Monday, 6th January 2025

ಸೋರೆನ್‍ಗೆ ಏಳನೇ ಬಾರಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್

ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಲಭ್ಯವಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಸೊರೆನ್ ಅವರು ಪ್ರಕರಣದ ತನಿಖಾಧಿಕಾರಿಗೆ ಅವರ ಆಯ್ಕೆಯ ದಿನಾಂಕ, ಸ್ಥಳ ಮತ್ತು ಸಮಯದ ಬಗ್ಗೆ ತಿಳಿಸುವಂತೆ ಕೇಂದ್ರ ಸಂಸ್ಥೆ ಕೇಳಿದೆ. ಇದರಿಂದಾಗಿ ಅವರ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ದಾಖಲಿಸಬಹುದು ಎಂದು ಮೂಲಗಳು ಉಲ್ಲೇಖಿಸಿವೆ.

ಏಜೆನ್ಸಿಯು ಡಿ.31 ರೊಳಗೆ ಮುಖ್ಯಮಂತ್ರಿಯಿಂದ ಪ್ರತಿಕ್ರಿಯೆಯನ್ನು ಕೇಳಿದೆ. ಅದು ವಿಫಲವಾದರೆ ಮನಿ ಲಾಂಡರಿಂಗ್ ವಿರೋಧಿ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಮುಂದಿನ ಕಾನೂನು ಕ್ರಮವನ್ನು ಪ್ರಾರಂಭಿಸುತ್ತದೆ.

ಇದು ಸೋರೆನ್‍ಗೆ ನೀಡಲಾದ ಏಳನೇ ನೋಟಿಸ್ ಅಥವಾ ಸಮನ್ಸ್ ಆಗಿದೆ ಆದರೆ ಅವರು ಇಡಿ ಮುಂದೆ ಎಂದಿಗೂ ಹಾಜರಾಗಿಲ್ಲ. ಮೊದಲನೆಯದನ್ನು ಕಳೆದ ಆಗಸ್ಟ್ 14 ರಂದು ನೀಡಲಾಯಿತು.

ಜಾರ್ಖಂಡ್‍ನಲ್ಲಿ ರಾಜಕೀಯ ಅನಿಶ್ಚಿತತೆ ಮತ್ತು ಅಶಾಂತಿಯನ್ನು ಸೃಷ್ಟಿಸುವ ಏಕೈಕ ಉದ್ದೇಶದಿಂದ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸ ಲಾಗಿದ್ದು, ದುರುದ್ದೇಶದಿಂದ ಸಮನ್ಸ್ ನೀಡಲಾಗಿದೆ ಎಂದು ಸೊರೆನ್ ಹೈಕೋರ್ಟ್‍ನಲ್ಲಿ ಆರೋಪಿಸಿದ್ದರು.

Leave a Reply

Your email address will not be published. Required fields are marked *