Sunday, 5th January 2025

“ಪ್ರಾಣ ಪ್ರತಿಷ್ಠಾ” ನೇರ ಪ್ರಸಾರಕ್ಕೆ ಅನುಮತಿ ತಿರಸ್ಕರಿಸುವಂತಿಲ್ಲ: ಸುಪ್ರೀಂ ಸ್ಪಷ್ಟನೆ

ನವದೆಹಲಿ: ರಾಮ ಮಂದಿರ ನಿರ್ಮಾಣದ ನೇರ ಪ್ರಸಾರಕ್ಕೆ ಅನುಮತಿ ತಿರಸ್ಕರಿಸುವಂತಿಲ್ಲ ಅಂತ ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ.

ಅಯೋಧ್ಯೆಯಲ್ಲಿರುವ ಭಗವಾನ್ ರಾಮನ “ಪ್ರಾಣ ಪ್ರತಿಷ್ಠಾ” ದ ನೇರ ಪ್ರಸಾರವನ್ನು ತಮಿಳುನಾಡಿನಾದ್ಯಂತದ ದೇವಾಲಯಗಳಲ್ಲಿ ನಿಷೇಧಿಸಿದ ರಾಜ್ಯ ಸರ್ಕಾರದ ಮೌಖಿಕ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರ ಮತ್ತು ಇತರರಿಗೆ ನೋಟಿಸ್ ನೀಡಿದೆ.

ಅಯೋಧ್ಯೆಯಲ್ಲಿ ಭಗವಾನ್ ರಾಮನ “ಪ್ರಾಣ ಪ್ರತಿಷ್ಠಾ” ಸಂದರ್ಭದಲ್ಲಿ ಪೂಜೆ, ಅರ್ಚನೆ, ಅನ್ನದಾನ, ಭಜನೆಗಳ ನೇರ ಪ್ರಸಾರಕ್ಕೆ ಯಾವುದೇ ನಿರ್ಬಂಧ ವಿಲ್ಲ ಮತ್ತು ಅರ್ಜಿಯು ಕೇವಲ ರಾಜಕೀಯ ಪ್ರೇರಿತವಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

ಅಲ್ಪಸಂಖ್ಯಾತ ಸಮುದಾಯದ ಜನರು ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಎಲ್ಲಿಯೂ ಶ್ರೀ ರಾಮ್ ದೇವಾಲಯದ ಪ್ರತಿಷ್ಠಾಪನೆಗೆ ಸಂಬಂಧಿಸಿದ ಯಾವುದೇ ಸಮಾರಂಭಕ್ಕೆ ಅನುಮತಿ ನಿರಾಕರಿಸದಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಶ್ರೀ ರಾಮ್ ದೇವಾಲ ಯದ ಪ್ರತಿಷ್ಠಾಪನಾ ಸಮಾರಂಭದ ನೇರ ಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.

Leave a Reply

Your email address will not be published. Required fields are marked *