Sunday, 5th January 2025

ಜೆಇಇ ಮೇನ್ 2024 ಪರೀಕ್ಷೆ: ರೈತನ ಮಗ ದೇಶಕ್ಕೇ ಅಗ್ರಸ್ಥಾನ

ನವದೆಹಲಿ: ಮಹಾರಾಷ್ಟ್ರದ ವಾಶಿಮ್‌ನ ರೈತರ ಮಗ ನೀಲಕೃಷ್ಣ ಗಜರೆ ಅವರು ಜೆಇಇ ಮೇನ್ 2024 ಪರೀಕ್ಷೆಯಲ್ಲಿ ದೇಶಕ್ಕೇ ಅಗ್ರಸ್ಥಾನ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು (100) ಗಳಿಸಿದ್ದಾರೆ.

ದಕ್ಷೇಶ್ ಸಂಜಯ್ ಮಿಶ್ರಾ ಮತ್ತು ಆರವ್ ಭಟ್ ಕ್ರಮವಾಗಿ AIR 2 ಮತ್ತು 3 ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 56 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು.

IIT- JEEಗೆ ತಯಾರಾಗಲು ಗಜರೆ 11ನೇ ತರಗತಿಯಲ್ಲಿ ALLEN ವೃತ್ತಿ ಸಂಸ್ಥೆಗೆ ಸೇರಿದರು. ಅವರು ತಮ್ಮ ಪ್ರಯಾಣದ ಅಡೆತಡೆಗಳನ್ನು ಹೇಗೆ ನಿವಾರಿಸಿ ಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

“ನನ್ನ ಜೆಇಇ ಪ್ರಯಾಣ 11ನೇ ತರಗತಿಯಲ್ಲಿ ಪ್ರಾರಂಭವಾದ ಮೊದಲ ಒಂದು ಅಥವಾ ಎರಡು ತಿಂಗಳುಗಳಲ್ಲಿ ನಾನು ಸ್ವಲ್ಪ ತೊಂದರೆಗಳನ್ನು ಎದುರಿಸಿದೆ. ಅಂದರೆ, 10ನೇ ತರಗತಿಗೆ ಹೋಲಿಸಿದರೆ 11 ಮತ್ತು 12ನೇ ತರಗತಿಗಳ ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಆದ್ದರಿಂದ ನಾನು ಆರಂಭ ದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದೆ. ಆದರೆ ನಾನು ಕೈಬಿಡಲಿಲ್ಲ. ನನ್ನ ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿದೆ. ನಾನು ವಿದ್ಯಾರ್ಥಿ ಗಳಿಗೆ ನೀಡಲು ಬಯಸುವ ಸಂದೇಶ ಏನೆಂದರೆ, ನೀವು ಅಂತಹ ತೊಂದರೆಗಳನ್ನು ಎದುರಿಸಿದರೆ ಅಥವಾ ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿ ದರೆ, ಕೈಬಿಡಬೇಡಿ. ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮುಂದುವರಿಸಿ. ಒಳ್ಳೆಯ ಫಲಿತಾಂಶ ದಕ್ಕುತ್ತದೆ” ಎಂದು ಅವರು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೇಳೆ ಹೇಳಿದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟ ವಾಗಿದೆ. ಒಟ್ಟು 56 ಅಭ್ಯರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

Leave a Reply

Your email address will not be published. Required fields are marked *