Sunday, 5th January 2025

ನಟಿ ಸೋನಾಕ್ಷಿ ಸಿನ್ಹಾ ಹಸೆಮಣೆ ಏರಲು ಸಿದ್ಧ

ಮುಂಬೈ: ಸೋನಾಕ್ಷಿ ಸಿನ್ಹಾ ತನ್ನ ಬಹು ದಿನದ ಗೆಳೆಯ ಜಾಹೀರ್ ಇಕ್ವಾಲ್ ಅವರೊಂದಿಗೆ ವಿವಾಹವಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸೋನಾಕ್ಷಿ ಸಿನ್ಹಾ ಮದುವೆ ಆಮಂತ್ರಣ ಪತ್ರಿಕೆ ಹರಿದಾಡುತ್ತಿದೆ.

ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ಬಾಲ್ ಇಬ್ಬರ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ಬಾಯ್‌ಫ್ರೆಂಡ್ ಜೊತೆ ಸೋನಾಕ್ಷಿ ಸಿನ್ಹಾ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ವಾಲ್ ಮುಂಬೈನಲ್ಲಿ ಇದೇ ಜೂ.23ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿಗಳಾಗಿವೆ.

ಜೂನ್ 23ಕ್ಕೆ ಮದುವೆ ಬಳಿಕವೇ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದ್ದು, ಮದುವೆಗೆ ಬರುವ ಅತಿಥಿಗಳಿಗೆ ಫಾರ್ಮಲ್ಸ್ ಡ್ರೆಸ್‌ನಲ್ಲಿ ಬರುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಜಹೀರ್ ನೋಟ್‌ಬುಕ್ ಮತ್ತು ಡಬಲ್ ಎಕ್ಸ್‌ಎಲ್‌ನಂತಹ ಚಲನಚಿತ್ರಗಳಲ್ಲಿ ಹಾಗೂ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ, ದಬಾಂಗ್‌ನೊಂದಿಗೆ ಪಾದಾರ್ಪಣೆ ಮಾಡಿದ ನಂತರ ಒಂದು ದಶಕದಿಂದ ಬಾಲಿವುಡ್‌ನ ಭಾಗವಾಗಿದ್ದಾರೆ.

Leave a Reply

Your email address will not be published. Required fields are marked *