Friday, 22nd November 2024

ಇಂದು ಉತ್ತರ ಪ್ರದೇಶದಲ್ಲಿ ನೋ ನಾನ್ ವೆಜ್ ಡೇ

ಲಖನೌ: ನ.25 ಶನಿವಾರದಂದು ʻನೋ ನಾನ್ ವೆಜ್ ಡೇʼ ಎಂದು ಉತ್ತರ ಪ್ರದೇಶ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಸಂತ ತನ್ವರದಾಸ್​ ಲೀಲಾರಾಮ್ ವಾಸ್ವಾನಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರ ಶನಿವಾರವನ್ನು ಮಾಂಸ ರಹಿತ ದಿನವೆಂದು ಘೋಷಿಸಿದೆ.

ಸಾಧು ವಾಸ್ವಾನಿ ಅವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಮಾಂಸರಹಿತ ದಿನವೆಂದು ಗುರುತಿಸಿ, ಉತ್ತರ ಪ್ರದೇಶದಲ್ಲಿ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಬೇಕೆಂದು ಆದೇಶಿಸಲಾಗಿದೆ. ವಾಸ್ವಾನಿ ಭಾರತೀಯ ಶಿಕ್ಷಣತಜ್ಞರಾಗಿದ್ದು, ಪಾಕಿಸ್ತಾನದ ಸಿಂಧ್‌ ನಲ್ಲಿ ಸೇಂಟ್ ಮೀರಾ ಶಾಲೆಯನ್ನು ತೆರೆದರು. ಪುಣೆಯಲ್ಲಿ ಸಾಧುವಾಸ್ವಾನಿಯವರ ಬೋಧನೆಗಳಿಗೆ ಸಂಬಂಧಿಸಿದ ಮ್ಯೂಸಿಯಂ ಕೂಡ ತೆರೆಯಲಾಗಿದೆ.

ಇತ್ತೀಗೆಷ್ಟೇ ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಯುಪಿ ಸರ್ಕಾರ ನಿಷೇಧಿಸಿತ್ತು. ಇದರ ಬೆನ್ನಲ್ಲೇ ಇಂಥದ್ದೊಂದು ಆದೇಶ ಹೊರಡಿಸಿದೆ.