Monday, 25th November 2024

ಗೋರಖಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ದಿನನಿತ್ಯದ ನೇರ ವಿಮಾನ ಹಾರಾಟಗಳ ಪ್ರಾರಂಭ

ಉತ್ತರಪ್ರದೇಶದಲ್ಲಿ ತನ್ನ ಗಗನಮುದ್ರಣ ಬಲಪಡಿಸಿದ ಆಕಾಶ ಏರ್; ಗೋರಖಪುರದಿಂದ ಕಾರ್ಯಾಚರಣೆಗಳು ಆರಂಭ, ರಾಜ್ಯದಲ್ಲಿ ಅದರ ಐದನೇ ನಗರ

80ಕ್ಕಿಂತ ಹೆಚ್ಚಿನ ವಾರ ಡೆಪಾರ್ಚರ್‌ಗಳೊಂದಿಗೆ ಭಾರತದಾದ್ಯಂತ ಉತ್ತರಪ್ರದೇಶದಿಂದ ಈಗ ಐದು ಪ್ರಮುಖ ನಗರಗಳಿಗೆ ತಡೆರಹಿತ ಸಂಪರ್ಕ

ಬೆಂಗಳೂರು: ಭಾರತದ ಅತಿವೇಗವಾಗಿ ಬೆಳೆಯುತ್ತಿರುವ ವಿಮಾನಸಂಸ್ಥೆಯಾದ ಆಕಾಶ ಏರ್, ಗೋರಖಪುರದಿಂದ ಕಾರ್ಯಾಚರಣೆಗಳನ್ನು ಆರಂಭಿಸಿ, ದೆಹಲಿ ಮತ್ತು ಬೆಂಗಳೂರಿನಿಂದ ಮತ್ತು ವಾಪಸ್ ದಿನನಿತ್ಯದ ನೇರ ಸಂಪರ್ಕಗಳನ್ನು ಕಲ್ಪಿಸಿದೆ. ಪ್ರಾರಂಭೋತ್ಸವದ ವಿಮಾನವು ಮಹಾ ಯೋಗಿ ಗೋರಖನಾಥ್ ವಿಮಾನನಿಲ್ದಾಣದಿಂದ ಮೇ 29, 2024ರಂದು 14:45 ಘಂಟೆಗಳಿಗೆ ಹೊರಟು, ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ 16:00 ಘಂಟೆಗಳಲ್ಲಿ ಬಂದು ತಲುಪಿತು. ಈ ಹೊಸ ಮಾರ್ಗವು, ಉತ್ತರಪ್ರದೇಶದಲ್ಲಿ ಆಕಾಶ ಏರ್‌ನ ಅಸ್ತಿತ್ವವನ್ನು ಬಲಪಡಿಸಿ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತಿದೆ.

ಗೋರಖಪುರ ಹಾಗೂ ಬೆಂಗಳೂರು ನಡುವೆ ನೇರ ವಿಮಾನಹಾರಾಟಗಳನ್ನು ಒದಗಿಸುವ ಏಕೈಕ ವಿಮಾನಸಂಸ್ಥೆ ಆಕಾಶ ಏರ್ ಆಗಿದ್ದು, ಇದು, ದೇಶಾದ್ಯಂತ ಮೆಟ್ರೋ ಹಾಗೂ ಮೆಟ್ರೋ ಅಲ್ಲದ ನಗರಗಳಿಗೆ ತಡೆರಹಿತ ಸಂಪರ್ಕ ಒದಗಿಸಬೇಕೆನ್ನುವ ವಿಮಾನಸಂಸ್ಥೆಯ ಬದ್ಧತೆಯನ್ನು ಎತ್ತಿಹಿಡಿಯುತ್ತದೆ.

ಇತಿಹಾಸ ಹಾಗೂ ಸಂಸ್ಕೃತಿಯ ಭಂಡಾರವಾಗಿರುವ ನಗರವಾದ ಗೋರಖಪುರ, ಕ್ಷಿಪ್ರಗತಿಯಲ್ಲಿ ಆರ್ಥಿಕ ಕೇಂದ್ರವಾಗಿ ಪರಿವರ್ತಿತಗೊಳ್ಳುತ್ತಿದೆ. ತನ್ನ ಪ್ರಧಾನ ಪ್ರದೇಶ ಹಾಗೂ ಸುಧಾರಣೆಯಾಗುತ್ತಿರುವ ಮೂಲಸೌಕರ್ಯಗಳೊಂದಿಗೆ, ನಗರವು, ವಿವಿಧ ರೀತಿಯ ಪ್ರವಾಸಿಗರಿಗೆ ಆಕರ್ಷಕ ಗಮ್ಯವಾಗಿ ಹೊರಹೊಮ್ಮುತ್ತಿದೆ. ದೆಹಲಿ ಮತ್ತು ಬೆಂಗಳೂರು-ಈ ಎರಡು ಪ್ರಮುಖ ಮೆಟ್ರೋ ನಗರಗಳೊಂದಿಗೆ ದಿನನಿತ್ಯದ ವಿಮಾನ ಹಾರಾಟಗಳು, ಈ ಮಾರ್ಗ ಗಳಲ್ಲಿ ವಿಮಾನ ಪ್ರಯಾಣಕ್ಕಾಗಿ ವರ್ಧಿತ ಹಾಗೂ ಕೈಗೆಟುಕುವಂತಹ ಆಯ್ಕೆಗಳನ್ನು ಒದಗಿಸಿ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಬೆಂಬಲ ಒದಗಿಸಲಿದೆ.

ತಾನು ಪ್ರಾರಂಭವಾದಾಗಿನಿಂದಲೂ ಆಕಾಶ ಏರ್, ಉತ್ತರಪ್ರದೇಶ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಪ್ರಗತಿಪರ ಗತಿಯಲ್ಲಿ ವಿಸ್ತರಿಸುತ್ತಿದ್ದು, ಈಗ ಈ ರಾಜ್ಯದಲ್ಲಿ ಲಕ್ನೌ, ವಾರಣಾಸಿ, ಅಯೋಧ್ಯ, ಪ್ರಯಾಗ ಹಾಗೂ ಗೋರಖಪುರದ 5 ಮೆಟ್ರೋಗಳನ್ನು ದೇಶಾದ್ಯಂತ ಇರುವ ಇತರ ಮೆಟ್ರೋಗಳೊಂದಿಗೆ ತಡೆರಹಿತವಾಗಿ ಸಂಪರ್ಕಿಸುತ್ತಿದೆ.

ಒಳಗೊಳ್ಳುವಂತಹ, ಪ್ರೀತಿಯ ಹಾಗೂ ಆರಾಮದಾಯಕ ಹಾರಾಟ ಅನುಭವವನ್ನು ಖಾತರಿಪಡಿಸಲು ಆಕಾಶ ಏರ್, ಅನೇಕ ಗುಣಮಟ್ಟದ ಉತ್ಪನ್ನ ಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಇದರ ಹೊಚ್ಚಹೊಸ ಫ್ಲೀಟ್ ಸಾಕಷ್ಟು ಕಾಲಿಗೆ ಸ್ಥಳಾವಕಾಶ ಮತ್ತು ವರ್ಧಿತ ಆರಾಮ ಒದಗಿಸುವುದರ ಜೊತೆಗೆ, ಬಹುತೇಕ ವಿಮಾನಗಳಲ್ಲಿ ಯುಎಸ್‌ಬಿ ಪೋರ್ಟ್ಸ್ ಅಳವಡಿಕೆಯಾಗಿ, ಪ್ರಯಾಣಿಕರು ವಿಮಾನಹಾರಾಟ ನಡೆಸುತ್ತಿರುವಾಗಲೇ ತಮ್ಮ ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳುವ ಅವಕಾಶ ಒದಗಿಸುತ್ತದೆ.ವಿಮಾನ ಸಂಸ್ಥೆಯ ಆನ್‍ಬೋರ್ಡ್ ಆಹಾರ ಸೇವೆಯಾದ Café Akasa, ಹಬ್ಬದ ಮೆನುಗಳು ಹಾಗೂ ಉದ್ಯಮದಲ್ಲೇ ಮೊಟ್ಟಮೊದಲನೆಯದಾದ ಆಯ್ಕೆಯಾಗಿ ಕೊಂಬುಚಾದಂತಹ ಆಯ್ಕೆಗಳು ಒಳಗೊಂಡಂತೆ, ಆರೋಗ್ಯ ಕರವಾದ ಹಾಗೂ ಸ್ವಾದಿಷ್ಟ ಆಹಾರವೈವಿಧ್ಯವನ್ನು ಒದಗಿಸುವ ಮೂಲಕ ಗಗನದಲ್ಲೇ ಗ್ರಾಹಕರಿಗೆ ತಲ್ಲೀನವಾದ ಭೋಜನ ಅನುಭವ ಒದಗಿಸುತ್ತದೆ.

Pets on Akasa ಪ್ರಯಾಣಿಕರು, ತಮ್ಮ ಸಾಕುಪ್ರಾಣಿಗಳನ್ನು, ಅವುಗಳ ತೂಕದ ಆಧಾರದ ಮೇಲೆ, ಕ್ಯಾಬಿನ್ ಒಳಗೆ ಅಥವಾ ಕಾರ್ಗೋದಲ್ಲಿ ಕರೆದೊ ಯ್ಯಲು ಅವಕಾಶ ಒದಗಿಸುತ್ತದೆ.ಇದರ ಜೊತೆಗೆ, ಪ್ರಯಾಣವನ್ನು ಒಳಗೊಳ್ಳುವಂತೆ ಮಾಡುವ ಪ್ರಯತ್ನದೆಡೆಗೆ, ಆಕಾಶ ಏರ್, ದೃಷ್ಟಿಮಾಂದ್ಯತೆ ಯಿರುವವರಿಗಾಗಿ ಬ್ರೇಲ್‌ನಲ್ಲಿ ತನ್ನ ಸುರಕ್ಷತಾ ಸೂಚನಾ ಕಾರ್ಡ್ ಮತ್ತು ಆನ್‌ಬೋರ್ಡ್ ಮೆನು ಕಾರ್ಡ್ ಪರಿಚಯಿಸಿದೆ. ಪ್ರಯಾಣಿಕರು, ಕೈಗೆಟುಕುವ ದರಗಳಲ್ಲಿ ಎಲ್ಲವೂ-ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಪರಿವರ್ತಿಸಬಹುದಾದ ರಜಾ ಪ್ಯಾಕೇಜ್ Akasa Holidays ಕೂಡ ಆಯ್ಕೆ ಮಾಡಿಕೊಳ್ಳ ಬಹುದು.

ಆಕಾಶ ಏರ್‌ನ ನಿರಂತರವಾದ ಆನ್-ಟೈಮ್ ನಾಯಕತ್ವ, ಕಾರ್ಯಾಚರಣೆ ಸಾಮರ್ಥ್ಯಗಳು ಹಾಗು ಬಹಳ ಧನಾತ್ಮಕವಾದ ಗ್ರಾಹಕ ಅಭಿಪ್ರಾಯಗಳು ಅದನ್ನು ಭಾರತದಲ್ಲಿ ಇಷ್ಟಪಡುವ ವಿಮಾನವಾಗಿ ಮಾಡಿ, ಕಳೆದ 12 ತಿಂಗಳುಗಳಿಂದ 85%ಗಿಂತ ಹೆಚ್ಚಿನ ಸರಾಸರಿ ಪ್ರಯಾಣಿಕ ಲೋಡ್ ಅಂಶಗಳಿಗೆ ಕಾರಣವಾಗಿದೆ.

ಆಗಸ್ಟ್ 2022ರಲ್ಲಿ ಪ್ರಾರಂಭವಾದಾಗಿನಿಂದಳು ಆಕಾಶ ಏರ್, 8 ದಶಲಕ್ಷಕ್ಕಿಂತ ಹೆಚ್ಚಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸಿ, ಮುಂಬೈ, ಅಹಮದಾಬಾದ್, ಬೆಂಗಳೂರು, ಚೆನ್ನೈನ್, ಕೊಚ್ಚಿನ್, ದೆಹಲಿ, ಗೌಹಾತಿ, ಅಗರ್ತಾಲ, ಪುಣೆ, ಲಕ್ನೌ, ಗೋವಾ, ಹೈದರಾಬಾದ್, ವಾರಣಾಸಿ ಬಾಗ್ಡೊಗ್ರ, ಭುವನೇಶ್ವರ, ಕೋಲ್ಕತ್ತ, ಪೋರ್ಟ್ ಬ್ಲೇರ್, ಅಯೋಧ್ಯ, ಗ್ವಾಲಿಯರ್, ಶ್ರೀನಗರ, ಪ್ರಯಾಗ್‌ರಾಜ್, ಗೋರಖ್‌ಪುರ್, ದೋಹಾ(ಖಾತಾರ್), ಮತ್ತು ಜೆಡ್ಡ(ಸೌದಿ ಅರೇಬಿಯ) ಮುಂತಾದ 24 ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದೆ.