Monday, 6th January 2025

ಎಸ್‌ಎಸ್‌ಐಟಿಯಲ್ಲಿ ನೆಟ್ವರ್ಕ್ಸ್ ಕಮ್ಯೂನಿಕೇಷನ್ ಸಮ್ಮೇಳನ 

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗವು ಸೋಮವಾರದಿಂದ ಮೊಬೈಲ್ ನೆಟ್ವರ್ಕ್ಸ್ ಆಂಡ್ ವೈರ್ಲೆಸ್ ಕಮ್ಯೂನಿಕೇಷನ್ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋ ಜಿಸಿದೆ.
ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನ ಸಭಾಂಗಣದಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ವಿಭಾಗದ ಸಹಯೋಗದೊಂದಿಗೆ ‘ಮೊಬೈಲ್ ನೆಟ್ವರ್ಕ್ಸ್ ಆಂಡ್ ವೈರ್ಲೆಸ್ ಕಮ್ಯೂನಿಕೇಷನ್’ ವಿಷಯ ಕುರಿತು ಹಮ್ಮಿಕೊಳ್ಳಲಾದ 3ನೇಐಇಇಇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಸ್ಪೇನ್‌ನ ಯುನಿವರ್ಸಿಟಿ ಆಫ್ ಜೇನ್‌ನ ಡಾ.ರೇಸಿಯೋ ಪೆರೆಜ್ ಡಿ ಪ್ರಾಡೊ  ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ನ್ಯಾಶನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ವಿಜ್ಞಾನಿ ಡಾ.ವಿ.ಪಿ.ಎಸ್.ನಾಯ್ಡು ಮಾತನಾಡಿ, ಟೆಲಿಕಮ್ಯು ನಿಕೇಷನ್ ಕ್ಷೇತ್ರದಲ್ಲಿ ಜ್ಞಾನದ-ತಂತ್ರಜ್ಞಾನದ ಶ್ರಮವಹಿಸಲು ತಯಾರಾದರೆ, ನೀವು ಅದ್ಭುತಗಳನ್ನೇ ಈ ಕ್ಷೇತ್ರದಲ್ಲಿ ಸಾಧಿಸಬಹುದು ಎಂದು ಹಲವಾರು ತಂತ್ರಜ್ಞಾನಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಐಐಟಿ ಭುವನೇಶ್ವರದ ಪ್ರಾಧ್ಯಾಪಕರಾದ ಡಾ.ಸೌಮ್ಯ ಪ್ರಕಾಶ್ ದಾಸ್ ,  ಬೆಂಗಳೂರಿನ ಶ್ರೀ ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸ್ಟೂಡೆಂಟ್ ವೆಲ್ ಫೇರ್‌ನ ಡೀನ್ ಡಾ.ಹೇಮಲತಾ.ಕೆ.ಎಲ್, ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಮ್.ಝಡ್. ಕುರಿಯನ್, ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರ ವಿವೇಕ ವೀರಯ್ಯ, ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಮ್.ಎಸ್. ರವಿಪ್ರಕಾಶ್, ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಸುಮಾ .ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *