Sunday, 5th January 2025

ಉದ್ದೇಶ ತಿಳಿಯಿತು

ಪ್ರತಿಸ್ಪಂದನ

ಶಂಕರನಾರಾಯಣ ಭಟ್

‘ಕನ್ಯಾಕುಮಾರಿಯಲ್ಲಿನ ಸಾಧನಾದಿಂದ ಹೊಸ ಸಂಕಲ್ಪಗಳು’ ಎಂಬ ಶೀರ್ಷಿಕೆಯ ಪ್ರಧಾನಿ ನರೇಂದ್ರ ಮೋದಿಯವರ ಲೇಖನದಿಂದ, ಅವರ ಎರಡು ದಿನಗಳ ಧ್ಯಾನದ ಉದ್ದೇಶವನ್ನು ತಿಳಿ ಯುವಂತಾಯಿತು. ನಾವು ಒಂದು ಕ್ಷಣವನ್ನೂ ವ್ಯರ್ಥಮಾಡದೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ನಿಗದಿತ ಗುರಿಯತ್ತ ಸಾಗಬೇಕು, ಹೊಸ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಬೇಕು. ಅಷ್ಟೇ ಅಲ್ಲ, ನಮ್ಮ ಕನಸುಗಳನ್ನು ಜೀವಂತವಾಗಿಸ ಬೇಕು ಎಂಬ ಅವರ ಗ್ರಹಿಕೆ ಮತ್ತು ಚಿತ್ತಸ್ಥಿತಿ ಎಷ್ಟೊಂದು ಅರ್ಥ ಪೂರ್ಣ!

ಎರಡು ದಿನಗಳ ಧ್ಯಾನ ಮುಗಿಸಿ ಕನ್ಯಾಕುಮಾರಿಯಿಂದ ದೆಹಲಿಗೆ ತೆರಳುವಾಗಿನ ತಮ್ಮ ವಿಮಾನ ಪ್ರಯಾಣದಲ್ಲೂ ಅದೆಂಥಾ ಉದಾತ್ತ ವಿಚಾರಗಳ ಕಡೆಗೆ ಅವರ ಚಿತ್ತ ಹರಿದಿತ್ತು ಎಂಬುದು ಈ ಲೇಖನದಿಂದ ತಿಳಿದಂತಾಯಿತು. ‘ಭರತಭೂಮಿಯಲ್ಲಿ ಹುಟ್ಟಿದ್ದೇ ನಮ್ಮ ಅದೃಷ್ಟ’ ಎಂಬ ಮಾತು ಅವರು ಭಾರತದ ಬಗ್ಗೆಯೇ ಸದಾ ಆಲೋಚಿಸುತ್ತಾರೆ ಎಂಬುದರ ದ್ಯೋತಕವಾಗಿದೆ.

ಹಳೆಯ ಆಲೋಚನೆಗಳನ್ನು ಮತ್ತು ನಂಬಿಕೆಗಳನ್ನು ಮರುಮೌಲ್ಯ ಮಾಪನ ಮಾಡಲು ಇಂದು ನಮಗೆ ಸುವರ್ಣಾವಕಾಶವಿದೆ. ಮುಂದಿನ ದಿನಗಳನ್ನು ದೇಶಕ್ಕಾಗಿ ಮುಡಿಪಾಗಿಡೋಣ, ಮುಂಬರುವ ಪೀಳಿಗೆಗೆ ಅಡಿಪಾಯ ಹಾಕೋಣ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ ಎಂಬ ಅವರ ಮಾತು ದೇಶಪ್ರೇಮವನ್ನು ಮತ್ತು ಅಭಿಮಾನವನ್ನು ಅರಳಿಸುವಂತಿದೆ. ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕವನ್ನೇ ತಾವು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಿರುವ ಅವರು, ಕನ್ಯಾಕುಮಾರಿಯ ನೆಲ ಮತ್ತು ಸ್ವಾಮಿ ವಿವೇಕಾನಂದರ ಸೂರ್ತಿ ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳುವಲ್ಲಿ ಸಹಾಯಕವಾದವು.

ನಿರ್ಲಿಪ್ತತೆಯ ನಡುವೆ, ಶಾಂತಿ ಮತ್ತು ಮೌನದ ನಡುವೆ ಭಾರತದ ಉಜ್ವಲ ಭವಿಷ್ಯದ ಚಿಂತನೆ, ಸಾಗರ ವಿಶಾಲತೆಯ ಆಲೋಚನೆ. ಕನ್ಯಾಕುಮಾರಿಯು ವಿವೇಕಾನಂದ, ಮಹಾತ್ಮ ಗಾಂಽ, ತಿರುವಳ್ಳುವರ್, ಕಾಮರಾಜ ಮಣಿಯವರಂಥ ದಿಗ್ಗಜರ ಚಿಂತನಾ ಧಾರೆಗಳ ಸಮ್ಮಿಲನದ ಕೇಂದ್ರ, ಇದುವೇ ರಾಷ್ಟ್ರ
ನಿರ್ಮಾಣಕ್ಕೆ ಸೂರ್ತಿ ಎಂದಿದ್ದಾರೆ. ಇಷ್ಟೇ ಅಲ್ಲದೆ, ಈ ಹಿಂದೆಯೂ ಅವರಿಗೆ ಇಂಥ ಅಪರೂಪದ ಅವಕಾಶ ಸಿಕ್ಕಿತ್ತು ಎಂಬುದನ್ನೂ ನೆನಪಿಸಿ ಕೊಳ್ಳುತ್ತಾರೆ.

ವಿವೇಕಾನಂದ ಸ್ಮಾರಕ ನಿರ್ಮಿಸಿದ ಏಕನಾಥ ರಾನಡೆ ಅವರೊಂದಿಗೂ ತಾವು ಪಯಣಿಸಿದ್ದನ್ನು ನೆನಪಿಸುತ್ತ, ನಿರ್ಮಾಣದ ಹಂತದಲ್ಲೇ ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆಯುವ ಅವಕಾಶ ಲಭ್ಯವಾಗಿತ್ತು ಎಂದೆಲ್ಲಾ ಹೇಳಿಕೊಂಡಿದ್ದಾರೆ. ಇದು ಪೂರಾ ಲೇಖನದ ಅನುಭವದ ಪ್ರತಿರೂಪದಂತೆ ಕಂಡಿತು. ವಿಮಾನ ಪ್ರಯಾಣದ ಅವಽಯಲ್ಲೂ ಇಷ್ಟೊಂದು ವಿಚಾರಗಳನ್ನು ಮೋದಿಯವರು ಮೆಲುಕು ಹಾಕಿದ್ದಾರೆ ಎಂದರೆ, ಇವ್ಯಾವುದೂ ಅವರಿಗೆ
ಯಾರೋ ಹೇಳಿದ್ದಲ್ಲ ಅಥವಾ ಎಲ್ಲೋ ಕೇಳಿದ್ದಲ್ಲ, ಬದಲಿಗೆ ಅವರು ಸ್ವತಃ ಅನುಭವಿಸಿದ್ದು ಎಂಬುದನ್ನು ಗ್ರಹಿಸಿದರೆ, ಮೋದಿಯವರಿಗಿರುವ ದೇಶಾಭಿಮಾನದ ಅರಿವಾಗುತ್ತದೆ.

ಅವರ ರಾಷ್ಟ್ರಪ್ರೀತಿ ಇಂದು-ನಿನ್ನೆಯದಲ್ಲ, ಬದಲಿಗೆ ದಶಕಗಳಿಂದ ರೂಢಿಯಾಗಿ ಬಂದಿರುವುದು ಎಂಬುದು ಈ ಲೇಖನದಿಂದ ಸಾಬೀತಾಗಿದೆ. ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರೂ ತಮ್ಮ ದೇಶಾಭಿಮಾನ ಮತ್ತು ದೇಶದ ಬಗೆಗಿನ ಕಲ್ಪನೆಗಳನ್ನು ಒರೆಗೆ ಹಚ್ಚುವಂತೆ ಮಾಡಿದೆ ಈ ಲೇಖನ!

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *