Sunday, 5th January 2025

ಬ್ಯಾಂಕುಗಳಿಗೆ ರಾಹುಲ್ ದ್ರಾವಿಡ್​ರ ಗುಣ ಅಳವಡಿಸಿಕೊಳ್ಳುವಂತೆ ಕರೆ

ಮುಂಬೈ: ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬ್ಯಾಂಕುಗಳಿಗೆ ರಾಹುಲ್ ದ್ರಾವಿಡ್​ರ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ಬ್ಯಾಂಕ್ ಮಾತ್ರವಲ್ಲ, ಎನ್​ಬಿಎಫ್​ಸಿ ಮತ್ತಿತರ ಹಣಕ್ಷೇತ್ರದ ಸರ್ವರಿಗೂ ಅನ್ವಯಿಸಿ ಅವರು ಸಲಹೆ ನೀಡಿದ್ದಾರೆ.

ರಾಹುಲ್ ದ್ರಾವಿಡ್ ಹೆಸರನ್ನು ಕ್ರಿಕೆಟ್ ಪ್ರೇಮಿಗಳಲ್ಲದವರೂ ಕೇಳಿದ್ದೇ ಇರುತ್ತಾರೆ. ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ದಿ ವಾಲ್, ಮಿಸ್ಟರ್ ಡಿಪೆಂಡಬಲ್. ಇನ್ನಿಂಗ್ಸ್ ಕಟ್ಟುವುದರಲ್ಲಿ ನಿಸ್ಸೀಮ. ರಕ್ಷಣಾತ್ಮಕವಾಗಿ ಆಡಿ ಎದುರಾಳಿ ಬೌಲರ್​ಗಳನ್ನು ನಿಸ್ತೇಜ ಗೊಳಿಸಬಲ್ಲ ಚಾಣಾಕ್ಷ್ಯ ಆಟಗಾರ. ಆಟದ ಮೈದಾನದಲ್ಲಿ, ಅದರಲ್ಲೂ ಬ್ಯಾಟಿಂಗ್ ಮಾಡುವಾಗ ಅವರದ್ದು ಅತಿ ವಿರಳದ ಏಕಾಗ್ರತೆ. ಎಂಥ ಒತ್ತಡದಲ್ಲೂ ಸಂಯಮ ಕಳೆದುಕೊಳ್ಳುವುದಿಲ್ಲ, ಉದ್ವೇಗಗೊಳ್ಳುವುದಿಲ್ಲ.

ಬ್ಯಾಂಕುಗಳು ರಾಹುಲ್ ದ್ರಾವಿಡ್ ಬ್ಯಾಟಿಂಗ್​ನಂತೆ ದೀರ್ಘಾವಧಿ ಆಡಬೇಕು ಎಂದಿದ್ದಾರೆ. ಶಕ್ತಿಕಾಂತ ದಾಸ್ ಕ್ರಿಕೆಟ್ ಅಭಿಮಾನಿಯಾಗಿದ್ದು, ಸಾಮಾನ್ಯ ವಾಗಿ ತಮ್ಮ ಭಾಷಣದ ವೇಳೆ ಕ್ರಿಕೆಟ್​ನ ನಿದರ್ಶನ ನೀಡುತ್ತಿರುತ್ತಿರುವುದುಂಟು.

ಬ್ಯಾಂಕುಗಳು ಕೇವಲ ಕಾರ್ಪೊರೇಟ್ ಲೋನ್ ಮತ್ತು ಅನ್​ಸೆಕ್ಯೂರ್ಡ್ ಲೋನ್​ಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಈ ಪರಿಸ್ಥಿತಿ ಅಪಾಯ ಕಾರಿಯಾಗಿರುತ್ತದೆ. ಇದು ನಿಯಂತ್ರಣವಾಗಬೇಕು. ಗೃಹಸಾಲ, ವಾಹನ ಸಾಲ ಇತ್ಯಾದಿ ಎಲ್ಲಾ ರೀತಿಯ ಲೋನ್ ಪ್ರಾಡಕ್ಟ್​ಗಳ ಮಿಶ್ರಣವನ್ನು ಬ್ಯಾಂಕುಗಳು ಹೊಂದಿರಬೇಕು ಎಂದು ಆರ್​ಬಿಐ ಗವರ್ನರ್ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *