ಒಡಿಶಾ: ಲೋಕಸಭಾ ಫಲಿತಾಂಶದ ಜೊತೆಗೆ ಒಡಿಶಾ ವಿಧಾನಸಭಾ ಚುನಾವಣೆಯ ರಿಸಲ್ಟ್ ಹೊರ ಬಿದಿದ್ದು, ಬಿಜೆಡಿ ಸರ್ಕಾರ ನೆಲ ಕಚ್ಚಿದ್ದು ಬಿಜೆಪಿ ಬಹುಮತ ಪಡೆದುಕೊಂಡಿದೆ.
ಚುನಾವಣೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಮುಸ್ಲಿಂ ಅಭ್ಯರ್ಥಿ ಸೋಫಿಯಾ ಫಿರ್ದೌಸ್ ಗೆಲುವು ಸಾಧಿಸಿರುವುದು ದಾಖಲೆಯಾಗಿದೆ.
ಸೋಫಿಯಾ ಫಿರ್ದೌಸ್ 32 ವರ್ಷದ ಚೆಲುವೆ. ರಾಜಕೀಯ ಕುಟುಂಬದ ಮಹಿಳೆ. ಇವರ ತಂದೆ ಮೊಹಮ್ಮದ್ ಮೊಕ್ವಿಮ್ ಕಾಂಗ್ರೆಸ್ನ ಹಿರಿಯ ನಾಯಕ ರಾಗಿದ್ದಾರೆ. ಪಕ್ಷವು 2024ರ ಬಾರಾಬತಿ-ಕಟಕ್ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ತಂದೆಯ ಬದಲಿಗೆ ಮಗಳನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತು. ಅದರಂತೆ ಸೋಫಿಯಾ ಫಿರ್ದೌಸ್ ವಿಜಯಶಾಲಿಯಾಗಿದ್ದಾರೆ.
ಕಳಿಂಗ ಯುನಿರ್ವಸಿಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಿರುವ ಸೋಫಿಯಾ ಫಿರ್ದೌಸ್ 2022ರಲ್ಲಿ ಬೆಂಗಳೂರಿನ ಐಐಎಂಬಿ ಯಲ್ಲಿ ಜನರಲ್ ಮ್ಯಾನೆಜ್ಮೆಂಟ್ ಪ್ರೋಗ್ರಾಮ್ ಮುಗಿಸಿದ್ದಾರೆ. ಓದು ಮುಗಿದ ಮೇಲೆ 2023ರಲ್ಲಿ ಭುವನೇಶ್ವರ್ದ ರಿಯಲ್ ಎಸ್ಟೇಟ್ ಅಸೋಸಿಯೇ ಷನ್ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ.
2024ರ ಒಡಿಶಾ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡಿದ್ದು 147 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ನವೀನ್ ಪಟ್ನಾಯಕ್ ಮತ್ತು ಬಿಜು ಜನತಾ ದಳ (ಬಿಜೆಡಿ) ಅವರ 24 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. ಒಡಿಶಾಸ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ 21 ಸ್ಥಾನಗಳ ಪೈಕಿ 20ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲುವು ಪಡೆದಿದೆ.