‘ಬರಗಾಲ ಬರಲೆಂದು ರೈತರಿಗೆ ಆಸೆ ಇರುತ್ತೆ. ಬರಗಾಲ ಬಂದ್ರೆ ರೈತರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ’ ಎಂದು ಹೇಳುವ ಮೂಲಕ ಸಚಿವ ಶಿವಾನಂದ ಪಾಟೀಲ್ ಅವರು ರೈತರನ್ನು ಅಪಮಾನಿಸಿದ್ದಾರೆ. ಶಿವಾನಂದ ಪಾಟೀಲ್ ಅವರು ರೈತರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಇದೇ ಮೊದ ಲಲ್ಲ. ಈ ಹಿಂದೆಯೂ ಅವರು ‘ಲವ್ ಕೇಸಲ್ಲಿ ಸತ್ತೋರನ್ನೆಲ್ಲ ರೈತರ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ’ ಎಂದು ಹೇಳಿದ್ದರು.
ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಆತ್ಮವಿಶ್ವಾಸ ತುಂಬಬೇಕಾದ ಸಚಿವರೇ ಈ ರೀತಿಯ ಉಡಾ- ಮಾತುಗಳನ್ನು ಆಡಿದರೆ ರೈತರು ಯಾರ ಮೇಲೆ ಭರವಸೆ ಇಟ್ಟುಕೊಳ್ಳಬೇಕು? ರಾಜ್ಯದಲ್ಲಿರುವ ಬರಪರಿಸ್ಥಿತಿಯ ನಿವಾರಣೆಗೆ ಇಡೀ ಸಂಪುಟವೇ ಗಂಭೀರವಾಗಿ ಚಿಂತನೆ ನಡೆಸಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣ ತರಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಗ್ಯಾರಂಟಿ ಹೊರೆಗಳ ಮಧ್ಯೆಯೂ ಬರ ಪರಿಸ್ಥಿತಿ ಎದುರಿಸಲು ಸರಕಾರ ಸಿದ್ಧವಾಗಿ ನಿಂತಿದೆ.
ಇಡೀ ದೇಶವೇ ಕರ್ನಾಟಕ ಸರಕಾರದ ಕಾರ್ಯವೈಖರಿಯನ್ನು ತಿರುಗಿ ನೋಡುವಂತೆ ಆಗಿದೆ. ಇಂತಹ ಹಲವಾರು ಮೆಚ್ಚುಗೆಗಳನ್ನು ಪಡೆಯುವ ಮಧ್ಯೆಯೇ ಶಿವಾನಂದ ಪಾಟೀಲ್ ಅವರು ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ಕೊಡುವ ಮೂಲಕ ಸರಕಾರದ ಮಾನ-ಮರ್ಯಾದೆ ಹರಾಜು ಹಾಕು ತ್ತಿದ್ದಾರೆ. ‘ಇಂಥ ಸಂವೇದನೆ ಕಳೆದುಕೊಂಡಿರುವ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು. ಅವರನ್ನು ಕೂಡಲೇ ಹುದ್ದೆಯಿಂದ ಪದಚ್ಯುತ ಗೊಳಿಸಬೇಕು’ ಎಂದು ಇಡೀ ರಾಜ್ಯಾದ್ಯಂತ ರೈತರು ಆಗ್ರಹಿಸುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಅವರು ‘ಅನ್ನದಾತರಾದ ರೈತರ ಬಗ್ಗೆ ನಾವು ಎಚ್ಚರಿಕೆ ಯಿಂದ ಮಾತ್ರವಲ್ಲ ಗೌರವದಿಂದ ಮಾತನಾಡಬೇಕು.
ಹಗುರ ಮಾತುಗಳ ಮೂಲಕ ರೈತರಿಗೆ ಅವಮಾನವಾಗುವಂತೆ ಮಾಡಬಾರದು’ ಎಂದು ಶಿವಾನಂದ ಪಾಟೀಲ್ ಅವರಿಗೆ ಬುದ್ಧಿ ಹೇಳಿದ್ದಾರೆ. ಇನ್ನಾದರೂ
ಸಚಿವರು ಸಿಎಂ ಮಾತನ್ನು ಕಿವಿಗೆ ಹಾಕಿಕೊಂಡು ಉಡಾ- ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ರೈತ ಸಮುದಾಯದ ಕ್ಷಮೆ ಕೇಳಬೇಕು. ಸಿಕ್ಕಿರುವ ಅಧಿಕಾರ, ವೇದಿಕೆಗಳನ್ನು ಜನಕಲ್ಯಾಣ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಬೇಕು.