುದು ಅನಿವಾರ್ಯವಾದ ಕಾರಣ, ಶಿಶುತಜ್ಞರ ಸಹಕಾರದಿಂದ ಆಕೆಗೆ ಲ್ಯಾಪರೊಸ್ಕೋಪಿಕ್ ರೈಟ್ ಹೆಮಿಕೊಲೆಕ್ಟಮಿಗೆ ಒಳಪಡಿಸಿದೆವು. ಸಾಮಾನ್ಯವಾಗಿ ವಯಸ್ಕರಿಗೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು, ಈಗಾಗಲೇ ಇಂತಹ 1 ಸಾವಿರ ಶಸ್ತ್ರಚಿಕಿತ್ಸೆಯನ್ನು 4K ಲ್ಯಾಪರೊಸ್ಕೋಪಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಲಾಗಿದೆ. ಆದರೆ, ಬಾಲಕಿ ವಯಸ್ಸಿ ಕೇವಲ 13 ಆದ್ದರಿಂದ ಇದು ಸವಾಲಿನ ಕೆಲಸವಾಯಿತು. ಆದಾಗ್ಯ, ಮಗುವಿನ ಆತ್ಮಸೈರ್ಯದ ಆಧಾರದ ಮೇಲೆ ಈ ಶಸ್ತ್ರಚಿಕಿತ್ಸೆ ನಡೆಸಿದೆವು, 4K ಲ್ಯಾಪರೊಸ್ಕೋಪಿಕ್ ತಂತ್ರಜ್ಞಾನವು ತೆರೆದ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ನಿಖರವಾಗಿ ಗಡ್ಡೆ ತೆಗೆಯಲು ಸಹಕಾರಿಯಾಗಿದೆ. ಇದೀಗ ಬಾಲಕಿಯು ಸಂಪೂರ್ಣ ಗುಣಮುಖಳಾಗಿದ್ದಾಳೆ.

ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೊಲಾಜಿ ಕನ್ಸಲ್ಟೆಂಟ್‌ ಡಾ. ಭಾರತ್‌ ಮಾತನಾಡಿ, ಬಾಲಕಿ ವಯಸ್ಸಿ ತೀರ ಕಡಿಮೆ ಇದ್ದ ಕಾರಣ ಆಕೆಗೆ ಈ ಶಸ್ತ್ರ ಚಿಕಿತ್ಸೆ ಆಯ್ಕೆ ಮಾಡಿಕೊಂಡೆವು, ಇಲ್ಲವಾದರೆ ಆಕೆಗೆ ಕೀಮೋಥೆರಪಿ ಮೂಲಕ ಚಿಕಿತ್ಸೆ ನೀಡಬೇಕಿತ್ತು, ಇದರಿಂದ ಆಕೆಗೆ ಭವಿಷ್ಯದಲ್ಲಿ ಗರ್ಭ ಧರಿಸಲು ಸಮಸ್ಯೆ ಆಗುತ್ತಿತ್ತು, ಆದರೆ, ವೈದ್ಯಕೀಯ ಲೋಕದ ಬೆಳವಣಿಗೆಯಿಂದ ಅತ್ಯಾಧುನಿಕ ಚಿಕಿತ್ಸೆ ಮೂಲಕ ಬಾಲಕಿಯನ್ನು ಗುಣಮುಖ ಮಾಡಲಾಗಿದೆ ಎಂದರು.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, “ಚಿಕ್ಕ ಹುಡುಗಿಯ ಚೇತರಿಕೆಯಲ್ಲಿ ನಾವು ಪಾತ್ರವಹಿಸಿದ್ದೇವೆ ಎಂದು ವಿನಮ್ರರಾಗಿದ್ದರೂ, ಈ ಪ್ರಕರಣವು ಮಕ್ಕಳಿಗೆ ಆನುವಂಶಿಕ ತಪಾಸಣೆ ಮತ್ತು ಆವರ್ತಕ ತಪಾಸಣೆಯ ನಿರ್ಣಾಯಕ ಪ್ರಾಮುಖ್ಯತೆಯನ್ನು ನೆನಪಿಸುತ್ತದೆ. ಕರುಳಿನ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಮಾಡಿ.ಈ ಸಂಕೀರ್ಣ ಕಾರ್ಯವಿಧಾನದ ಯಶಸ್ಸು ನಮ್ಮ ವೈದ್ಯಕೀಯ ತಂಡದ ಪ್ರಾವೀಣ್ಯತೆ ಯನ್ನು ನಿಜವಾಗಿಯೂ ಒತ್ತಿಹೇಳುತ್ತದೆ. ಅವರು ಈ ಚಿಕ್ಕ ಹುಡುಗಿಗೆ ಉಜ್ವಲ ಭವಿಷ್ಯವನ್ನು ಭದ್ರಪಡಿಸಲು ಮತ್ತು ಅವರ ಕುಟುಂಬಕ್ಕೆ ಭರವಸೆ ಯನ್ನು ಪುನರುಜ್ಜೀವನಗೊಳಿಸಲು ಮನಬಂದಂತೆ ಕೆಲಸ ಮಾಡಿದರು. ಫೋರ್ಟಿಸ್ ಬನ್ನೇರುಘಟ್ಟದಲ್ಲಿ, ನಾವು ವಿಶ್ವ ದರ್ಜೆಯ ಆರೋಗ್ಯ ಸೇವೆ ಯನ್ನು ಒದಗಿಸಲು ಮತ್ತು ನಮ್ಮ ರೋಗಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಬದ್ಧರಾಗಿದ್ದೇವೆ.