Sunday, 5th January 2025

ಉಚಿತ ಊಟ ಮತ್ತು ಹೈ-ಟೀ ಒಳಗೊಂಡ ಮಾನ್ಸೂನ್‌ ಆಫರ್‌ನನ್ನು ಘೋಷಿಸಿದ ವಂಡರ್‌ಲಾ

ಮನರಂಜನಾ ತಾಣವಾದ ವಂಡರ್‌ಲಾ ಅಮ್ಯೂಸ್‌ಮೆಂಟ್‌ಪಾರ್ಕ್‌ ಮಳೆಗಾಲವನ್ನು ಇನ್ನಷ್ಟು ಮೋಜುಭರಿತ ಮಾಡುವ ಉದ್ದೇಶದಿಂದ ಮಾನ್ಸೂನ್‌ ಆಫರ್‌ನನ್ನು ಘೋಷಿಸಿದೆ.

ಹೌದು, ಈ ಮಾನ್ಸೂನ್‌ ಸಮಯದಲ್ಲಿ ನೀವು ವಂಡರ್‌ಲಾ ಟಿಕೆಟ್‌ನನ್ನು ಖರೀದಿಸಿದರೆ ಅದರೊಂದಿಗೆ ಉಚಿತ ಊಟ ಹಾಗೂ ಹೈ-ಟೀ ಒಳಗೊಂಡಿರ ಲಿದೆ.
ವಂಡರ್‌ಲಾದಲ್ಲಿ ಮನರಂಜನೆ ಪಡೆಯಲು ಬರುವ ಜನರು ಎಲ್ಲಾ ರೀತಿಯ ಆಟಗಳನ್ನು ಆಡಿದ ಬಳಿಕ ಹೆಚ್ಚು ಆಯಾಸಗೊಂಡಿರುತ್ತಾರೆ, ಹೀಗಾಗಿ ಈ ಮಾನ್ಸೂನ್‌ ಆಫರ್‌ನಲ್ಲಿ ಸಾಮಾನ್ಯ ವಯಸ್ಕ ಮತ್ತು ಕಾಲೇಜು ID ಹೊಂದಿರುವ (16-24 ವರ್ಷ ಒಳಗಿನ) ವಿದ್ಯಾರ್ಥಿಗಳು ಪಾರ್ಕ್ ಟಿಕೆಟ್‌ನ ದರದಲ್ಲಿ ಅವರಿಗೆ ಉಚಿತವಾಗಿ ಊಟ ಹಾಗೂ ಹೈ-ಟೀ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕೊಡುಗೆಯು ಆನ್‌ಲೈನ್‌ನಲ್ಲಿ ಬುಕ್‌ ಮಾಡುವವರಿಗೆ ಮಾತ್ರ ಲಭ್ಯವಿರಲಿದೆ.

ಈ ಮಾನ್ಸೂನ್‌ ಸಂದರ್ಭದಲ್ಲಿ ನಿಮ್ಮ ಮೋಜನ್ನು ಇನ್ನಷ್ಟು ಉತ್ಸುಹದಾಯಕ ಮಾಡಲು ವಾರ್ಮ್‌ ವಾಟಲ್‌ ಪೂಲ್‌, ರಿಫ್ರೆಶ್‌ ವಾಟರ್‌ ಸ್ಲೈಡ್‌ಗಳು  ಸೇರಿದಂತೆ ವಿಭಿನ್ನ ಆಟಗಳು ನಿಮ್ಮನ್ನು ಮನರಂಜನೆಗೊಳಿಸುತ್ತದೆ. ಈ ಮಾನ್ಸೂನ್‌ನ ಮತ್ತೊಂದು ವಿಶೇಷವೆಂದರೆ, ಮಳೆ ಬರುವ ಸಂದರ್ಭಗಳಲ್ಲೂ ಸಹ ಎಲ್ಲಾ ರೀತಿಯ ರೈಡ್‌ಗಳು ಹಾಗೂ ಗೇಮ್‌ಗಳು ಚಾಲ್ತಿಯಲ್ಲಿರುತ್ತವೆ, ನೀವು ಮಳೆಯೊಂದಿಗೆ ಆಟದ ಮಜವನ್ನು ಇನ್ನಷ್ಟು ಅನುಭವಿಸಬಹುದು.

ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ಮೊದಲ ಬಾರಿಗೆ ಮಾನ್ಸೂನ್‌ ಕೊಡುಗೆ ಯನ್ನು ಘೋಷಿಸಿದ್ದೇವೆ, ಮಳೆಗಾಲದ ಸಂದರ್ಭದಲ್ಲಿಯೂ ಸಾಕಷ್ಟು ಜನರಿಗೆ ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿ ಮನರಂಜನೆ ಪಡೆಯುವ ಇಂಗಿತವಿರುತ್ತದೆ, ಅಂಥವರಿಗಾಗಿಯೇ ಈ ಬಾರಿ ಮಾನ್ಸೂನ್‌ ಆಫರ್‌ ನೀಡಿದ್ದು, ನೀವು ಖರೀದಿಸುವ ಟಿಕೆಟ್‌ನೊಂದಿಗೆ ಉಚಿತ ಊಟ ಹಾಗೂ ಹೈ-ಟೀ ವ್ಯವಸ್ಥೆಯನ್ನೂ ಮಾಡಲಿದ್ದೇವೆ ಎಂದು ಹೇಳಿದರು.

ವಂಡರ್‌ಲಾ ಆನ್‌ಲೈನ್ ಪೋರ್ಟಲ್ https://bookings.wonderla.com/ ಮೂಲಕ ಮುಂಗಡವಾಗಿ ಪ್ರವೇಶ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು ಅಥವಾ ಬೆಂಗಳೂರು ಪಾರ್ಕ್ ಅನ್ನು ಸಂಪರ್ಕಿಸಬಹುದು -: +91 80372 30333 or +91 80350 73966

Leave a Reply

Your email address will not be published. Required fields are marked *