Monday, 25th November 2024

ರಾಜ್ಯದ 60 ಕಡೆ ಏಕಕಾಲಕ್ಕೆ‌ ’ಲೋಕಾಯುಕ್ತ’ ದಾಳಿ

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳಿಗೆ ಭಾರಿ ಪ್ರಮಾಣದ ದಾಳಿ ನಡೆಸಿದ್ದಾರೆ. ರಾಜ್ಯದ 60 ಕಡೆ ಏಕಕಾಲಕ್ಕೆ‌ ದಾಳಿ ನಡೆಸಿ ಪರಿಶೀಲನೆ ಮಾಡಲಾ ಗಿದೆ.

13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿಗಳು, 25 ಪಿಐಗಳು ಸೇರಿದಂತೆ 130 ಅಧಿಕಾರಿಗಳು ಲೋಕಾಯುಕ್ತ ದಾಳಿಗಳಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಮಹಾನಗರಪಾಲಿಕೆ ಚೀಫ್‌ ಎಂಜಿನಿಯರ್ ರಂಗನಾಥ್ ಎಸ್‌.ಪಿ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿ ದ್ದಾರೆ. ಬ್ಯಾಟರಾಯನಪುರ- ಯಲಹಂಕ ವಲಯದ ಅಧಿಕಾರಿಯಾಗಿರುವ ರಂಗನಾಥ್‌ಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆದಿದೆ.

ರಾಜ್ಯದ ಪ್ರಮುಖ ಹುದ್ದೆಗಳಲ್ಲಿರುವ 12ಕ್ಕೂ ಅಧಿಕ ಅಧಿಕಾರಿಗಳಿಗೆ ಸೇರಿದ ಮನೆಗಳು, ಐಷಾರಾಮಿ ಫ್ಲ್ಯಾಟ್‌ಗಳು ಹಾಗೂ ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ದಾಳಿಗೊಳಗಾದವರ ವಿವರ

ರಂಗನಾಥ್ ಎಸ್.ಪಿ – ಬಿಬಿಎಂಪಿಯ ಯಲಹಂಕ ಹಾಗೂ ಬ್ಯಾಟರಾಯನಪುರ ವಿಭಾಗದ ಚೀಫ್ ಇಂಜಿನಿಯರ್ ಗೆ ಸಂಬಂಧಿ ಸಿದ ಬೆಂಗಳೂರಿನ 5 ಸ್ಥಳಗಳು
ರೂಪ – ಡೆಪ್ಯುಟಿ ಕಮಿಷನರ್, ಅಬಕಾರಿ ಇಲಾಖೆ – ಸಂಬಂಧಿತ ಉಡುಪಿಯ 5 ಸ್ಥಳಗಳು
ಪ್ರಕಾಶ್ – ಜ್ಯೂನಿಯರ್ ಇಂಜಿನಿಯರ್ – ಸಂಬಂಧಿಸಿದ ಕಾರವಾರ – ಉ.ಕ ಜಿಲ್ಲೆಯ 4 ಸ್ಥಳಗಳು
ಫಯಾಜ್ ಅಹಮದ್ – ಅಸಿಸ್ಟೆಂಟ್ ಇಂಜಿನಿಯರ್ – ಸಂಬಂಧಿಸಿದ ಮೈಸೂರಿನ 12 ಸ್ಥಳಗಳು
ಜಯಣ್ಣ ಬಿ.ವಿ. ಮುಖ್ಯ ಕಾರ್ಯಕಾರಿ ಅಭಿಯಂತರ, ಕೊಡಗು
ಮಹೇಶ್ ಚಂದ್ರಯ್ಯ ಹೀರೆಮಠ್- ಅರಣ್ಯ ವಲಯದ ಅಧಿಕಾರಿ- ಧಾರವಾಡದ 6 ಸ್ಥಳಗಳು
ಶಿವಕುಮಾರಸ್ವಾಮಿ- ಎಕ್ಸಿಕ್ಯೂಟಿವ್ ಇಂಜಿನಿಯರ್ ಬೀದರ್ ನ 4 ಸ್ಥಳಗಳು
ನಾಗರಾಜಪ್ಪ- ಅಸ್ಟಿಸೆಂಟ್ ಡೈರೆಕ್ಟರ್ ಕೋಲಾರದ ಐದು ಕಡೆಗಳಲ್ಲಿ ಷಣ್ಮುಗಪ್ಪ, ಎಆರ್ ಟಿಓ ಜಮಖಂಡಿ, ಬಾಗಲಕೋಟೆಯ ನಾಲ್ಕು ಕಡೆಗಳಲ್ಲಿ ಸದಾಶಿವಯ್ಯ, ಅಸ್ಟಿಸೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಿಕ್ಕಬಳ್ಳಾಪುರದ 6 ಕಡೆಗಳಲ್ಲಿ ದಾಳಿ ಕೃಷ್ಣ ಗೌಡ- ದ್ವೀತಿಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ, ಆಗಸನಪುರ ಗ್ರಾಮ ಪಂಚಾಯಿತಿ ಮಳವಳ್ಳಿ, ಮಂಡ್ಯ ನಾಲ್ಕು ಕಡೆಗಳಲ್ಲಿ ದಾಳಿ.
ಸದಾಶಿವ ಜಯಪ್ಪ, ಸೆಕ್ರೆಟರಿ ಪಿಡಿಓ, ನಿಡಗುಂದಿ ಗ್ರಾಮ ಬೆಳಗಾವಿಯ 3 ಕಡೆಗಳಲ್ಲಿ ದಾಳಿ.