Sunday, 5th January 2025

ರೈತರ ಅಭಿವೃದ್ದಿ; ಮತ್ತದರ ಪಾತ್ರಧಾರಿಗಳು

ನವ ವಿಚಾರ

ತೇಜಸ್ ಎಚ್.ಎನ್

ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ ಸುಮಾರು ೬೦ ಪ್ರತಿಶತ ಜನಸಂಖ್ಯೆ, ಕೃಷಿ ಮತ್ತು ಕೃಷಿ ಸಂಬಂಧಿತ ವಲಯದ ಮೇಲೆ ಅವಲಂಬಿತವಾಗಿದೆ ಇಡೀ ಇಂಡಿಯಾದ ಜಿಡಿಪಿಗೆ ೧೮ ರಿಂದ ೧೯% ಕೊಡುಗೆಯನ್ನು ಕೃಷಿ ಕ್ಷೇತ್ರ ನೀಡುತ್ತಿದೆ. ಇಂದಿಗೂ ಸಹ ಭಾರತದಂತ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ರಾಜಕೀಯ ಧುರೀಣರು ರೈತರ ಮೇಲೆ ಕರುಣೆ ತೋರಿಸುತ್ತಾರೆ ಹೊರತು ರೈತರ ಅಭಿವೃದ್ಧಿಗೆ ಶಿಸ್ತುಬದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ರೈತರಿಗೆ ಬೇಕಾಗಿರುವುದು ರಾಜಕಾರಣಿಗಳು ಅಧಿಕಾರ ಶಾಹಿಗಳು ತೋರಿಸುವಂತಹ ಅನುಕಂಪ ಮತ್ತು ಕರುಣೆಯಲ್ಲ, ರೈತರಿಗೆ ಅವಶ್ಯಕತೆ ಇರುವುದು ರೈತಪರ ಕಾನೂನುಗಳು ಕೃಷಿ ಮತ್ತು ಇತರ ಚಟುವಟಿಕೆಗಳನ್ನು ಉತ್ತೇಜಿಸುವಂತಹ ಕಾರ್ಯಕ್ರಮಗಳು ರೈತರಿಗೆ ಅತ್ಯವಶ್ಯಕ. ಸಮಾಜದ ಒಂದು ವರ್ಗ ಇಂದಿಗೂ ಸಹ ರೈತ ಎಂದರೆ ಹಳೆ ಪಂಚೆ ಹರಿದು ಹೋದ ಅಂಗಿ, ಕುರುಚಲು ಗಡ್ಡದಿಂದ ಕೂಡಿದ ವ್ಯಕ್ತಿ ಒಬ್ಬ ಬಿರುಕು ಬಿಟ್ಟ ಭೂಮಿಯಲ್ಲಿ ಮಳೆ
ಯನ್ನು ಕಾಯುತ್ತಾ ಆಕಾಶದತ್ತ ನೋಡುವ ಚಿತ್ರದಿಂದ ಬಿಂಬಿಸುತ್ತಾರೆ ಮತ್ತು ರೈತನನ್ನು ಈ ರೀತಿಯಾಗಿ ಬಿಂಬಿಸುವುದಕ್ಕೆ ವ್ಯವಸ್ಥಿತ ರೂಪದಲ್ಲಿ ಸಂಚು ನಡೆಯುತ್ತಾ ಬಂದಿದೆ ಆದರೆ ಜನಪ್ರತಿನಿಽಗಳ ಐಷಾರಾಮಿ ಜೀವನಶೈಲಿಗೆ ಒಂದು ಚೂರು ತೊಂದರೆಯಾಗಿಲ್ಲ.

Indian Agriculture is gambling with the south west monsoon ಭಾರತದ ಕೃಷಿ ಎಂದರೆ ಮುಂಗಾರು ಮಳೆಯ ಜೊತೆಗಿನ ಜೂಜಾಟ ಎಂಬ ಮಾತು ಪ್ರಸಿದ್ಧವಾಗಿದೆ ಇದರ ಜೊತೆಗೆ ಭಾರತದ ಕೃಷಿ ಚಟುವಟಿಕೆಗಳು ಸರಕಾರದ ಪ್ರೈಸ್ ಪಾಲಿಸಿಯ ಮೇಲೆಯೂ ಕೂಡ ಅವಲಂಬಿತವಾಗಿದೆ ಎಂದರೆ ತಪ್ಪಾಗಲಾರದು. ಸೆಕೆಂಡರಿ ಸೆಕ್ಟರ್ ನಲ್ಲಿ ಬರುವಂತಹ ಕೈಗಾರಿಕೋದ್ಯಮದಲ್ಲಿ ಉತ್ಪಾದಯಾಗುವ ಸರಕುಗಳಿಗೆ ಒಂದು ನಿರ್ದಿಷ್ಟವಾದಂತಹ ಬೆಲೆ ಯನ್ನು ನಿಗದಿ ಮಾಡಲಾಗಿದೆ ಆದರೆ ಕೈಗಾರಿಕೋದ್ಯಮಕ್ಕೆ ಕಚ್ಚಾ ವಸ್ತುಗಳನ್ನು ನೀಡುವಂತಹ ಪ್ರೈಮರಿ ಸೆಕ್ಟರ್‌ಎಂದರೆ ಕೃಷಿ ಕ್ಷೇತ್ರದಲ್ಲಿ ಉತ್ಪತ್ತಿ ಯಾಗುವ ಬೆಳೆಗಳಿಗೆ ಮತ್ತು ಕಚ್ಚಾ ವಸ್ತುಗಳಿಗೆ ನಿಗದಿತವಾದಂತಹ ಬೆಲೆ ಇರದಿರುವುದು ವಿಪರ್ಯಾಸ.

ಕೇಂದ್ರ ಸರ್ಕಾರ ಸುಮಾರು ೨೨ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(Minimum support price) MSP ಯೋಜನೆ ಅಡಿಯಲ್ಲಿ ಒಂದು ನಿರ್ದಿಷ್ಟವಾದಂತ ಬೆಲೆ ನಿಗದಿ ಮಾಡಿದೆ ಅದರಲ್ಲಿ ೧೪ ಮುಂಗಾರು ಬೆಳೆಗಳು ಆರು ಹಿಂಗಾರು ಮತ್ತು ಎರಡು ವಾಣಿಜ್ಯ ಬೆಳೆಗಳು ಈ ಬೆಳೆಗಳ ಪಟ್ಟಿಯನ್ನು ನೋಡಿದರೆ ಮುಂಗಾರು ಬೆಳೆಗಳಾದ ಭತ್ತ, ಭಾಜ್ರ ,ಜೋಳ ,ರಾಗಿ ,ರ್ತು ಅಥವಾ ಅಹರ್ರ‍, ಉರಾದ್, ಶೇಂಗಾ, ಸೋಯಾಬೀನ್, ಸೂರ್ಯಕಾಂತಿ ಬೀಜ, ಎಳ್ಳು, ನೈಜರ್ ಸೀಡ್, ಹತ್ತಿ.ಹಿಂಗಾರು ಬೆಳೆಗಳಾದ ಗೋಧಿ ಬಾರ್ಲಿ, ಬೇಳೆ, ಮಸೂರ್, ರೇಪ್ ಸೀಡ್, ಸಾಸಿವೆ, ಕುಸುಬೆ ಮತ್ತು ವಾಣಿಜ್ಯ ಬೆಳೆಗಳಾದ ಸೆಣಬು ಮತ್ತು ಕೋಪ್ರ. ಭಾರತದಲ್ಲಿ ಕೇವಲ ಈ ೨೨ ಬೆಳೆಗಳನ್ನು ಮಾತ್ರ ಬೆಳೆಯುತ್ತಿಲ್ಲ ಭಾರತದಲ್ಲಿ ೧೫ ಕೃಷಿ ಅವಮಾನ ವಲಯಗಳಿವೆ ಒಂದೊಂದು ವಲಯಗಳಲ್ಲಿಯೂ ಸಹ ಆಯಾ ಹವಾಗುಣಕ್ಕೆ ಸರಿಹೊಂದುವಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಾರೆ ಬೆಳೆದಂತಹ ಬೆಳೆಗಳಿಗೆ ಮುಕ್ತ ಮಾರುಕಟ್ಟೆ ಯಲ್ಲಿ ದೊರೆಯುವ ಬೆಲೆಯೂ ಕೆಲವೊಮ್ಮೆ ಕಾ ಆಫ್ ಕಲ್ಟಿವೇಶನ್ (ಕೃಷಿ ವೆಚ್ಚ )ಬರಿಸುವುದಕ್ಕೂ ಸಹ ಸಾಲೋದಿಲ್ಲ ಇನ್ನೂ ಕೆಲವೊಮ್ಮೆ ಕಾಸ್ಟ ಆಫ್ ಹಾರ್ವೆಸ್ಟಿಂಗ (ಕೊಯ್ಲು ವೆಚ್ಚ)ವನ್ನು ಸಹ ಬರಿಸುವುದಕ್ಕೆ ಆಗದೆ ಬೆಳೆಗಳನ್ನು ಕೊಯ್ಲು ಮಾಡದೆ ಇರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ನಮ್ಮದೇ ಕರ್ನಾಟಕದ ಕೋಲಾರ ಚಿಕ್ಕಬಳ್ಳಾಪುರ ಜಿಗಳಲ್ಲಿ ಟೊಮ್ಯಾಟೋದಂತಹ ಇನ್ನೂ ಹಲವು ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ ಕೇವಲ ಒಂದು ರೂಪಾಯಿ ಕಿಲೋ ಗ್ರಾಂಗೆ ಮಾರಿರುವ ಮತ್ತು ರಸ್ತೆಗಳ ಮೇಲೆ ಸುರಿದ ಉದಾರಣೆಗಳಿವೆ ಈ ರೀತಿಯಾದಂತಹ ಇನ್ನೂ ಅನೇಕ ಬೆಳೆಗಳನ್ನು ಎಂ.ಎಸ್.ಪಿ ಯೋಜನೆ ಅಡಿಗೆ ತರಬೇಕು ಎಂಬುದು ಕೋಟ್ಯಾಂತರ ರೈತರ ಆಗ್ರಹ. ಒಬ್ಬ ಕೃಷಿ ವಿದ್ಯಾರ್ಥಿಯಾಗಿ ದೇಶದ ಆರ್ಥಿಕತೆ ಯಾವ ರೀತಿಯಲ್ಲಿ ನಡೆಯುತ್ತದೆ ಮತ್ತು ಎ ಬೆಳೆಗಳಿಗೂ ಸಹ ಕನಿಷ್ಠ ಬೆಂಬಲ ಬೆಲೆ ನೀಡುವುದಕ್ಕೆ ಎದುರಾಗುವ ಸಮಸ್ಯೆಗಳೇನು ಮತ್ತು ಸಾಧಕ ಬಾದಕಗಳ ಬಗ್ಗೆ ಅಧ್ಯ ಯನ ನಡೆಸಿದ ನಂತರ ನನ್ನ ಅನಿಸಿಕೆಗಳನ್ನು ವಿಸ್ತೃತವಾಗಿ ಹೇಳುವುದಾದರೆ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಸಾಮಾನ್ಯವಾಗಿ ಆಹಾರ ಭದ್ರತೆಗೆ ಪ್ರಮುಖವೆಂದು ಪರಿಗಣಿಸುವ ಮತ್ತು ಮಾರುಕಟ್ಟೆಯಲ್ಲಿ ಗಮನಾರ್ಹ ಬೆಲೆ ಏರಿಳಿತಗಳನ್ನು ಎದುರಿಸುವ ಬೆಳೆಗಳಿಗೆ ಹೊಂದಿಸ ಲಾಗಿದೆ ಹೆಚ್ಚುವರಿಯಾಗಿ ಎಲ್ಲಾ ಬೆಳೆಗಳಿಗೆ ಎಂ.ಎಸ್.ಪಿ ಅನುಷ್ಠಾನಗೊಳಿಸುವುದು ವ್ಯವಸ್ಥಾಪ ನಾತ್ಮಕವಾಗಿ ಸವಾಲಾಗಿದೆ ಮತ್ತು ಸರ್ಕಾರಗಳಿಗೆ ಆರ್ಥಿಕವಾಗಿ ಹೊರೆಯಾಗಬಹುದು.

ಅಂದರೆ ಆರ್ಥಿಕ ಸವಾಲು ಹೊರತುಪಡಿಸಿದರೆ ಬೇರೆ ಇನ್ಯಾವ ಅಡಚಣೆಗಳು ಎದುರಾಗುವುದಿಲ್ಲ ಆದರೆ ಸರಕಾರ ಗಳು ಮತ್ತು ಜನಪ್ರತಿನಿಧಿಗಳು ತಮ್ಮ ವೋಟ್ ಬ್ಯಾಂಕ್ ರಾಜಕಾರಣದ ಸಲುವಾಗಿ, ಓಲೈಕೆ ಮತ್ತು ತುಷ್ಟಿಕರಣದ ಸಲುವಾಗಿ,ತಮ್ಮ ಡೈನಾಸ್ಟಿ ಪಾಲಿಟಿಕ್ಸ ಸಲುವಾಗಿ ತಮ್ಮ ಮುಂದಿನ ಪೀಳಿಗೆಯನ್ನು ರಾಜಕಾರಣದಲ್ಲಿ ಭದ್ರಗೊಳಿಸುವ ಸಲುವಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ವರೆತು ಸರಕಾರದ ಆರ್ಥಿಕ ಬೊಕ್ಕಸವನ್ನು ಸಮರ್ಪಕ ರೀತಿಯಲ್ಲಿ ರೈತರ ಶ್ರೇಯೋಭಿವೃದ್ಧಿಗೆ ಉಪಯೋಗಿಸುತ್ತಿಲ್ಲ ಎಂಬುದು ಚಿಂತಿಸಬೇಕಾದ ವಿಚಾರ.

ಎಂ.ಎಸ್.ಪಿ.ಯ ಮತ್ತೊಂದು ಸವಾಲು ಏನೆಂದರೆ ನಾಪೆಡ್ ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ಕೊಬ್ಬರಿ ಖರೀದಿಯು ನಿಗದಿತ ಸಮಯಕ್ಕೆ ಆಗುತ್ತಿಲ್ಲ ಇದರ ಪರಿಣಾಮವಾಗಿ ಖರೀದಿಯ ದಿನಾಂಕ ವಿಳಂಬವಾದಂತೆ ಕೊಬ್ಬರಿಯ ತೂಕ ಕಡಿಮೆಯಾಗುತ್ತಿದೆ ಮತ್ತು ಕೊಬ್ಬರಿಯ ಗುಣಮಟ್ಟ ಕಡಿಮೆಯಾಗಿದೆ ಎಂದು ಕ್ಷುಲ್ಲಕ ಕಾರಣ ನೀಡಿ ರೈತರ ಉತ್ಪನ್ನಗಳನ್ನು ತಿರಸ್ಕರಿಸುವ ನೈಜ ನಿದರ್ಶನಗಳನ್ನು ಕಾಣಬಹುದಾಗಿದೆ ಇದು ಕೊಬ್ಬರಿಯ ಸಮಸ್ಯೆ ಮಾತ್ರ ಅಲ್ಲ ಇತರೆ ಉತ್ಪನ್ನಗಳನ್ನು ಬೆಳೆಯುವ ರೈತರು ಸಹ ಇದೇ ರೀತಿ ಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಆದ್ದರಿಂದ ರೈತರಿಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಷ್ಟು ಸಲೀಸಾಗಿ ನ-ಡ್ ನಲ್ಲಿಯೂ ಸಹ ಮಾರಾಟವನ್ನು ಮಾಡುವ ಅವಕಾಶವನ್ನು ಸರ್ಕಾರಗಳು ಕಲ್ಪಿಸಬೇಕು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ಅಂತಾರಾ ಷ್ಟ್ರೀಯ ಮಾರುಕಟ್ಟೆಯಲ್ಲಿ ರೈತರ ಸ್ವದೇಶ ಬೆಳೆಗಳನ್ನು ಮಾರಾಟ ಮಾಡಲು ಸರಕಾರದ ಮಟ್ಟದಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳಬೇಕು.

ಇದಕ್ಕೆ ಪೂರಕವಾಗಿ ಪ್ರತಿಯೊಂದು ಜಿಯಲ್ಲಿಯೂ ಸಹ ಕೋಲ್ಡ ಸ್ಟೋರೇಜ್ ಸ್ಥಾಪನೆ ಆಗಬೇಕು. ಒಂದು ವರದಿಯ ಪ್ರಕಾರ ತಾಯಿಯ ಎದೆ ಹಾಲಿನ ನಂತರ ಅತಿ ಹೆಚ್ಚು ಪೌಷ್ಟಿಕವಾಗಿರುವ ಆಹಾರವೆಂದರೆ ತೆಂಗಿನ ಎಣ್ಣೆಯಿಂದ ಸಿಗುವಂತಹ ಲಾರಿಕ್ ಆಸಿಡ ಆ ನಿಟ್ಟಿನಲ್ಲಿ ಇಂತಹ ತೆಂಗು ಬೆಳೆಯ ಅಸ್ಮಿತೆಯನ್ನು ಉಳಿಸುವ ಸಲುವಾಗಿ ತೆಂಗು ಬೆಳೆಯುವಂತಹ ಜಿಗಳಲ್ಲಿ ತೆಂಗು ಟೆಕ್ನಾಲಜಿ ಪಾರ್ಕ್ ಸ್ಥಾಪನೆ ಆಗಬೇಕು. ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆಯನ್ನು ನೀಡುವ ಮೂಲಕ ಯಾವ ರೀತಿಯಲ್ಲಿ ಕರ್ನಾಟಕದಲ್ಲಿ ಕೆಎಂಎಫ್ ಕರ್ನಾಟಕ ಮಿಲ್ಕ ಫೆಡರೇಶನ್ ಕಾರ್ಯ ನಿರ್ವಹಿಸುತ್ತಿದೆ ಅದೇ ರೀತಿ ಯಲ್ಲಿ ಕೃಷಿ ಉತ್ಪನ್ನಗಳಿಗೆ ಪ್ರತ್ಯೇಕ ಫೆಡರೇಶನ್ಗಳು ಸ್ಥಾಪನೆ ಆಗಬೇಕು ಇದರ ಸಹಾಯದಿಂದ ರೈತರು ತಾವು ಬೆಳೆದ ಬೆಳೆಗಳನ್ನು ಒಕ್ಕೂಟ ವ್ಯವಸ್ಥೆಯ ಮೂಲಕ ತಮ್ಮದೇ ಆದಂತಹ Indigenious brand ಮಾಡಬಹುದು ಮತ್ತು ತಮ್ಮ ಮೂಲಕ ಸಾವಿರಾರು ಜನಕ್ಕೆ ಉದ್ಯೋಗ ಸೃಷ್ಟಿ
ಮಾಡಬಹುದು.

ಒಬ್ಬ ಮಧ್ಯಮ ವರ್ಗದ ರೈತ ಕೃಷಿ ಮಾಡುವುದಕ್ಕೆ ಅವನು ಸರಕಾರದ ವತಿಯಿಂದ ಬೇರೆ ಇನ್ನೇನನ್ನು ಸಹ ನಿರೀಕ್ಷಿಸುವುದಿಲ್ಲ ಅವನು ನಿರೀಕ್ಷಿಸುವುದು ಕೇವಲ ವಿದ್ಯುತ್ ಸರಬರಾಜು ಕೆರೆಕಟ್ಟೆ ಚಾನಲ್‌ಗಳಿಗೆ ನೀರು ಮತ್ತು ಉತ್ತಮವಾದ ಬೆಲೆ ಮಾತ್ರ ಆದರೆ ಸರಕಾರಗಳು ಕೆರೆಕಟ್ಟೆ ಚಾನಲ್ಗಳಿಗೆ ಸಮರ್ಪಕ ವಾಗಿ ನೀರು ಹರಿಸುವುದರಲ್ಲಿ ವಿಫಲವಾಗಿವೆ. ಭಾರತದ ವಾಟರ್ ಬಜೆಟಅನ್ನು ಒಮ್ಮೆ ವೀಕ್ಷಿಸಿದರೆ ಸರಿಸುಮಾರು ಪ್ರತಿ ವರ್ಷ ೪೦೦ ಮಿಲಿಯನ್ ಹೆರ್ಕ್ಟ ಮೀರ್ಟ ನಷ್ಟು ಮಳೆ ಆಗುತ್ತದೆ.

ಅಂದರೆ ಪ್ರತಿ ವರ್ಷ ೧೧೫ ಮಿಲಿಯನ್ ಹೆಕ್ಟರ್ ಮೀಟರ್ ನಷ್ಟು ನೀರು ಉಪಯೋಗವಾಗದೆ ಸಮುದ್ರವನ್ನು ಸೇರುತ್ತಿದೆ. ಆದ್ದರಿಂದ ಈ ನೀರನ್ನು ನದಿ ಜೋಡಣೆಯ ಮೂಲಕ ಅಣೆಕಟ್ಟುಗಳ ನಿರ್ಮಾಣದ ಮೂಲಕ ಸಮರ್ಪಕವಾಗಿ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವಂತಹ ಯೋಜನೆಗಳನ್ನು ರೂಪಿಸಬೇಕು ಆದರೆ ಇವತ್ತಿನ ಜನಪ್ರತಿನಿಧಿಗಳು ವಿರೋಧ ಪಕ್ಷದಲ್ಲಿದ್ದಾಗ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಾರೆ ಆದರೆ ಅಧಿಕಾರಕ್ಕೆ ಬಂದಾಗ ಅದರ ಚಕಾರವನ್ನು ಸಹ ಎತ್ತುವುದಿಲ್ಲ ಏಕೆಂದರೆ ಅಧಿಕಾರದ ಚುಕ್ಕಾಣಿ ಯನ್ನು ಹಿಡಿಯುವ ಸಲುವಾಗಿ ನದಿ ವಿವಾದವಿರುವ ರಾಜ್ಯದಲ್ಲಿ ರುವ ಆಡಳಿತ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದೇ ಮೈತ್ರಿಕೂಟದಲ್ಲಿ ಇರುತ್ತಾರೆ ಆದ್ದ ಕಾರಣದಿಂದ ನಿರ್ಧಾರಗಳು ತಮ್ಮ ಮೈತ್ರಿ ಯನ್ನು ಬಿಗಿಪಡಿಸುವ ನಿಟ್ಟಿನಲ್ಲಿ ಇರುತ್ತವೆ ಹೊರೆತು ರೈತರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಇರುವುದಿಲ್ಲ ಇನ್ನೂ ಕೆಲವು ರಾಜಕಾರಣಿಗಳಿಗೆ ಇದರ ತಲೆ ಬುಡವು ಸಹ ತಿಳಿದಿರುವುದಿಲ್ಲ.

ಒಟ್ಟಾರೆಯಾಗಿ ಒಬ್ಬ ರೈತನಿಗೆ ಸಮರ್ಪಕವಾದ ವಿದ್ಯುತ್ ಸರಬರಾಜು ಕೆರೆ ಕಟ್ಟೆಗಳಿಗೆ ನೀರು ಹರಿಸುವುದು ಮತ್ತು ತಮ್ಮ ಬೆಳೆಗಳಿಗೆ ಉತ್ತಮವಾದ ಬೆಲೆಯನ್ನು ಸರ್ಕಾರಗಳು ದೊರಕಿಸಿಕೊಟ್ಟರೆ ರೈತರ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ ಜೊತೆಗೆ ದೇಶದ ಅಭಿವೃದ್ಧಿ ಸಹ ಆಗುತ್ತದೆ.

Leave a Reply

Your email address will not be published. Required fields are marked *