ಗ್ವಾನಾಜುವಾಟೊ: ಮೆಕ್ಸಿಕೋದ ಉತ್ತರ-ಮಧ್ಯ ರಾಜ್ಯ ಗ್ವಾನಾಜುವಾಟೊದಲ್ಲಿನ ಸಾಲ್ವಾಟಿಯೆರಾ ಪಟ್ಟಣದಲ್ಲಿ ಕ್ರಿಸ್ಮಸ್ ಸೀಸನ್ ಪಾರ್ಟಿಯ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ಮಾಡಿದ್ದು, ಸುಮಾರು 16 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಮತ್ತೊಂದು ಘಟನೆಯಲ್ಲಿ, ಸಾಲಮಾಂಕಾ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆದ್ರೆ, ರಾಜ್ಯ ಪ್ರಾಸಿಕ್ಯೂಟರ್ಗಳು ದಾಳಿಯ ಸಂದರ್ಭಗಳನ್ನು ವಿವರಿಸಲಿಲ್ಲ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಾಲ್ವಾಟಿಯೆರಾದಲ್ಲಿ ಬಂದೂಕುಧಾರಿಗಳು “ಪೊಸಾಡಾ” ಎಂದು ಕರೆಯಲ್ಪಡುವ ಕ್ರಿಸ್ಮಸ್ ಪಾರ್ಟಿಯ ನಂತರ ಈವೆಂಟ್ ಹಾಲ್ನಿಂದ ಹೊರಹೋಗುತ್ತಿದ್ದಾಗ ಜನರ ಮೇಲೆ ದಾಳಿ ಮಾಡಿದ್ದಾರೆ.