ನವದೆಹಲಿ: ಬಾಲಿವುಡ್ನ ನಟ ಶಾರುಖ್ಖಾನ್ ಗುರುವಾರ ‘ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ ಸ್ವೀಕರಿಸಿದ್ದಾರೆ.
ನವದೆಹಲಿಯಲ್ಲಿನ ತಾಜ್ ಪ್ಯಾಲೇಸ್ ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು, ಶಾರುಖ್ ಈ ಗೌರವವನ್ನು ಅತೀವ ಸಂತಸದಿಂದ ಸ್ವೀಕರಿಸಿದ್ದಾರೆ.
ಏಳು ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಮನರಂಜನೆ, ವ್ಯಾಪಾರ, ಕ್ರೀಡೆ, ಯೂತ್ ಐಕಾನ್, ರೈಸಿಂಗ್ ಸ್ಪೋರ್ಟ್ಸ್ ಸ್ಟಾರ್, ಸಾಮಾಜಿಕ ಬದಲಾವಣೆ ಮತ್ತು ಹವಾಮಾನ ವಾರಿಯರ್ಸ್ ನಲ್ಲಿ ಗಮನಾರ್ಹ ಕೊಡುಗೆ ನೀಡಿದವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು.
‘ಹಲವು ವರ್ಷಗಳಿಂದ ನಾನು ಕಷ್ಟಗಳನ್ನು ಎದುರಿಸಿದ್ದೇನೆ. ಕೊವಿಡ್ ಸಮಯದಲ್ಲಿ ನನ್ನ ಹಲವು ಸಿನೆಮಾಗಳು ಪ್ಲಾಪ್ ಆದವು. ಬಹಳಷ್ಟು ಸಿನೆಮಾ ವಿಮರ್ಶ ಕರು, ವಿಶ್ಲೇಷಕರು ನನ್ನ ಬಗ್ಗೆ ನೆಗೆಟಿವ್ ಬರೆಯಲು ಶುರು ಮಾಡಿದ್ದರು. ನನ್ನ ಬದುಕು ಅಂತ್ಯ ವಾಯ್ತು ಎಂದೆಲ್ಲಾ ಬರೆದಿದ್ದರು. ಆದರೆ, ನಾನು ಆ ಬಗ್ಗೆ ಜಾಸ್ತಿ ತಲೆಕೆಡಿಕೊಳ್ಳದೇ ತಾಳ್ಮೆಯಿಂದ ಕಾದೆ ನಂತರ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಿಸಿಕೊಂಡೆ. ಇದರಿಂದ ನಾನು ಶಾಂತವಾಗಿರಬೇಕು, ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದನ್ನು ಕಲಿತೆ. ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ ಆದರೆ ಭರವಸೆ ಎನ್ನುವುದು ತುಂಬಾ ಮುಖ್ಯ’ ಎಂದರು.
ಈ ಪ್ರಶಸ್ತಿಯನ್ನು ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಪುತ್ರರಾದ ಆರ್ಯನ್ ಮತ್ತು ಅಬ್ರಾಮ್ ಖಾನ್ಗೆ ಅರ್ಪಿಸುತ್ತೇನೆ ಎಂದರು. ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.