Monday, 6th January 2025

ಬೆಂಗಳೂರಿನಲ್ಲಿ ಫ್ಲಿಪ್ ಕಾರ್ಟ್ ನಿಂದ 3 ಗಂಟೆಯೊಳಗೆ ತಾಜಾ ಹೂವುಗಳ ವಿತರಣೆ ಸೇವೆ ಆರಂಭ

• ದೇಶಾದ್ಯಂತ 450 ಸ್ಥಳಗಳಲ್ಲಿ ಈ ಸೇವೆ ಲಭ್ಯ
• ಬೆಂಗಳೂರು, ಚಂಡೀಗಢ, ಫರೀದಾಬಾದ್, ಗುರುಗ್ರಾಮ, ಹೈದ್ರಾಬಾದ್, ಜೈಪುರ, ಲಕ್ನೋ, ಮುಂಬೈ, ನವದೆಹಲಿ, ನೋಯ್ಡಾ ಮತ್ತು ಪಾಟ್ನಾ ನಗರಗಳಲ್ಲಿ ಸೇವೆ
• ಈ ಹೂವುಗಳ ಬೆಲೆ 249 ರೂಪಾಯಿಗಳಿಂದ ಆರಂಭ
• ಗುಲಾಬಿ, ಆರ್ಚಿಡ್ಸ್, ಕಾರ್ನೇಶನ್ಸ್, ಬೊಕೆ, ಬಾಕ್ಸ್ ಲಭ್ಯ

ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಕೇವಲ 3 ಗಂಟೆಗಳಲ್ಲೇ ಅತ್ಯುತ್ತಮ ದರ್ಜೆಯ ತಾಜಾ ಹೂವುಗಳನ್ನು ತಲುಪಿಸುವ ಸೇವೆಯನ್ನು ಆರಂಭಿಸಿದೆ. ದೇಶಾದ್ಯಂತ 450+ ಪಿನ್ ಕೋಡ್ ಗಳಲ್ಲಿ ಫ್ಲಿಪ್ ಕಾರ್ಟ್ ಜಾಲದ ಮೂಲಕ ಈ ತಾಜಾ ಹೂವುಗಳನ್ನು ತಲುಪಿಸಲಿದೆ. ಎಲ್ಲೆಡೆ `ರೋಸ್ ಡೇ’ ಮತ್ತು ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನಾಚರಣೆ) ಆಚರಣೆಯ ಸಂಭ್ರಮ ಹೆಚ್ಚಾಗಿದೆ.

ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಆರ್ಡರ್ ಮಾಡಿದರೆ ಫ್ಲಿಪ್ ಕಾರ್ಟ್ 3 ತಾಜಾ ಹೂವುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸು ತ್ತದೆ. ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ಬಳಕೆಯ ಶಕ್ತಿಶಾಲಿ ಫ್ಲಿಪ್ ಕಾರ್ಟ್ ಲಾಜಿಸ್ಟಿಕ್ಸ್ ಜಾಲವನ್ನು ಬಳಸಿಕೊಂಡು ಬೆಂಗಳೂರು, ಚಂಡೀಗಢ, ಫರೀದಾ ಬಾದ್, ಗುರುಗ್ರಾಮ, ಹೈದ್ರಾಬಾದ್, ಜೈಪುರ, ಲಕ್ನೋ, ಮುಂಬೈ, ನವದೆಹಲಿ, ನೋಯ್ಡಾ ಮತ್ತು ಪಾಟ್ನಾದಂತಹ ನಗರಗಳಲ್ಲಿ ವೇಗವಾಗಿ ನಿಮ್ಮ ಮನೆ ಬಾಗಿಲಿಗೆ ತಂದು ತಲುಪಿಸಲಿದೆ.

ಶತಮಾನಗಳಿಂದಲೂ ಹೂವುಗಳು ನಮ್ಮ ಜೀವನದಲ್ಲಿ ಧನಾತ್ಮಕವಾದ ಸಾಂಸ್ಕೃತಿಕ ಪಾತ್ರ ವಹಿಸಿವೆ. ಆದ್ದರಿಂದ ನಮ್ಮಲ್ಲಿ ಹೆಚ್ಚಿನವರು “ಹೂವು ಗಳೊಂದಿಗೆ ಹೇಳುವುದು’’ ಎಂದು ನಂಬುವುದರಲ್ಲಿ ಆಶ್ಚರ್ಯವೇನಿಲ್ಲ. ವಿಶೇಷವಾದ ರೀತಿಯಲ್ಲಿ ಯಾರಿಗಾದರೂ ಉಡುಗೊರೆಯಾಗಿ ನೀಡುತ್ತಿರಲಿ ಅಥವಾ ನಿಮಗಾಗಿ ಆರ್ಡರ್ ಮಾಡುತ್ತಿರಲಿ, ಹೀಗಾಗಿ ಹೂವುಗಳು ಎಂದಿಗೂ ಶೈಲಿಯಿಂದ ಹೊರಗುಳಿಯುವುದಿಲ್ಲ.

~ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯೊಳಗೆ ಆರ್ಡರ್ ಮಾಡಿದರೆ ಫ್ಲಿಪ್ ಕಾರ್ಟ್ 3 ಗಂಟೆಗಳಲ್ಲಿ ಡೆಲಿವರಿ ಮಾಡುತ್ತದೆ. ಗ್ರಾಹಕರು ತಮ್ಮ ನೆಚ್ಚಿನ ಅತ್ಯುತ್ಕೃಷ್ಟ ಗುಣಮಟ್ಟದ ಗುಲಾಬಿ, ಆರ್ಚಿಡ್ಸ್, ಕಾರ್ನೇಷನ್ಸ್ ಮತ್ತು ಬೊಕೆ, ಬಾಕ್ಸ್ ನಂತಹ ಶೈಲಿಯ ಹೂವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳ ಬೆಲೆ 249 ರೂಪಾಯಿಗಳಿಂದ ಆರಂಭವಾಗುತ್ತದೆ.
~ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಫ್ಲಿಪ್ ಕಾರ್ಟ್ ಹೂವಿನ ಡೆಲಿವರಿಗೆ ನಾಲ್ಕು ಅವಧಿಯನ್ನು ನಿಗದಿಪಡಿಸಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ, ಮಧ್ಯಾಹ್ನ 12 ರಿಂದ 3 ವರೆಗೆ, ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 9 ರವರೆಗೆ ಹೂವುಗಳನ್ನು ಡೆಲಿವರಿ ಮಾಡಲಿದೆ.
~ ಗ್ರಾಹಕರು ತಮಗಿಷ್ಟವಾದ ಹೂವುಗಳನ್ನು ಆರ್ಡರ್ ಮಾಡಿದ ನಂತರ ಫ್ಲಿಪ್ ಕಾರ್ಟ್ ಗೆ ಕರೆ ಮಾಡಿ ತಮಗೆ ಸೂಕ್ತವಾದ ಸಮಯದಲ್ಲಿ ಡೆಲಿವರಿ ಮಾಡುವಂತೆ ಮನವಿ ಮಾಡಿಕೊಳ್ಳಬಹುದು.

`ರೋಸ್ ಡೇ’ ಮತ್ತು `ಪ್ರೇಮಿಗಳ ದಿನಾಚರಣೆ’ ಗ್ರಾಹಕರ ನೆಚ್ಚಿನ ಅಚರಣೆಗಳೆಂದು ಫ್ಲಿಪ್ ಕಾರ್ಟ್ ಪರಿಗಣಿಸಿದೆ:
~ ತಾಜಾ ಹೂಗಳು, ಗುಲಾಬಿ ಹೂಗಳು, ಬೊಕೆಗಳು ಮತ್ತು ಕೆಂಪು ಗುಲಾಬಿಗೆ ಹೆಚ್ಚು ಬೇಡಿಕೆ
~ ತಾಜಾ ಹೂಗಳಿಗೆ ಬೇಡಿಕೆ ಇರುವ ನಗರಗಳಲ್ಲಿ ಬೆಂಗಳೂರು, ಪಾಟ್ನಾ, ನವದೆಹಲಿ, ಹೈದ್ರಾಬಾದ್ ಮತ್ತು ಕೋಲ್ಕತ್ತಾ ಟಾಪ್ 5 ನಗರಗಳಾಗಿವೆ.

 

Leave a Reply

Your email address will not be published. Required fields are marked *