ಪ್ರಸ್ತುತ ಭಾರತವು ಜಾಗತಿಕವಾಗಿ ನಾನಾ ರೀತಿಯ ಸಂಕಷ್ಟ, ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ತನ್ನ ಸಾಮರ್ಥ್ಯ ಪ್ರದರ್ಶನ
ದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ಇಂಥದೊಂದು ಸಾಮರ್ಥ್ಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಬೇಕಿರುವುದರ ಜತೆಗೆ
ನಮ್ಮ ದೇಶದ ಬಗ್ಗೆ ನಾವು ಮತ್ತಷ್ಟು ಹೆಮ್ಮೆ ಪಡಬೇಕಿದೆ. ಕಳೆದ 20ವರ್ಷಗಳಲ್ಲಿ ಅತಿ ಹೆಚ್ಚು ವಿಕೋಪಗಳನ್ನು ಎದುರಿಸಿರುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
321 ವಿಕೋಪಗಳನ್ನು ಸಮರ್ಥವಾಗಿ ಎದುರಿಸಿದೆ ಭಾರತ. ಮತ್ತೊಂದೆಡೆ ಚೀನಾ ಹಾಗೂ ಪಾಕಿಸ್ತಾನ ದೇಶಗಳ ಕ್ಯಾತೆಗೆ
ತುತ್ತಾಗುತ್ತಿದೆ. ಪ್ರಸ್ತುತ ಕರೋನಾ ಸಂಕಷ್ಟದಿಂದಾಗಿ ಮತ್ತೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಷ್ಟೆಲ್ಲ ಸಮಸ್ಯೆಗಳ
ನಡುವೆಯೂ ಭಾರತ ಸಾಧನೆಯಲ್ಲಿ ಹಿಂದೆಬಿದ್ದಿಲ್ಲ ಎಂಬುದು ಗಮನಾರ್ಹ ಸಂಗತಿ.
ದೇಶ ಕರೋನಾ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿಯೂ ರಕ್ಷಣೆ ವಿಚಾರದಲ್ಲಿ ರಾಜಿಯಾಗದ ಭಾರತವು ಕ್ಷಿಪಣಿ ವ್ಯವಸ್ಥೆ ಅಭಿವೃದ್ಧಿಯಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದೆ. ಭಾರತೀಯ ಸಶಸ ಪಡೆಗಳು ಅಪೇಕ್ಷಿಸುವಂಥ ಯಾವುದೇ ರೀತಿ ಕ್ಷಿಪಣಿ ಅಭಿವೃದ್ಧಿಗೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಮರ್ಥವಾಗಿ ಸಜ್ಜುಗೊಂಡಿದೆ.
ಮುಂದಿನ 4-5 ವರ್ಷದಲ್ಲಿ ಸಂಪೂರ್ಣ ಕ್ಷಿಪಣಿ ವ್ಯವಸ್ಥೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ಮೂಲಕ ಸಶಸಪಡೆಗಳಿಗೆ ಹೆಚ್ಚಿನ ಬಲ ಒದಗಿಸಲಿದೆ. ವಿಶ್ವದ ಅತಿ ಪ್ರಬಲ ಕ್ಷಿಪಣಿ ಎಂದು ಕರೆಯಲಾಗುವ ಬ್ರಾಹ್ಮೋಸ್ ಸೇರಿದಂತೆ ದೇಶದಲ್ಲಿ 10 ಕ್ಷಿಪಣಿ ಗಳನ್ನು ಪರೀಕ್ಷಿಸಲಾಗಿದೆ. ಬ್ರಹ್ಮೋಸ್ ಗಿಂತಲೂ ಎರಡುಪಟ್ಟು ಸುಧಾರಿತ ತಂತ್ರಜ್ಞಾನ ಹೊಂದಿರುವ ಕ್ಷಿಪಣಿಗಳ ಅಭಿವೃದ್ಧಿ,
ಪ್ರಬಲ ವಿಕಿರಣ ವಿರೋಧಿ ಕ್ಷಿಪಣಿ, ಜಲಂತಗಾರ್ಮಿ ಕ್ಷಿಪಣಿ, ಹೈಪರ್ ಸಾನಿಕ್ ಪರಮಾಣು ಕ್ಷಿಪಣಿಗಳ ಅಭಿವೃದ್ಧಿಗಾಗಿ ಸಿದ್ಧತೆ ಆರಂಭಿಸಿಸಲಾಗಿದೆ.
ಶತ್ರು ರಾಷ್ಟ್ರಗಳನ್ನು ಮಣಿಸಲು ಸಶಸ ಪಡೆಗಳಿಗೆ ಅಗತ್ಯವಿರುವ ಸಕಲ ರೀತಿಯ ಸುಧಾರಿತ ತಂತ್ರಜ್ಞಾನ ಕ್ಷಿಪಣಿ ತಯಾರಿಕೆ ಭಾರತದಲ್ಲಿಯೇ ಆರಂಭಗೊಂಡಿರುವುದು ನಮ್ಮ ದೇಶದ ಸಾಮರ್ಥ್ಯಕ್ಕೆ ಸಾಕ್ಷಿ.