ಪ್ರಾಸ್ತಾವಿಕ
ಕೀರ್ತನಾ ವಿ.ಭಟ್
ದೇಶದಲ್ಲಿ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಜಾರಿಗೆ ಬಂದ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನವು ದಿನದಿಂದ ದಿನಕ್ಕೆ ತನ್ನ ಉದ್ದೇಶವನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ವಾಸ್ತವದಲ್ಲಿ ಇದು ‘‘ಬೇಟಿ ಹಟಾವೋ, ಬೇಟಿ ದಾರಾವ್’’ ಎಂಬ ಸ್ವರೂಪ ಪಡೆಯುತ್ತಿದೆ. ಪ್ರತಿನಿತ್ಯ ದೇಶದಲ್ಲಿ ಹೆಣ್ಣು ಮಕ್ಕಳ ಶೋಷಣೆ ಹೆಚ್ಚುತ್ತಲೇ ಇದೆ. ಹೆಣ್ಣು ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲಾ
ಎಂಬುದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ.
ಡಾಟರ್ಸ್ ಡೇ ಬಳಿಕ ಕೇವಲ ಎರಡು ದಿನಗಳ ನಂತರ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಬಾಲಿಕಿ ಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ನಿರ್ಭಯ ಪ್ರಕರಣ ಮತ್ತು ಹೈದರಬಾದ್ ಘಟನೆಯು ಜನರ ಮನಸ್ಸಿನಿಂದ ಮಾಸಿಹೋಗುವ ಮೊದಲು ಮತ್ತೊಂದು ಕ್ರೂರ ಘಟನೆ ನಡೆದಿದೆ. ಬಾಲಕಿ ಸಾಕ್ಷಿ ಹೇಳುವುದನ್ನು ತಡೆಯಲು ಆಕೆಯ ನಾಲಿಗೆಯನ್ನು ಕತ್ತರಿಸಲಾಗಿದೆ. ಅವಳ ಕಾಲುಗಳು ತೀವ್ರವಾಗಿ ಗಾಯಗೊಂಡಿವೆ. ಆಕೆಯ ಬೆನ್ನು ಮೂಳೆಗೆ ಬಲವಾಗಿ ಪೆಟ್ಟುಬಿದ್ದಿರಿಂದ ಅವಳು ಸಂಪೂರ್ಣಾವಾಗಿ ಪಾರ್ಶ್ವವಾಯುವಿಗೆ ಒಳಗಾಗಿದ್ದಳು.
ಆಸ್ಪತ್ರೆಯಲ್ಲಿ 15ದಿನಗಳ ಕಾಲ ತನ್ನ ಜೀವನ್ಮರಣ ಹೊರಾಟ ಮಾಡಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಳು. ಈಕೆ ಸಾವನ್ನಪ್ಪಿದ ಎರಡು ದಿನಗಳ ನಂತರ ಇಂತಹದ್ದೆ ಮತ್ತೊಂದು ಘಟನೆ ಹತ್ರಾಸ್‌ನಿಂದ 500 ಕಿಲೋ ಮೀ ದೂರದ ಬಲ್ರಾಮ್ ಪುರದಲ್ಲಿ ನಡೆದಿದೆ. 22 ವರ್ಷದ ದಲಿತ ಮಹಿಳೆಯ ಅತ್ಯಾಚಾರ ಮಾಡಲಾಗಿದೆ. ಈಕೆಯನ್ನು ಲಖನೌ ಆಸ್ಪತ್ರೆಗೆ ಕೊಂಡೊ ಯ್ಯುವ ವೇಳೆ ಸಾವನಪ್ಪದ್ದಾಳೆ.
ಒಟ್ಟು ಅಪರಾಧದ ಅಂಕಿಅಂಶಗಳು ಶೇಕಡಾ 11.5ರಷ್ಟಿದ್ದರೂ ಅತ್ಯಾಚಾರದ ಶಿಕ್ಷೆಯ ಪ್ರಮಾಣ ಕೇವಲ 27.2 ಶೇಕಡಾ ಮಾತ್ರ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ)ನ ಅಂಕಿ ಅಂಶಗಳ ಪ್ರಕಾರ 2018ರಲ್ಲಿ ದೇಶದಾದ್ಯಂತ ಪ್ರತಿದಿನ ಸರಾಸರಿ 91 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು 60 ದಿನಗಳಲ್ಲಿ ಪೂರ್ಣ ಗೊಳಿಸಬೇಕು ಆದರೆ ನಿಧಾನಗತಿಯ ಪೋಲಿಸ್ ತನಿಖೆಯಿಂದಾಗಿ 60 ದಿನದಲ್ಲಿ ವಿಚಾರಣೆ ಎಂದಿಗೂ ಸಂಭವಿಸಿಲ್ಲ ಎಂದು ಕೋಡ್ ಆಫ್ ಕ್ರಿಮಿನಲ್ ಪ್ರೋಸಿಜರ್ (ಸಿಆರ್‌ಪಿಸಿ) ಹೇಳುತ್ತದೆ. ಇದರಲ್ಲಿ ನ್ಯಾಯಾಂಗ ನ್ಯೂನತೆಗಳು ಇದ್ದು ಪ್ರಾಥಮಿಕವಾಗಿ ಆರೋಪಿಗೆ ಜಾಮೀನು ನೀಡಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಜಾಮೀನು ನಿರಾಕರಿಸಬೇಕು. ಆಗ ಮಾತ್ರ ತನಿಖೆ ವೇಗವಾಗಿ ಆಗಲು ಸಾಧ್ಯ. ಕೆಲವು ಅಧ್ಯಯನಗಳ ಪ್ರಕಾರ ಫಾಸ್ಟ್ ಟ್ರ್ಯಾಕ್ ನ್ಯಾಯಾಲಗಳಲ್ಲೂ ಸಹ ವಿಚಾರಣೆಯನ್ನು ಮುಗಿ ಸುವ ಸರಾಸರಿ ಸಮಯ ಎಂಟು ತಿಂಗಳುಗಳು ಎಂದು ಸೂಚಿಸುತ್ತದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಕುಟುಂಬವು ನೋವು ಮತ್ತು ಅವಮಾನದಲ್ಲಿ ಸಿಲುಕಿ ಅಸ್ವಸ್ಥತೆಗೆ ಒಳಗಾಗುತ್ತದೆ. ಇದರಿಂದ ಹೆಣ್ಣು ಮಕ್ಕಳು ದುರ್ಬಲರಾಗಿಯೇ ಉಳಿಯುತ್ತಾರೆ. ಜಾತಿ ಯುದ್ಧದಲ್ಲಿಯೂ ಹೆಣ್ಣು ಮಕ್ಕಳನ್ನು ಒಂದು ಸಾಧನವಾಗಿ ಬಳಸ ಲಾಗುತ್ತಿದೆ. ಹತ್ರಾಸ್ ಪ್ರಕರಣವು ಉತ್ತರಪ್ರದೇಶದಲ್ಲಿ ರಾಜಕೀಯ ಬಣ್ಣವನ್ನು ಪಡೆದುಕೊಳ್ಳುತ್ತಿದೆ. ಪಕ್ಷಗಳು ಕೇವಲ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಪ್ರಕರಣವನ್ನು ಅಸ್ತ್ರವಾಗಿ ಉಪಯೋಗಿಸುತ್ತಿರುವುದು ಬೇಸರದ ಸಂಗತಿ.
ದೇಶದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಎಂಬ ಅವಮಾನಕ್ಕೆ ತಕ್ಕಂತೆ, ಮಹಿಳೆಯರ ಮೇಲಿನ ಅಪರಾಧಗಳನ್ನು ಅತೀ ಹೆಚ್ಚು ವರದಿ ಮಾಡುವ ಯುಪಿ ಯನ್ನು ಯಾವ ರಾಜ್ಯವು ಹಿಂದಿಕ್ಕಲು ಬಯಸುವುದಿಲ್ಲ. ಇನ್ನೂ ಈ ಪ್ರಕರಣದಲ್ಲಿ ಅದೇಷ್ಟು ವರ್ಷಗಳ ಕಾಲ ನ್ಯಾಯಕ್ಕಾಗಿ ಕಾಯಬೇಕಾಗುತ್ತದೋ ತಿಳಿದಿಲ್ಲ. ಇನ್ನೂ ಅದೇಷ್ಟೂ ಹೆಣ್ಣು ಮಕ್ಕಳು ಬಲಿಯಾಗು ತ್ತರೋ ಈ ಕ್ರೂರ ಸಮಾಜ ಕಣ್ಣಿಗೆ.