Friday, 22nd November 2024

ಆನ್‍ಲೈನ್ ಡೆಲಿವರಿಯ ಹಿಂದು ಮುಂದು

ವಸಂತ ಗ ಭಟ್‍
ಟೆಕ್ ಫ್ಯೂಚರ್

ಅಮೆಜೋನ್ ಸಂಸ್ಥೆಯು ವಿವಿಧ ರೀತಿಯ ವಸ್ತುಗಳನ್ನು ಒಂದೇ ದಿನದಲ್ಲಿ ಡೆಲಿವರಿ ಮಾಡೋದು ಹೇಗೆ ಗೊತ್ತಾ?

ಐದು ವರ್ಷದ ಹಿಂದೆ, ಒಂದು ವಸ್ತುವಿನ ಆರ್ಡರ್ ಮಾಡಿದ ಕನಿಷ್ಠ 3-4 ದಿನದ ನಂತರ ಆ ಉತ್ಪನ್ನಗಳು ನಮ್ಮ ಕೈ ಸೇರು ತ್ತಿದ್ದವು. ಈಗ ಕಾಲ ಬದಲಾಗಿದೆ. ಅಮೆಜೋನ್ ಪ್ರೈಮ್ ಬಂದ ನಂತರ ಜಗತ್ತಿನಾದ್ಯಂತ 10 ಲಕ್ಷಕ್ಕೂ ಹೆಚ್ಚಿನ  ಉತ್ಪನ್ನ ಗಳನ್ನು ಆರ್ಡರ್ ಮಾಡಿದ ಒಂದೇ ದಿನದಲ್ಲಿ ಅಮೆಜೋನ್ ವಿತರಿಸುತ್ತಿದೆ.

ಭಾರತದಂತಹ ದೇಶಗಳಲ್ಲಿ ಹೆಚ್ಚಿನ ಒಂದು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಿಗೆ ಅಮಜೋನ್ ಉತ್ಪನ್ನಗಳನ್ನು ವಿತರಿಸುತ್ತದೆ. ಇಷ್ಟು ದೊಡ್ಡ ಸಾಗಾಟ ಜಾಲವನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಒಂದೇ ದಿನದಲ್ಲಿ ಉತ್ಪನ್ನವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು ನಿಜಕ್ಕೂ ಸವಾಲು.  ಅಮೆಜೋನ್ ಇದನ್ನು ಹೇಗೆ ನಿರ್ವಹಿಸುತ್ತಿದೆ? ಅಮೆಜೋನ್ ಮುಖ್ಯವಾಗಿ ಮೂರು ತರಹದ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಮೊದಲನೆಯದು ಸ್ವತಃ ಅಮೆಜೋನ್‌ನ ಉತ್ಪನ್ನಗಳು. ಅಮೆಜೋನ್ ಎಸೆನ್ಶಿಯಲ್ಸ್‌, ಅಮಜೋನ್ ಬೇಸಿಕ್ಸ್, ಅಮಜೋನ್ ಅಲೆಕ್ಸ ಇವೆಲ್ಲ ಈ ರೀತಿಯ ಉತ್ಪನ್ನಗಳಿಗೆ ಉದಾಹರಣೆ. ಎರಡನೆಯ ರೀತಿಯಲ್ಲಿ, ಉತ್ಪನ್ನದ ಮಾಲಿಕ ಅಮಜೋನ್ ಮೂಲಕ ಮಾರಾಟ ಮಾಡುತ್ತಾನೆ. ಇಲ್ಲಿ ಅಮೆಜೋನ್ ಕೇವಲ
ಆತನ ಉತ್ಪನ್ನಗಳನ್ನು ಪ್ರದರ್ಶಿಸಲು ಬಳಕೆಯಾಗುತ್ತದೆ, ಮತ್ತು ಮಾರಾಟವಾಗುವ ಪ್ರತಿ ಉತ್ಪನ್ನಕ್ಕೆ ಅಮೆಜೋನ್ ವಸ್ತುವಿನ ಮೌಲ್ಯದ 15 ಪ್ರತಿಶತವನ್ನು ಮಾಲಿಕನಿಂದ ಪಡೆದುಕೊಳ್ಳುತ್ತದೆ. ಮೂರನೆಯ ರೀತಿಯದೆಂದರೆ, ಅಮೆಜೋನ್ ಇತರದಿಂದ ಖರೀದಿಸಿ ತನ್ನ ಸಂಗ್ರಹಣಾ ಗೋದಾಮುಗಳಲ್ಲಿ ಶೇಖರಿಸಿಟ್ಟು ಅವಶ್ಯಕತೆಯ ಅನುಗುಣವಾಗಿ ಸರಬರಾಜು ಮಾಡುತ್ತದೆ.

ಹೆಚ್ಚಿನ ದಿನಬಳಕೆಯ ವಸ್ತುಗಳು, ಮೊಬೈಲ್ ಚಾರ್ಜರ್, ಯೂಎಸ್‌ಬಿ ತಂತಿ ಇವೆಲ್ಲ ಇದೆ ಈ ವರ್ಗಕ್ಕೆ ಸೇರುತ್ತವೆ. ಅಮಜೋನ್ ಒಂದೇ ದಿನದಲ್ಲಿ ವಿತರಣೆ ಮಾಡುವ ಹೆಚ್ಚಿನ ಉತ್ಪನ್ನಗಳು ಮೊದಲನೆಯ ಅಥವಾ ಕೊನೆಯ ವರ್ಗಕ್ಕೆ ಸೇರಿದವು. ವಸ್ತುವಿನ ಉತ್ಪಾದಕ ಮಾರಾಟ ಮಾಡುವ ಉತ್ಪನ್ನಗಳು ಸಾಮಾನ್ಯವಾಗಿ ನಿಮ್ಮ ಕೈ ಸೇರಲು ಹೆಚ್ಚಿನ ಸಮಯ ಹಿಡಿಯುತ್ತದೆ. ಮರದ ಕುರ್ಚಿ, ಟೀಪಾಯಿ ಅಥವಾ ಲ್ಯಾಪ್ಟಾಪ್ ಇವೆಲ್ಲ ಇದೇ ವರ್ಗಕ್ಕೆ ಸೇರಿದ ಉತ್ಪನ್ನಗಳು. ಇವುಗಳನ್ನು ತನ್ನೆಲ್ಲಾ ವಿತರಣಾ ಕೇಂದ್ರ ಗಳಲ್ಲಿ ಶೇಖರಿಸಿಟ್ಟು ಆರ್ಡರಗೋಸ್ಕರ ಕಾಯುವುದರಿಂದ ಅಮೆಜೋನ್‌ಗೆ ಯಾವುದೇ ಲಾಭವಿಲ್ಲ, ಹಾಗಾಗಿ ಅಂತಹ ಉತ್ಪನ್ನ ಗಳನ್ನು ಅಮೆಜೋನ್ ಒಂದು ದಿನದ ವಿತರಣೆಯಲ್ಲಿ ಸೇರಿಸುವುದಿಲ್ಲ.

ಡೆಲಿವರಿ ಚೈನ್

ಒಂದು ಉತ್ಪನ್ನವನ್ನು ಇಷ್ಟಪಟ್ಟು ಆರ್ಡರ್ ಮಾಡಿದ ನಂತರ ಮೊದಲು ಅದರ ಮಾಹಿತಿ ಹತ್ತಿರದ ಅಮಜೋನ್ ವಿತರಣಾ ಕೇಂದ್ರಕ್ಕೆ ತಲುಪುತ್ತದೆ. ಅಲ್ಲಿ ಆ ಉತ್ಪನ್ನವಿದ್ದು ನೀವು ಅಮಜೋನ್‌ನ ಪ್ರೈಮ್ ಸದಸ್ಯನಾಗಿದ್ದಾರೆ ಕೆಲವೊಮ್ಮೆ ಆ ಉತ್ಪನ್ನ ಅದೇ ದಿನವೇ ನಿಮ್ಮ ಕೈ ಸೇರಬಹುದು. ಹತ್ತಿರದ ವಿತರಣಾ ಕೇಂದ್ರರಲ್ಲಿ ಆ ಉತ್ಪನ್ನವಿಲ್ಲದಿದ್ದರೆ, ನಗರದಲ್ಲಿರುವ ಇತರ ವಿತರಣಾ ಕೇಂದ್ರದಲ್ಲಿ ಇದೆಯೇ ಎನ್ನುವುದನ್ನು ಪರೀಕ್ಷಿಸಲಾಗುತ್ತದೆ. ಅಲ್ಲಿಯೂ ಲಭ್ಯ ವಿಲ್ಲದಿದ್ದರೆ ಹತ್ತಿರದಲ್ಲಿರುವವಿರುವ ದೈತ್ಯ ಫೆಸಿಲಿಟಿ ಕೇಂದ್ರಕ್ಕೆ ಸಂದೇಶ ರವನೆಯಾಗುತ್ತದೆ. ಪ್ರತಿ ಫೆಸಿಲಿಟಿ ಕೇಂದ್ರವು ಕನಿಷ್ಟ ಒಂದು ಮಿಲಿಯನ್ ಚದರ ಅಡಿ ಯಷ್ಟು ದೊಡ್ಡದಾಗಿರುತ್ತವೆ.

ಜಗತ್ತಿನಾದ್ಯಂತ ಇರುವ ಸುಮಾರು 175 ಫೆಸಿಲಿಟಿ ಕೇಂದ್ರಗಳಿದ್ದು ಅಲ್ಲಿ 250000 ಉದ್ಯೋಗಿಗಳು ಮತ್ತು ನೂರು ಸಾವಿರಕ್ಕೂ
ಅಧಿಕ ರೋಬೋಟ್‌ಗಳು ಕಾರ್ಯ ನಿರ್ವಹಿಸುತ್ತವೆ. ಮುಂದುವರಿದ ರಾಷ್ಟ್ರಗಳ ಅಮಜೋನ್ ಫೆಸಿಲಿಟಿ ಕೇಂದ್ರಗಳಲ್ಲಿ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಪ್ಯಾಕಿಂಗ್ ಮಾಡಲು ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಇದಕ್ಕೋಸ್ಕರವೇ ಅಮೆಜೋನ್ 2012ರಲ್ಲಿ 700 ಮಿಲಿಯನ್ ಡಾಲರ್ ವ್ಯಯಿಸಿ ಕೀವಾ ರೋಬೋಟಿಕ್ ಎನ್ನುವ ಸಂಸ್ಥೆ
ಯನ್ನು ಖರೀದಿಸಿದೆ. ಇಂತಹ ಫೆಸಿಲಿಟಿ ಕೇಂದ್ರದಲ್ಲಿಉತ್ಪನ್ನವನ್ನು ಅದೇ ಮಾರ್ಗದಲ್ಲಿ ಹೋಗಬೇಕಾದ ಇತರ ಉತ್ಪನ್ನಗಳ ಜೊತೆ ಸಾಗಿಸಲಾಗುತ್ತದೆ. ಈ ಸರಪಳಿಯ ಕೊನೆಯ ಭಾಗವಾಗಿ ವಿತರಣಾ ಸಿಬ್ಬಂದಿ ಆ ಉತ್ಪನ್ನವನ್ನು ಹತ್ತಿರದ ಅಮಜೋನ್ ವಿತರಣಾ ಕೇಂದ್ರದಿಂದ, ನಿಮ್ಮ ಮನೆಗೆ ತಲುಪಿಸುತ್ತಾರೆ.

ಸವಾಲುಗಳು
2018 ರ ಕೊನೆಯ ತ್ರೈ ಮಾಸಿಕದಲ್ಲಿ ಅಮಜೋನ್ ಉತ್ಪನ್ನಗಳನ್ನು ವಿತರಣೆ ಮಾಡಲು ಸುಮಾರು 9 ಬಿಲಿಯನ್ ಡಾಲರ್ ‌ಗಳನ್ನು ಖರ್ಚು ಮಾಡಿದೆ. ಹಿಂದಿನ ತ್ರೈ ಮಾಸಿಕಕ್ಕೆ ಹೊಲಿಸಿದರೆ ಇದು 23 ಪ್ರತಿಶತ ಹೆಚ್ಚಾಗಿದೆ. ಇದರಲ್ಲಿ ಹೆಚ್ಚಿನ ಹಣ ವ್ಯಯ ವಾಗುತ್ತಿರುವುದು ವಿತರಣಾ ಕೇಂದ್ರದಿಂದ ಮನೆ ಮನೆಗೂ ವಸ್ತುಗಳನ್ನು ಸಾಗಿಸಲು ಮತ್ತು ವಿಮಾನದ ಮೂಲಕ ವಸ್ತುಗಳನ್ನು ಸಾಗಿಸಲು. ಅಮೆಜೋನ್ ಈ ಎರಡಕ್ಕೂ ಇತರ ಸಂಸ್ಥೆಗಳ ಮೇಲೆ ಅವಲಂಬಿತವಾಗಿತ್ತು. ಫೆಡ್‌ಎಕ್ಸ್, ಯೂಪಿಎಸ್ ತರಹದ ಸಂಸ್ಥೆಗಳು ಅಮೆಜೋನ್ ನ ವಸ್ತುಗಳನ್ನು ವಿಮಾನದ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಬಳಕೆಯಾಗು ತ್ತಿದ್ದವು. ಅವುಗಳು ಆಗಾಗ ತಮ್ಮ ವಿತರಣಾ ವೆಚ್ಚವನ್ನು ಹೆಚ್ಚಿಸುತ್ತಿದ್ದರಿಂದ ಅಮೆಜೋನ್‌ಗೆ ನಷ್ಟವಾಗುತ್ತಿತ್ತು. ಈ ಸಮಸ್ಯೆ ಯನ್ನು ಬಗೆಹರಿಸಲು ಅಮೆಜೋನ್ ತನ್ನದೇ ಆದ ಪ್ರೈಮ್ ಏರ್ ವೇಸ್ ಅನ್ನು ಆರಂಭಿಸಿದೆ. ಸದ್ಯ ಸುಮಾರು 55 ವಿಮಾನ ಗಳನ್ನು ಹೊಂದಿರುವ ಅಮೆಜೋನ್ ಅಮೇರಿಕದ ಕೆಂಟುಕಿಯಲ್ಲಿ ಸುಮಾರು 100 ವಿಮಾನಗಳನ್ನು ನಿಲ್ಲಿಸಬಹು ದಾದಂತಹ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸಿದೆ. ಅಮೆರಿಕದಲ್ಲಿ ಅಮಜೋನ್ ಆರಂಭಿಸಿರುವ ಅಮೆಜೋನ್ ಫ್ಲೇಕ್ಸ್ ಸಧ್ಯದಲ್ಲೇ ಭಾರತಕ್ಕೆ ಬಂದರೂ ಬರಬಹುದು.

ನಾಣ್ಯದ ಇನ್ನೊಂದು ಮುಖ

ತನ್ನ ವಿತರಣಾ ಕೇಂದ್ರದ ಸಿಬ್ಬಂದಿಯನ್ನು ರೋಬೋಟ್‌ಗಳ ರೀತಿಯಲ್ಲಿ ದುಡಿಸಿಕೊಳ್ಳುತ್ತಿದೆ ಎನ್ನುವ ಆಪಾದನೆ ವಿಶ್ವಾದ್ಯಂತ ಕೇಳಿ ಬರುತ್ತಿದೆ. ವೇಗವಾಗಿ ಕೆಲಸ ಮಾಡುವ ಸಾಮರ್ಥ್ಯವಿಲ್ಲದವರನ್ನು ಅಮೆಜೋನ್ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ತೆಗೆದು ಹಾಕುತ್ತಿದೆ. ಸಿಬ್ಬಂದಿಯ ಕಾರ್ಯ ಕ್ಷಮತೆಯ ಮೇಲೆ ನಿಗಾ ಇಡಲು ಅಮಜೋನ್ ತನ್ನದೇ ಆದ ವಾಚ್ ಸಿದ್ಧಪಡಿಸಿ ಅದನ್ನು ತನ್ನ ನೌಕರರಿಗೆ ನೀಡುತ್ತಿದೆ.

ಅದು ಪ್ರತಿಯೊಬ್ಬ ನೌಕರನು ಎಷ್ಟು ಹೊತ್ತು ಕೆಲಸ ಮಾಡುತ್ತಿದ್ದಾನೆ ಎನ್ನುವು ದನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸುತ್ತಿದೆ. ಇದರಿಂದ ಹೆಚ್ಚಿನ ನೌಕರರು ಉಸಿರು ಕಟ್ಟುವಂತಹ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ.