ನ್ಯೂಯಾರ್ಕ್ : ವಿಶ್ವದ ದೊಡ್ಡಣ್ಣ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಗೆ ಕೊರೊನಾ ಸೋಂಕು ಧೃಡವಾದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದು, ಸೋಮ ವಾರ ಟ್ರಂಪ್ ಡಿಸ್ಚಾರ್ಜ್ ಆಗಲಿದ್ದಾರೆ.
ಇಂದು ಟ್ರಂಪ್ ಆರೋಗ್ಯದ ಬಗ್ಗೆ ವೈದ್ಯರು ಪ್ರಕಟಣೆ ಹೊರಡಿಸಿದ್ದು, ಅವರ ಆಕ್ಸಿಜನ್ ಮಟ್ಟದಲ್ಲಿ ಕೊಂಚ ಕುಸಿತ ಕಂಡಿದೆ ಈಗ ಚೇತರಿಕೆ ಕಂಡು ಬಂದಿದೆ. ಟ್ರಂಪ್ ಸೋಮವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.
‘ಈಗ ನನಗೆ ತುಂಬಾ ನೆಮ್ಮದಿ ಇದೆ. ನಾನು ಎಲ್ಲ ಕೆಲಸಗಳನ್ನೂ ಮಾಡಿ, ವಾಪಸ್ ಬರಲು ಪ್ರಯತ್ನಿಸುತ್ತೇವೆ. ನಾನು ಮತ್ತೆ ಹಿಂದಿರುಗಬೇಕು, ಏಕೆಂದರೆ ನಾವು ಈಗಲೂ ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿ ಮಾಡಬೇಕು’ ಎಂದು ಟ್ರಂಪ್ ಹೇಳಿ ದ್ದರು.