Sunday, 5th January 2025

ಡಿ.17ರಂದು ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ

ಬೆಂಗಳೂರು: ಜಯಮಹಲ್ ಪ್ಯಾಲೇಸ್ ಸಭಾಂಗಣದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘದ 2023-2028 ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಮತಯಾಚನೆ ಮತ್ತು ಬಹಿರಂಗ ಪ್ರಚಾರ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷ ಎ. ಅಮೃತ್ ರಾಜ್ ಮತ್ತು ಕೆ. ಜಿ. ರವಿ ನೇತೃತ್ವದ ತಂಡದಲ್ಲಿ ಸಿ.ಎಂ. ಮುನಿರಾಜು, ಎಂ ಮಹೇಶ್ ಮತ್ತು ಎಲ್.ಆರ್ ಮಂಜುನಾಥ್ ಹಾಗೂ ಎನ್ ಹರೀಶ್ ಕುಮಾರ್, ವಿನಯಕುಮಾರ್ 7 ಸಾಮಾನ್ಯ ವರ್ಗದಲ್ಲಿ ಹಾಗೂ ಕೆ.ಎನ್. ಗಂಗಾಧರ್ (ಲಾಲಿ) ಒಂದು ಪರಿಶಿಷ್ಟ ಜಾತಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಡಿ.17ರಂದು ಬಿಬಿಎಂಪಿ ಕೇಂದ್ರ ಕಚೇರಿ ಡಾ. ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಮತದಾನ ಜರುಗಲಿದ್ದು, ನೌಕರರ ಸಹಕಾರ ಸಂಘದಲ್ಲಿ 2600ಕ್ಕೂ ಮತದಾರರು ಇದ್ದಾರೆ. ಈ ಕುರಿತು ಎ. ಅಮೃತ್ ರಾಜ್ ಮಾತನಾಡಿ, 1914ರಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘ ಸ್ಥಾಪನೆಯಾಯಿತು. 111ವರ್ಷಗಳ ಇತಿಹಾಸವಿದೆ.

Leave a Reply

Your email address will not be published. Required fields are marked *