Sunday, 5th January 2025

ಶಿಕ್ಷಣ ಮೌಲ್ಯಯುತ ಜೀವನ ಕಲಿಸುತ್ತದೆ: ಸತ್ಯಜಿತ್ ಪಾಟೀಲ್

ಕೊಲ್ಹಾರ: ಶಿಕ್ಷಣವು ಸಮಾಜದಲ್ಲಿ ಬದುಕುವ ಮಾರ್ಗದ ಜೊತೆಜೊತೆಗೆ ಮೌಲ್ಯಯುತ ಜೀವನ ನಡೆಸಲು ಕಲಿಸುತ್ತದೆ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರ, ಯುವ ಮುಖಂಡ ಸತ್ಯಜಿತ್ ಪಾಟೀಲ್ ಹೇಳಿದರು.

ಪಟ್ಟಣದ ಆಕ್ಸ್ಫರ್ಡ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿರುವ ಕಾರಣ ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಒತ್ತು ನೀಡಬೇಕು ಇದು ಮಕ್ಕಳ ಕಲಿಕೆಯ ಹಂಬಲ ಹೆಚ್ಚಿಸುತ್ತದೆ ಎಂದರು.

ಮಹಾನ್ ನಾಯಕರುಗಳ ಜೀವನ ಚರಿತ್ರೆಗಳನ್ನು ಮಕ್ಕಳಿಗೆ ತಿಳಿಹೇಳುವ ಮೂಲಕ ಸಾಧನೆಗೆ ಪ್ರೇರಣೆ ನೀಡಬೇಕು ಎಂದು ಅವರು ಪಾಲಕರಿಗೆ ಕಿವಿ ಮಾತು ಹೇಳಿದರು. ಉತ್ತಮ ಶಿಕ್ಷಣ ನೀಡುವಲ್ಲಿ ಹೆಸರು ಪಡೆದಿರುವ ಆಕ್ಸ್ಫರ್ಡ್ ಶಾಲೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಅವರು ಹಾರೈಸಿದರು.

ಸಾನಿಧ್ಯ ವಹಿಸಿದ್ದ ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ಮಾತನಾಡುತ್ತಾ ಮಕ್ಕಳು ಜೀವನದಲ್ಲಿ ನೈತಿಕತೆ, ಸಚ್ಚಾರಿತ್ರ್ಯ ಅಳವಡಿಸಿಕೊಳ್ಳಬೇಕು ಸಾಧನೆಗೆ ಈ ಅಂಶಗಳು ಮುಖ್ಯವಾಗಿದೆ ಎಂದರು. ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಕಠಿಣ ಅಧ್ಯಯನ ಮಾಡಿದಲ್ಲಿ ಮಾತ್ರ ಯಶಸ್ಸು ದೊರೆಯುತ್ತದೆ ಹಾಗಾಗಿ ಮಕ್ಕಳು ಪ್ರಾಮಾಣಿಕತೆ ಬೆಳೆಸಿಕೊಂಡು ಸತತ ಅಧ್ಯಯನದ ಮೂಲಕ ಗೆಲುವಿನ ರೇಖೆ ದಾಟಬೇಕು ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಆಕ್ಸ್ಫರ್ಡ್ ಶಾಲೆಯ ಅನೇಕ ವಿದ್ಯಾರ್ಥಿಗಳು ಆದರ್ಶ, ಮುರಾರ್ಜಿ ಹಾಗೂ ಇತರೆ ವಸತಿ ಶಾಲೆಗಳಿಗೆ ಆಯ್ಕೆಯಾದ ಪ್ರಯುಕ್ತ ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಲ್ ಹಾಜ್ ನಜೀರ ಅಹ್ಮದ ಪಟೇಲ್, ಅಬ್ದುಲ್ ರಜಾಕ್ ಫರಾಶ್, ಅಲ್ ಹಾಜ್ ಹುಸೇನಸಾಬ ಶೇಕ್, ನಜೀರಅಹ್ಮದ ಪರಾಶ್, ಬಿ‌.ಎ ಕರೀಮಸಾಬ, ಶಾಲೆಯ ಆಡಳಿತಾಧಿಕಾರಿ ಹೆಚ್.ಎನ್ ಪರಾಶ್, ಮುಖ್ಯ ಗುರುಮಾತೆ ಜಿ‌.ಐ ಪಕಾಲಿ, ರಾಮದುರ್ಗ ಕೃಷಿ ಅಧಿಕಾರಿ ಶಿವಕುಮಾರ್, ಆರ್.ಬಿ ಪಕಾಲಿ, ಇಸ್ಮಾಯಿಲ್ ಸಾಬ್ ತಹಶೀಲ್ದಾರ್, ದಾದಾ ಗೂಗಿಹಾಳ, ತೌಸಿಪ್ ಗಿರಗಾಂವಿ, ನೂರ ತಹಶೀಲ್ದಾರ್, ಅಲ್ಲಾಭಕ್ಷ ಬಿಜಾಪುರ, ಹಾಜಿಮಲಂಗ ಜಮಾದಾರ, ಶಿವಯ್ಯ ಗಣಕುಮಾರ, ದಸ್ತಗೀರ ಕಲಾದಗಿ, ಬಾಬು ಬಜಂತ್ರಿ, ಹಜರತಮಾ ಪಕಾಲಿ ಹಾಗೂ ಇತರರು ಉಪಸ್ಥಿತರಿದ್ದರು.

ಸಂತೋಷ ಉಕ್ಕಲಿ ಹಾಗೂ ಸಂಗಮ್ಮ ಮಠ ನಿರೂಪಿಸಿದರು. ದಾದಾಪೀರ ವಾಲಿಕಾರ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *