Friday, 20th September 2024

ಅಸ್ಸಾಂನ ಎಲ್ಲಾ ಸರಕಾರಿ ಮದ್ರಸ ಮತ್ತು ಸಂಸ್ಕೃತ ಶಾಲೆ ಮುಚ್ಚುಗಡೆ

ಗುವಹಾತಿ: ಅಸ್ಸಾಂ ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮದ್ರಸ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲಾಗುವುದು ಎಂದು ರಾಜ್ಯದ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಹೇಳಿದ್ದಾರೆ.

ಸರಕಾರಿ ಹಣದಿಂದ ಧಾರ್ಮಿಕ ಶಿಕ್ಷಣ ನೀಡುವುದನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಹೇಳಿದ ಸಚಿವರು, ಸರಕಾರದ ಆದೇಶ ಕುರಿತಾದ ಅಧಿಸೂಚನೆಯನ್ನು ನವೆಂಬರ್ ತಿಂಗಳಲ್ಲಿ ಹೊರಡಿಸಲಾಗುವುದು ಎಂದಿದ್ದಾರೆ.

ಸರಕಾರಿ ಮದ್ರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಿದ ನಂತರ ಅವುಗಳ 48 ಗುತ್ತಿಗೆ ಶಿಕ್ಷಕ ರನ್ನು ಶಿಕ್ಷಣ ಇಲಾಖೆ ನಡೆಸುವ ಶಾಲೆಗಳಿಗೆ ವರ್ಗಾಯಿಸಲಾಗುವುದು ಎಂದಿದ್ದಾರೆ.

ಅಸ್ಸಾಂನಲ್ಲಿ 614 ಸರಕಾರಿ ಮದ್ರಸಾಗಳಿದ್ದರೆ 900 ಖಾಸಗಿ ಮದ್ರಸಾಗಳಿವೆ. ಸರಕಾರಿ ಮದ್ರಸಾ ಗಳ ಪೈಕಿ 57 ಬಾಲಕಿಯರ ಮದ್ರಸಾ, ಮೂರು ಬಾಲಕರ ಮದ್ರಸಾ ಹಾಗೂ 554 ಮದ್ರಸಾಗಳಲ್ಲಿ ಬಾಲಕ-ಬಾಲಕಿಯರಿಗೆ ಸಹ-ಶಿಕ್ಷಣ ನೀಡಲಾಗುತ್ತಿದೆ. ಖಾಸಗಿ ಮದ್ರಸಾಗಳಲ್ಲಿ ಹೆಚ್ಚಿನವು ಜಮೀಯತ್ ಉಲಾಮ ಆಡಳಿತದಲ್ಲಿದೆ. ಅಂತೆಯೇ ರಾಜ್ಯದಲ್ಲಿ 100 ಸರಕಾರಿ ಸಂಸ್ಕೃತ ಶಾಲೆ ಗಳು ಹಾಗೂ 500 ಖಾಸಗಿ ಸಂಸ್ಕೃತ ಶಾಲೆಗಳಿವೆ.