Sunday, 5th January 2025

ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಕಾರ್ಯಕ್ರಮ: ಪ್ರಧಾನಿ ಭೇಟಿ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಮುರುಗನ್ ಅವರ ಅಧಿಕೃತ ನಿವಾಸವಾದ 1 ಕಾಮರಾಜ್ ಲೇನ್’ನಲ್ಲಿ ಜ.14ರಂದು ಬೆಳಿಗ್ಗೆ 10 ಗಂಟೆಗೆ ಪೊಂಗಲ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ತಮಿಳು ಹೊಸ ವರ್ಷದ ಪುಟಾಂಡು ಆಚರಿಸಲು ಪ್ರಧಾನಿ ಮೋದಿ ಮುರುಗನ್ ಮನೆಗೆ ಭೇಟಿ ನೀಡಿದ್ದರು. ಪುತಾಂಡುವನ್ನ ಪ್ರಪಂಚದಾದ್ಯಂತ ತಮಿಳು ಜನರು ಉತ್ಸಾಹದಿಂದ ಆಚರಿಸುತ್ತಾರೆ.

ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲೂ ತಮಿಳು ಕಾಶಿ ಸಂಗಮವನ್ನ ಆಯೋಜಿಸಲಾಗಿದೆ. ಹೊಸ ಸಂಸತ್ ಕಟ್ಟಡದಲ್ಲಿ ಸೆಂಗೋಲ್ ಸಹ ಸ್ಥಾಪಿಸಲಾಗಿದೆ. ಪ್ರಧಾನಿಯವರು ಹಲವು ಸಂದರ್ಭಗಳಲ್ಲಿ ತಮಿಳನ್ನ ಜಗತ್ತಿನ ಅತ್ಯಂತ ಹಳೆಯ ಭಾಷೆ ಎಂದು ಕರೆದು ಹೊಗಳಿ ದ್ದಾರೆ. ಈ ವರ್ಷವೂ ತಮಿಳುನಾಡು ಮತ್ತು ಲಕ್ಷದ್ವೀಪ ಪ್ರವಾಸ ಆರಂಭಿಸಿದ್ದಾರೆ.

ಪ್ರಧಾನಿ ಮೋದಿ ದಕ್ಷಿಣ ಭಾರತದ ಪ್ರವಾಸದೊಂದಿಗೆ ಹೊಸ ವರ್ಷವನ್ನ ಪ್ರಾರಂಭಿಸಿದರು. ಪ್ರಧಾನಿ ಮೋದಿಯವರ ಪ್ರವಾಸದಲ್ಲಿ ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳಕ್ಕೆ ಭೇಟಿ ನೀಡಲಾಗಿತ್ತು. ಅವರು ಜ.2 ಮತ್ತು 3 ರಂದು ಈ ಪ್ರವಾಸವನ್ನು ಮಾಡಿದರು. ಅವರು ಜ.2 ರಂದು ತಮಿಳುನಾಡಿನ ತಿರುಚಿರಾಪಳ್ಳಿ ತಲುಪಿದರು, ಅಲ್ಲಿ ಅವರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಿದರು.

ಇದಾದ ಬಳಿಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

Leave a Reply

Your email address will not be published. Required fields are marked *