Tuesday, 26th November 2024

ವಿಸ್ತರಿಸಿದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್; ಬೆಂಗಳೂರಿನ ಜಯನಗರ ಹಾಗೂ ಮಲ್ಲೇಶ್ವರಂನಲ್ಲಿ ಎರಡು ಹೊಸ ಶಾಖೆಗಳು

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್(‘Ujjivan SFB’/Bank’), ಬೆಂಗಳೂರಿನ ಜಯನಗರ ಹಾಗೂ ಮಲ್ಲೇಶ್ವರಂನಲ್ಲಿ ಎರಡು ಹೊಸ ಶಾಖೆಗಳನ್ನು ತೆರೆದಿರುವುದಾಗಿ ಘೋಷಿಸಿದೆ. ಡಿಜಿಟಲ್ ಬ್ಯಾಂಕಿಂಗ್‌ಗೆ ಆದ್ಯತೆ ನೀಡಿ, ಆದಾಯ ವಾಹಿನಿಗಳನ್ನು ವೈವಿಧ್ಯಗೊಳಿಸುವ ಸಂದರ್ಭ ದಲ್ಲೇ, ವೈವಿಧ್ಯಮಯವಾದ ಹಾಗೂ ಸ್ಥಿರವಾದ ಗ್ರಾಹಕ ಬೇಸ್ ನಿರ್ಮಾಣ ಮಾಡುವುದು ಬ್ಯಾಂಕ್‌ನ ಗುರಿಯಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಇರುವ ತನ್ನ 25 ಶಾಖೆಗಳ ಮೂಲಕ ಉಜ್ಜೀವನ್ SFB 4 ಲಕ್ಷಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

ಉಜ್ಜೀವನ್ SFB, ತನ್ನ ವ್ಯಾಪಕವಾದ ಶಾಖೆ ಮತ್ತು ಡಿಜಿಟಲ್ ನೆಟ್‌ವರ್ಕ್‌ಗಳ ಮೂಲಕ ಆಕರ್ಷಕ ಬಡ್ಡಿದರಗಳಲ್ಲಿ ಅವಧಿ ಠೇವಣಿಗಳನ್ನು ಒದಗಿಸು ತ್ತಿದೆ. ಅತ್ಯಧಿಕ ನಿಶ್ಚಿತ ಠೇವಣಿ ಬಡ್ಡಿದರಗಳನ್ನು ಒದಗಿಸುವ ಬ್ಯಾಂಕ್, 12 ತಿಂಗಳ ಅವಧಿ ಮತ್ತು 80 ವಾರಗಳ(560 ದಿನಗಳು) ಅವಧಿಗೆ ಸಾಮಾನ್ಯ, NRE ಮತ್ತು NRO ಗ್ರಾಹಕರಿಗೆ 8.25% ನೀಡಿದರೆ, ಹಿರಿಯ ನಾಗರಿಕರಿಗೆ 8.75% ನೀಡುತ್ತದೆ. ಇದೇ ಅವಧಿಗೆ ನಾನ್-ಕಾಲಬಲ್ Platina FD# ದ ಬಡ್ಡಿ ದರವು 8.45% ಆಗಿದೆ.

ಉಜ್ಜೀವನ್ SFB ಒದಗಿಸುವ ಉಳಿತಾಯ ಖಾತೆಯು ಮ್ಯಾಕ್ಸಿಮ ಮತ್ತು ಪ್ರಿವಿಲೆಜ್(Maxima & Privilege) ಉಳಿತಾಯ ಖಾತೆಯನ್ನು ಒಳಗೊಂಡಿದ್ದು, ಇದು ವಾರ್ಷಿಕವಾಗಿ 7.5%ವರೆಗೆ ಬಡ್ಡಿದರ *, ಯಾವುದೇ ಏಟಿಎಮ್‌ನಲ್ಲಿ ಅನಿಯಮಿತ ಉಚಿತ ವ್ಯವಹಾರಗಳು, ನೆಟ್‌ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್‌ ಮೂಲಕ ಅಧಿಕ ನಿಧಿ ವರ್ಗಾವಣೆ, ಅಧಿಕ ನಗದು ವ್ಯವಹಾರಗಳು ಮತ್ತು ಹಿಂಪಡೆಯುವಿಕೆ ಮಿತಿಗಳನ್ನು ಒದಗಿಸುತ್ತದೆ.

ಹಿರಿಯ ನಾಗರಿಕರ ಖಾತೆ, ಮಹಿಳೆಯರಿಗಾಗಿ ಗರಿಮ ಖಾತೆ, ಹಾಗೂ NR ಖಾತೆಗಳು ಮತ್ತು ಪರಿಹಾರಗಳನ್ನೂ ಕೂಡ ಅದು ಒದಗಿಸುತ್ತದೆ. ಬ್ಯಾಂಕ್‌ನ Maxima, Privilege, & Business Edge ಚಾಲ್ತಿ ಖಾತೆಗಳು, ಪರಿವರ್ತನೀಯ ನಗದು ಠೇವಣಿ ಮಿತಿಗಳು, ವೈಯಕ್ತೀಕೃತಗೊಳಿಸಬಹುದಾದ POS ಕೊಡುಗೆಗಳು ಹಾಗೂ BusiMoni OD ಮತ್ತು Financial Bank Guarantee ಮೂಲಕ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಒದಗಿಸುತ್ತದೆ. ಉಜ್ಜೀವನ್ SFB, ಹಿರಿಯ ನಾಗರಿಕರು ಹಾಗೂ ಭಿನ್ನಸಾಮರ್ಥ್ಯವಿರುವವರಿಗೆ ವಿಶೇಷವಾಗಿ ಮನೆಬಾಗಿಲಿನ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ.

ವೈವಿಧ್ಯಮಯವಾದ ಗ್ರಾಹಕ ಅಗತ್ಯಗಳನ್ನು ಪೂರೈಸುವ ಸಲುವಾಗಿ ಉಜ್ಜೀವನ್ SFB, ಮೈಕ್ರೋ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗಾಗಿ, ಆಸ್ತಿಯ ವಿರುದ್ಧ ಸಾಲಗಳು ಮತ್ತು ಕಾರ್ಯಬಂಡವಾಳ ಹಣಕಾಸು ನೆರವು ಒಳಗೊಂಡಂತೆ, ರೂ.10 ಲಕ್ಷದಿಂದ ರೂ. 10 ಕೋಟಿಯವರೆಗೆ ವ್ಯಾಪಾರ ಸಾಲಗಳನ್ನು ಒದಗಿಸುತ್ತದೆ. ಗೃಹನಿರ್ಮಾಣ/ಖರೀದಿ, ಗೃಹ ಸುಧಾರಣೆ ಮತ್ತು ಸಂಘಟಿತ ಸಾಲಗಳು(ನಿವೇಶನ ಖರೀದಿ ಮತ್ತು ನಿರ್ಮಾಣ)ಕ್ಕಾಗಿ ಬ್ಯಾಂಕ್, ಕೈಗೆಟುಕುವ್ಬ ಬಡ್ಡಿದರಗಳಲ್ಲಿ ರೂ. 5 ಲಕ್ಷದಿಂದ ರೂ. 75 ಲಕ್ಷದವರೆಗೆ ಗೃಹಸಾಲವನ್ನೂ ನೀದುತ್ತದೆ. ಇದರ ಜೊತೆಗೆ, ರೂ.26,000ದಿಂದ ರೂ.2.75 ಲಕ್ಷದವರೆಗೆ ದ್ವಿ-ಚಕ್ರ ವಾಹನ ಸಾಲಗಳನ್ನೂ ಬ್ಯಾಂಕ್ ಒದಗಿಸುತ್ತದೆ.

ಪರಿಚಯದ ಸಂದರ್ಭದಲ್ಲಿ ಮಾತನಾಡುತ್ತಾ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಮ್‌ಡಿ ಮತ್ತು ಸಿಇಒ ಶ್ರೀ ಇಟ್ಟಿರ ಡೇವಿಸ್, “ಜಯನಗರ ಹಾಗೂ ಮಲ್ಲೇಶ್ವರಂನಲ್ಲಿ ನಮ್ಮ ಮುಂಬರುತ್ತಿರುವ ಶಾಖೆಗಳ ಪ್ರಾರಂಬವನ್ನು ಘೋಷಿಸುವುದಕ್ಕೆ ನಮಗೆ ಹರ್ಷವಾಗುತ್ತಿದೆ. ಉಳಿತಾಯ ಹಾಗೂ ಠೇವಣಿಗಳ ಮೇಲೆ ಸ್ಪರ್ಧಾತ್ಮಕವಾದ ಬಡ್ಡಿದರಗಳೂ ಒಳಗೊಂಡಂತೆ, ವೈಯಕ್ತೀಕೃತಗೊಳಿಸಲಾದ ಬ್ಯಾಂಕಿಂಗ್ ಉತ್ಪನ್ನಗಳು ಹಾಗೂ ಸೇವೆಗಳ ನಮ್ಮ ವಿಸ್ತೃತ ಪಟ್ಟಿಯು, ಬೆಂಗಳೂರಿನ ಜನರ ಜೀವನದ ಮೇಲೆ ಮಹತ್ತರವಾದ ಪ್ರಭಾವ ಬೀರಲು ನಮಗೆ ನೆರವಾಗುತ್ತದೆ. ಈ ವಿಸ್ತರಣೆಯು, ಮುಂಚೂಣಿ ಜನ-ಮಾರುಕಟ್ಟೆ ಬ್ಯಾಂಕ್ ಆಗುವ ನಮ್ಮ ಧ್ಯೇಯೋದ್ದೇಶಕ್ಕೆ ಅನುಗುಣವಾಗಿದೆ. “ ಎಂದು ಹೇಳಿದರು.

*ರೂ. 5 ಲಕ್ಷ ಮತ್ತು ಅದಕ್ಕೆ ಮೇಲ್ಪಟ್ಟ ಉಳಿತಾಯ ಬ್ಯಾಲೆನ್ಸ್‌ಗೆ ಅನ್ವಯವಾಗುತ್ತದೆ.

**ಪ್ರತಿ ತಿಂಗಳಿಗೆ 4 ಉಚಿತ ಮನೆಬಾಗಿಲಿನ ಸೇವೆಗಳು.

#Platina FD, ರೂ. 1 ಕೋಟಿಯಿಂದ ಮೇಲ್ಪಟ್ಟು ರೂ. 2 ಕೋಟಿಗಿಂತ ಕಡಿಮೆ ಮೊತ್ತದವರೆಗಿನ ಠೇವಣಿಗಳಿಗೆ ಅನ್ವಯವಾಗುತ್ತದೆ.