Sunday, 5th January 2025

ನಡು ರಸ್ತೆಯಲ್ಲಿ ಲಾರಿ ನಿಲ್ಲಿಸಿ ನಮಾಜ್: ಖಂಡನೆ, ಆಕ್ರೋಶ

ಗುಜರಾತ: ಗುಜರಾತಿನ ಬನಸ್ಕಾಂತನಲ್ಲಿ ವ್ಯಕ್ತಿಯೋರ್ವ ನಡು ರಸ್ತೆಯಲ್ಲಿ ಲಾರಿ ನಿಲ್ಲಿಸಿ ನಮಾಜ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೃಹತ್ ಲಾರಿ ಡ್ರೈವರ್ ರಸ್ತೆ ಮಧ್ಯದಲ್ಲಿ ಮಾಹನ ನಿಲ್ಲಿಸಿ, ಅದರ ಎದುರು ನಮಾಜ್ ಮಾಡಿದ್ದಾನೆ. ಇದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿದೆ. ರಸ್ತೆ ಪಕ್ಕದಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಜಾಗ ಇದ್ದರೂ ಸಹ, ರಸ್ತೆ ಮಧ್ಯದಲ್ಲಿಯೇ ಲಾರಿ ನಿಲ್ಲಿಸಿ ಪ್ರಾರ್ಥನೆ ಸಲ್ಲಿಸಿರುವುದು ಆಕ್ರೋಶಕ್ಕೆ ಕಾರಣ ಆಗಿದೆ.

ಇದು ಪ್ರಾರ್ಥನೆಯೇ ಅಥವಾ ತಮ್ಮ ಧರ್ಮದ ಶಕ್ತಿ ಪ್ರದರ್ಶನವೋ? ಮುಸ್ಲಿಂ ರಾಷ್ಟ್ರಗಳು ಸಹ ಇಂತಹ ನಡೆಗಳನ್ನು ಸಹಿಸುವುದಿಲ್ಲ. ಆದರೆ, ಇದರ ವಿರುದ್ಧ ಮಾತನಾಡಿದ್ದಕ್ಕಾಗಿ ನಮ್ಮನ್ನು ಇಸ್ಲಾಂ ವಿರೋಧಿ ಎನ್ನುತ್ತಾರೆ ಎಂದು ವ್ಯಕ್ತಿಯೊಬ್ಬರು ಖಂಡಿಸಿದ್ದಾರೆ.

Leave a Reply

Your email address will not be published. Required fields are marked *