Monday, 6th January 2025

ಮರಳಿನ ಜತೆಗೆ ಸಿಮೆಂಟ್ ಕಂಪನಿ ಬೆಲೆ ಏರಿಕೆಗೆ ಸಿದ್ಧತೆ…!

ವದೆಹಲಿ: ಮನೆ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಗಳು ಮತ್ತೊಮ್ಮೆ ಹೆಚ್ಚಳವಾಗುತ್ತಿದ್ದು, ಮನೆ ಕಟ್ಟುವವರಲ್ಲಿ ಆತಂಕ ಎದುರಾಗಿದೆ.

ಮರಳಿನ ಜೊತೆಗೆ ಸಿಮೆಂಟ್ ಕಂಪನಿಗಳು ಕೂಡ ಬೆಲೆ ಏರಿಕೆಗೆ ಸಿದ್ಧತೆ ನಡೆಸುತ್ತಿದ್ದು, ಗ್ರಾಹಕರು ಈಗ ಮತ್ತೊಮ್ಮೆ ಎದುರಿಸಿರು ಬಿಡುವ ಹಾಗೇ ಆಗಿದೆ.

ಸೋಮವಾರದಿಂದ ಸಿಮೆಂಟ್ ಬೆಲೆಗಳು ಪ್ರತಿ ಚೀಲಕ್ಕೆ 30 ರೂ.ಗಳಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಸದ್ಯ, ಕೆಲವು ಕಂಪನಿಗಳ ಸಿಮೆಂಟ್‌ ಪ್ರತಿ ಐವತ್ತು ಕೆಜಿಗೆ 380 ಇದ್ದು ಸದ್ಯ ಜಾಸ್ತಿ ಆಗಲಿದೆ. ಸದ್ಯ ಪ್ರತಿ ಟನ್‌ ಕಬ್ಬಿಣ್ಣ ಅರವತ್ತು ಸಾವಿರ ಇದ್ದು ಮುಂದಿನ ದಿನಗಳಲ್ಲಿಯೂ ಇದರ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಮರಳು ಸರಬರಾಜಿನ ಮೇಲೂ ಸ್ವಲ್ಪ ಪರಿಣಾಮ ಬೀರಿದೆ.

ಇದರಿಂದಾಗಿ, ಮುಂದಿನ ದಿನಗಳಲ್ಲಿ ಮರಳಿನ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗ ಮಾರುಕಟ್ಟೆಯಲ್ಲಿ ಬೇಡಿಕೆಯೂ ಕ್ರಮೇಣ ಪ್ರಾರಂಭ ವಾಗಿದೆ. ಮರಳಿನ ಜೊತೆಗೆ ಸಿಮೆಂಟ್ ಕಂಪನಿಗಳು ಕೂಡ ಬೆಲೆ ಏರಿಕೆಗೆ ಸಿದ್ಧತೆ ನಡೆಸುತ್ತಿವೆ.

ಕಂಪನಿಗಳು ತಮ್ಮ ವಿತರಕರಿಗೆ ಬೆಲೆಗಳನ್ನು ಹೆಚ್ಚಿಸಲು ಕೇಳಿಕೊಂಡಿವೆ ಮತ್ತು ಸೋಮವಾರದಿಂದ ಸಿಮೆಂಟ್ ಬೆಲೆಗಳು ಪ್ರತಿ ಚೀಲಕ್ಕೆ 30 ರೂ.ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರ ಮೂಲಗಳು ತಿಳಿಸಿವೆ. ಪ್ರಸ್ತುತ, ಸಿಮೆಂಟ್ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಚೀಲಕ್ಕೆ 280-300 ರೂ. ಇದೆ.

ಕಬ್ಬಿಣದ ಅದಿರಿನ ಬೆಲೆಗಳ ಹೆಚ್ಚಳವು ಬಾರ್ ಗಳ ಬೆಲೆಗಳ ಮೇಲೂ ಪರಿಣಾಮ ಬೀರಿದೆ. ಚಿಲ್ಲರೆ ವ್ಯಾಪಾರದಲ್ಲಿ, ಬಾರ್ ಗಳು ಪ್ರತಿ ಟನ್ ಗೆ 55,000 ರೂ.ಗೆ ಮಾರಾಟವಾಗುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಅವು 56,000 ರೂ.ಗೆ ಮಾರಾಟವಾಗುತ್ತಿವೆ.

Leave a Reply

Your email address will not be published. Required fields are marked *