Monday, 6th January 2025

ಬಾಕ್ಸರ್ ಮೇರಿ ಕೋಮ್ ನಿವೃತ್ತಿ

ನವದೆಹಲಿ: ಬಾಕ್ಸರ್ ಮೇರಿ ಕೋಮ್ ನಿವೃತ್ತಿ ಘೋಷಿಸಿದ್ದಾರೆ. ಪುರುಷ ಮತ್ತು ಮಹಿಳಾ ಬಾಕ್ಸರುಗಳಿಗೆ 40 ವರ್ಷ ವಯಸ್ಸಿನವರೆಗೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ.

ನನಗೆ ಇನ್ನೂ ಬಾಕ್ಸಿಂಗ್‌ ಆಡಲು ಆದೆ ಇದೆ. ಆದರೆ ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ, ನಾನು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ’ ಎಂದು ಮೇರಿ ಕೋಮ್ ತಮ್ಮ ನಿವೃತ್ತಿಯ ಬಗ್ಗೆ ಹೇಳಿದರು.

ನಾನು ಹೆಚ್ಚು ಆಡಲು ಬಯಸುತ್ತೇನೆ. ಆದರೆ ನನ್ನನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ. ನಾನು ನಿವೃತ್ತಿ ಹೊಂದಬೇಕಾಗಿದೆ ಮತ್ತು ನಾನು ಅದನ್ನು ಮಾಡುತ್ತಿದ್ದೇನೆ. ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಹೇಳಿದ್ದಾರೆ.

ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಮೇರಿ ಪಾತ್ರರಾಗಿದ್ದಾರೆ.

ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಆಗಿದ್ದರು.

Leave a Reply

Your email address will not be published. Required fields are marked *