ಇಂಡಿ: ಪ್ರಧಾನಿ ಮೋದಿ ಅಚ್ಚೇ ದಿನ ಬರುತ್ತದೆ ಎಂದರು ಕಪ್ಪು ಹಣ ತರುತ್ತೇನೆ. ಪ್ರತಿ ಭಾರತೀಯ ನಾಗರೀಕನ ಬ್ಯಾಂಕ್ ಖಾತೆ ೧೫ ಲಕ್ಷ ರೂ ಜಮಾ ಮಾಡುತ್ತೇನೆ ಎಂದು ಸುಳ್ಳು ಹೇಳಿದ ಈ ದೇಶ ಕಂಡ ಅತ್ಯೆಂತ ಹಸಿ ಸುಳ್ಳಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹರಿಹಾಯ್ದರು.
ರೋಡಗಿ, ಸಾತಲಗಾಂವ್, ನಾದ ಕೆ.ಡಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೋ. ರಾಜು ಆಲಗೂರವರ ಪರ ಮತಯಾಚನೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಬಸವಣ್ಣ ನಾಡು ಶಾಂತಿ. ಪ್ರೀತಿ, ಹೃದಯ ಶ್ರೀಮಂತಿಕೆ ಈ ಭೂಮಿಯ ಗುಣ ಹೀಗಾಗಿ ಕಾಂಗ್ರೆಸ್ ಸರ್ವ ಸಮುದಾಯ, ಬಡವ ಬಲೀದ, ಅಲ್ಪಸಂಖ್ಯಾತ, ಹಿಂದುಳಿದ, ಮುಂದುವರೆದವರನ್ನು ಗೌರವಿಸುವ ತ್ಯಾಗದ ಏಕೈಕ ಪಕ್ಷ ಕಾಂಗ್ರೆಸ್.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ವಿಧಾನ ಸಭೆಯ ಚುನಾವಣೆಯಲ್ಲಿ ಕರ್ನಾಟಕದ ಜನತೆ ಮತ ಹಾಕಿಲ್ಲ ಎಂದು ಕೇಂದ್ರದಿAದ ರೈತರಿಗೆ ಬರ ಪರಿಹಾರ ನೀಡಿಲ್ಲ. ಅಚ್ಚೇದಿನ ಬರುತ್ತದೆ ಎಂದು ಜನರು ಮತ ಹಾಕಿ ಕೇಂದ್ರದಲ್ಲಿ ಕೂಡಿಸಿದರೆ ಅಚ್ಚೇ ದಿನ ಬರಲೇ ಇಲ್ಲ ಉದ್ಯೋಗ ಇಲ್ಲ, ಎಲ್ಲಾ ಇಲಾಖೆಗಳು ಖಾಸಗೀಕರಣ, ಬೆಲೆಗಳ ಹೆಚ್ಚಳ, ರೈತರು ಬೆಳೆದ ದವಸ, ಧಾನ್ಯಗಳಿಗೆ ಬೆಂಬಲ ಬೆಲೆ ಇಲ್ಲ, ರೈತರ ಸಾಲ ಮನ್ನಾ ಮಾಡಿಲ್ಲ ನ ಖಾವುಂಗಾ ನ ಖಾನೆದೋಂಗಾ ಎಂದು ಹೇಳಿ ದೇಶ ಆರ್ಥಿಕವಾಗಿ ಹಾಳು ಮಾಡಿದ್ದಾರೆ.
ಎಲ್ಲ ವರ್ಗಗಳಲ್ಲಿ ರೈತ ಇಂದು ಸಂಕಷ್ಟದಲ್ಲಿದ್ದಾನೆ ಕಷ್ಟದಲ್ಲಿದ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು ಕಾರ್ಪೋರೇಟರ್ ಪರವಾಗಿ, ಉದ್ದಿ ಮೆದಾರ ಅದಾನಿ, ಅಂಬಾನಿ ಬಂಡವಾಳಗಾರ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇಂತಹ ಪ್ರಧಾನ ಮಂತ್ರಿಯನ್ನು ಈ ದೇಶ ಕಂಡಿರು ವುದು ದೌಭಾರ್ಗ್ಯ.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಜಿಲ್ಲೆಯಲ್ಲಿ ಅಭಿವೃದ್ದಿ ಶೂನ್ಯ ಮಾತುಗಳು ಮೌನ ಕೆಲಸವು ಇಲ್ಲ ಮಾತುಗಳು ಇಲ್ಲ ಕೇಂದ್ರ ಸಂಸತ್ತಿನಲ್ಲಿ ಈ ಭಾಗದ ಜ್ವಲಂತ ಸಮಸ್ಯ ಒಂದಾದರೂ ಮಾತನಾಡಿದ್ದಾರೆಯೇ ? ಅತೀ ಮೌನ ಘಾತಕ ಲಕ್ಷಣ ಜಿಲ್ಲೆಯಲ್ಲಿ ರಾಜ-ಮಾಹಾರಾಜರು ಅನೇಕ ವಾಸ್ತುಶಿಲ್ಪ ಕಟ್ಟಿ ಅಭಿವೃದ್ದಿಪಡಿಸಿದ್ದಾರೆ ಪುಣ್ಯಾತ್ಮ ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಶ್ವಪಾರಂಪಾರಿಕ ಪಟ್ಟಿಯಲ್ಲಿ ಸೇರಿಸಿದರೆ ಪ್ರವಾಸಿಗರು ಮತ್ತಷ್ಟು ಬಂದು ವ್ಯಾಪಾರ, ವಾಣಿಜ್ಯ, ಸಾರಿಗೆ ಹಲವು ಸೇವೆಗಳು ಅಭಿವೃದ್ದಿ ಕಾಣುತ್ತಿದ್ದವು. ಈ ಜಿಲ್ಲೆಯ ಜನರ ದುರ್ದೈವ. ಬರುವ ೭ನೇ ತಾರೀಖು ಲೋಕಸಭಾ ಚುನಾವಣೆಯ ನಮ್ಮ ಅಭ್ಯರ್ಥಿ ಪ್ರೊ.ರಾಜು ಆಲಗೂರ ಇವರಿಗೆ ನಿಮ್ಮ ಮತ ಹಾಕಿ ಆಯ್ಕೆ ಮಾಡಿ ವಿಜಯಪೂರ ಬದಲಾವಣೆ ಪರ್ವ ಪ್ರಾರಂಭ ವಾಗುತ್ತದೆ. ಮತಕ್ಷೇತ್ರದ ಮತದಾರ ಪ್ರಭುಗಳು ನನಗೆ ಹೆಚ್ಚಿನ ಮತ ನೀಡಿ ಗೆಲುವು ನೀಡಿದಂತೆ ನಮ್ಮ ಕಾಂಗ್ರೆಸಿನ ಅಭ್ಯರ್ಥಿ ಪ್ರೊ.ರಾಜು ಆಲಗೂರ ಇವರಿಗೆ ಮತ ನೀಡಿ ಗೌರವ ಕಾಪಾಡಬೇಕು ಎಂದು ಮನವಿ ಮಾಡಿದರು.
ಪ್ರೊ.ರಾಜು ಆಲಗೂರ ಪ್ರಬುಧ್ದ ಹಾಗೂ ಸಜ್ಜನ ರಾಜಕಾರಣಿ ಒಬ್ಬ ದಲಿತ ವ್ಯಕ್ತಿ ಇದ್ದರೂ ಸಹಿತ ಈ ಹಿಂದೆ ಎರಡು ಬಾರಿ ಶಾಸಕನಾಗಿದ್ದಾಗ ಹಾಗೂ ನಿಗಮ ಮಂಡಳಿಯ ಅಧ್ಯಕ್ಷನಾಗಿದ್ದಾಗ ಸರ್ವಜನಾಂಗವನ್ನು ಪ್ರೀತಿ, ವಿಶ್ವಾದಿಂದ ಕಂಡಿದ್ದಾರೆ. ಹಿಂದಿನ ಸಂಸದರು ಅಭಿವೃದ್ದಿ ಮಾಡಿಲ್ಲ ಬರೇ ಮೌನ ರಾಗ ಅನೇಕ ಬಾರಿ ಸಾಕಷ್ಟು ಒಳ್ಳೇಯ ಹುದ್ದೆ, ಅಧಿಕಾರ ಎಲ್ಲಾ ಅನುಭವಿಸಿದ್ದಾರೆ. ರಾಜಕೀಯ ಸೇವೆ ಸುದೀರ್ಘ ಮಾಡಿದ್ದಾರೆ ವಯಸ್ಸು ಆಗಿರುವ ದರಿಂದ್ದ ವಿಶ್ರಾಂತಿ ಪಡೆಯಲಿ ಈ ಬಾರಿ ಕಾಂಗ್ರೆಸ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮತ ನೀಡಿ ಗೆಲ್ಲಿಸಿ ಎಂದು ಸೋಮು ಮ್ಯಾಕೇರಿ, ಸಿದ್ದರಾಯ ಐರೋಡಗಿ ಜಂಟಿಯಾಗಿ ಸಾರ್ವಜನಿಕರಿಗೆ ಮನವಿ ಮಾಡಿದರು.
ಸಿದ್ದರಾಯ ಐರೋಡಗಿ,ದಿಲೀಪ ಬಾಸಗಿ, ಸೋಮು ಮ್ಯಾಕೇರಿ, ಬಸವರಾಜ ಅವುಜೀ, ವಿ.ಕೆ ಅಂಬಾರಿ, ಚಂದು ಸಾಹುಕಾರ ಸೊನ್ನ, ಮಂಜು ಶಹಾಬಾದಿ, ಪ್ರಶಾಂತ ಆಲಗೊಂಡ, ಗೌಡಪ್ಪಗೌಡ ಪಾಟೀಲ,ಮಂಜು ಕಾಮಗೊಂಡ, ಪ್ರಭು ಮುಲಗಿ, ಸಂತೋಷ ಜಂಗಮಶೆಟ್ಟಿ, ಶಾಂತು ಲಿಂಗದಳ್ಳಿ, ದಸ್ತಗೀರ ಸಂಜವಾಡ, ಸಂತೋಷ ಜಂಗಮಶೆಟ್ಟಿ, ಸಂಗಣ್ಣಾ ಈರಾಬಟ್ಟಿ, ಪ್ರಶಾಂತ ಕಾಳೆ, ಜಾವೀದ ಮೋಮಿನ, ಭೀಮಣ್ಣಾ ಕೌಲಗಿ ,ಇಲಿಯಾಸ ಬೋರಾಮಣಿ, ಮಹಿಬೂಬ ಅರಬ ಸೇರಿದಂತೆ ಅನೇಕ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.