Friday, 22nd November 2024

ಐಪಿಎಲ್​ ಮಿನಿ ಹರಾಜು ಆರಂಭ: ಪ್ಯಾಟ್​ ಕಮಿನ್ಸ್​’ಗೆ ಜಾಕ್‌ಪಾಟ್

ದುಬೈ​: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಋತುವಿನ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ದುಬೈನಲ್ಲಿ ಆರಂಭಗೊಂಡಿದೆ.

ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ ಐಪಿಎಲ್​ ಇತಿಹಾಸದಲ್ಲೇ ದಾಖಲೆಯ ಮೊತ್ತ 20 ಕೋಟಿಗೆ ಹೈದರಾಬಾದ್​ ತಂಡಕ್ಕೆ ಮಾರಾಟಗೊಂಡಿದ್ದಾರೆ. ಇದು ಈವರೆಗಿನ ಅತ್ಯಂತ ಹೆಚ್ಚಿನ ಮೊತ್ತಕ್ಕೆ ಹರಾಜದ ಆಟಗಾರ ಎನಿಸಿಕೊಂಡಿದ್ದಾರೆ.

  • ಪ್ಯಾಟ್ ಕಮ್ಮಿನ್ಸ್ (ಮಾರಾಟದ ಬೆಲೆ – ₹20.50 ಕೋಟಿ)
    ಮೂಲ ಬೆಲೆ: ₹2 ಕೋಟಿ
    ತಂಡ: ಸನ್‌ರೈಸರ್ ಹೈದರಾಬಾದ್
    ತಂಡದ ಉಳಿದ ಮೊತ್ತ: ₹5.2Cr
  • ರಚಿನ್ ರವೀಂದ್ರ (ಮಾರಾಟದ ಬೆಲೆ – ₹1.80 ಕೋಟಿ)
    ಮೂಲ ಬೆಲೆ: ₹50 ಲಕ್ಷಗಳು
    ತಂಡ: ಚೆನ್ನೈ ಸೂಪರ್ ಕಿಂಗ್ಸ್
    ತಂಡದ ಉಳಿದ ಮೊತ್ತ: ₹29.6 ಕೋಟಿ
  • ಟ್ರಾವಿಸ್ ಹೆಡ್ (ಮಾರಾಟವಾದ ಬೆಲೆ – ₹6.80 ಕೋಟಿ)
    ಮೂಲ ಬೆಲೆ: ₹2 ಕೋಟಿ
    ತಂಡ: ಸನ್‌ರೈಸರ್ಸ್ ಹೈದರಾಬಾದ್
    ತಂಡದ ಉಳಿದ ಮೊತ್ತ: ₹27.20 ಕೋಟಿ
  • ಹ್ಯಾರಿ ಬ್ರೂಕ್ (ಮಾರಾಟವಾದ ಬೆಲೆ – ₹4.00 ಕೋಟಿ)
    ಮೂಲ ಬೆಲೆ: ₹2 ಕೋಟಿ
    ತಂಡ: ದೆಹಲಿ ಕ್ಯಾಪಿಟಲ್ಸ್
    ತಂಡದ ಉಳಿದ ಮೊತ್ತ: ₹24.95
  • ರೋವ್‌ಮನ್ ಪೊವೆಲ್ (ಮಾರಾಟವಾದ ಬೆಲೆ – ₹7.40 ಕೋಟಿ)
    ಮೂಲ ಬೆಲೆ: ₹1 ಕೋಟಿ
    ತಂಡ: ರಾಜಸ್ಥಾನ್ ರಾಯಲ್ಸ್
    ತಂಡದ ಉಳಿದ ಮೊತ್ತ: ₹7.1 ಕೋಟಿ

ಈ ಹರಾಜಿನ ಮೂಲಕ 10 ತಂಡಗಳಲ್ಲಿ ಒಟ್ಟು 77 ಆಟಗಾರರನ್ನು ಖರೀದಸಲಾಗುತ್ತದೆ. ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ 30 ಸ್ಥಾನಗಳನ್ನು ಮೀಸಲಿಡಲಾಗಿದೆ. ಹಲವು ತಂಡಗಳು ತಲಾ 30 ಕೋಟಿ ರೂ.ಗೂ ಹೆಚ್ಚು ಹಣ ತಮ್ಮ ಖಾತೆಯಲ್ಲಿ ಉಳಿಸಿಕೊಂಡಿವೆ.

ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕುರ್ರಾನ್ (ಪಂಜಾಬ್ ಕಿಂಗ್ಸ್ – ₹18.5 ಕೋಟಿ) ಐಪಿಎಲ್ ಹರಾಜು ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಮೊತ್ತಕೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್​ ನಂತರದ ಸ್ಥಾನದಲ್ಲಿದ್ದಾರೆ. ಗ್ರೀನ್ (ಮುಂಬೈ ಇಂಡಿಯನ್ಸ್ – ₹ 17.50 ಕೋಟಿ), ಉಳಿದಂತೆ ಬೆನ್ ಸ್ಟೋಕ್ಸ್ (ಚೆನ್ನೈ ಸೂಪರ್ ಕಿಂಗ್ಸ್ – ₹ 16.25 ಕೋಟಿ), ಕ್ರಿಸ್ ಮೋರಿಸ್ (ರಾಜಸ್ಥಾನ್ ರಾಯಲ್ಸ್ – ₹ 16.25 ಕೋಟಿ), ಯುವರಾಜ್ ಸಿಂಗ್ ( ರಾಯಲ್ ಚಾಲೆಂಜರ್ಸ್ ಬೆಂಗಳೂರು – ₹ 16 ಕೋಟಿ) ಹೆಚ್ಚಿನ ಮೊತ್ತಕ್ಕೆ ಮಾರಾಟಗೊಂಡಿದ್ದರು.

10 ತಂಡಗಳ ಖಾತೆಯಲ್ಲಿ ಉಳಿದರುವ ಹಣ

ಗುಜರಾತ್ ಟೈಟಾನ್ಸ್ (ಜಿಟಿ) – 38.15 ಕೋಟಿ ರೂ.

ಚೆನ್ನೈ ಸೂಪರ್ ಕಿಂಗ್ಸ್ (CSK) – 31.4 ಕೋಟಿ ರೂ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) – 23.25 ಕೋಟಿ ರೂ.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) – 32.7 ಕೋಟಿ ರೂ.

ಲಕ್ನೋ ಸೂಪರ್ ಜೈಂಟ್ಸ್ (LSG) – 13.15 ಕೋಟಿ ರೂ.

ಮುಂಬೈ ಇಂಡಿಯನ್ಸ್ (MI) – 17.75 ಕೋಟಿ ರೂ.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) – 29.1 ಕೋಟಿ ರೂ.

ರಾಜಸ್ಥಾನ್ ರಾಯಲ್ಸ್ (RR) – 14.5 ಕೋಟಿ ರೂ.

ಸನ್‌ರೈಸರ್ಸ್ ಹೈದರಾಬಾದ್ (SRH) – 34 ಕೋಟಿ ರೂ.

ದೆಹಲಿ ಕ್ಯಾಪಿಟಲ್ಸ್ – 28.95 ಕೋಟಿ ರೂ.