Sunday, 5th January 2025

ಜೀವ ಉಳಿಸುವ ಕೊಡುಗೆಗಳಾದ ರಕ್ತದ ವಿಭಿನ್ನ ಉತ್ಪನ್ನಗಳನ್ನು ಕುರಿತು ತಿಳಿದುಕೊಳ್ಳಿರಿ

– ಡಾ. ಆದರ್ಶ್ ನಾಯಕ್, ಜನರಲ್ ಫಿಸಿಷಿಯನ್, ಟ್ರೈಲೈಫ್ ಆಸ್ಪತ್ರೆ

ಆರೋಗ್ಯ ಸೇವೆಯಲ್ಲಿ ರಕ್ತ ವರ್ಗಾವಣೆಗಳು ಬಹಳ ಮುಖ್ಯ ಚಕಿತ್ಸಾ ವಿಧಾನಗಳಾಗಿವೆ. ವಿಶೇಷವಾಗಿ ರಕ್ತದ ಕೊರತೆಯನ್ನು ಎದುರಿಸುವ ಮಹಿಳೆಯರು ಮತ್ತು ಮಕ್ಕಳ ಜೀವಗಳನ್ನು ಉಳಿಸುವ ಇವು ಮುಖ್ಯ ಪಾತ್ರ ವಹಿಸುತ್ತವೆ. ಭಾರತದಲ್ಲಿ ರಕ್ತಕ್ಕೆ ಬೇಡಿಕೆ ಬಹಳ ಹೆಚ್ಚಾಗಿದೆ. ವಾರ್ಷಿಕವಾಗಿ ಸುಮಾರು 5 ಕೋಟಿ ಯುನಿಟ್‌ಗಳಷ್ಟು ಅಚ್ಚರಿಯ ಪ್ರಮಾಣದ ರಕ್ತದ ಅಗತ್ಯವಿದೆ. ಜೊತೆಗೆ ಪೂರೈಕೆ ಮತ್ತು ಬೇಡಿಕೆಯ ಅಂತರ ಗಮನಾರ್ಹವಾಗಿ ಕಾಡಿದೆ. ಪ್ರತಿ ಎರಡು ಸೆಕೆಂಡುಗಳಲ್ಲಿ ದೇಶದ ಯಾವುದಾದರೂ ಮೂಲೆಯಲ್ಲಿ ಯಾರೊಬ್ಬರಿಗಾದರೂ ರಕ್ತದ ಅಗತ್ಯ ಇರುತ್ತದೆ. ಅಂದರೆ ಇದರಿಂದ ದಿನಾಲೂ ಒಟ್ಟಾರೆ 35,000 ರಕ್ತದಾನದ ಅಗತ್ಯ ಇರುತ್ತದೆ. ಮನುಷ್ಯನ ರಕ್ತಕ್ಕೆ ಬದಲಿ ವಸ್ತು ಯಾವುದೂ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಬೃಹತ್ ಬೇಡಿಕೆಯನ್ನು ಪೂರೈಸುವಲ್ಲಿ ರಕ್ತದಾನಿಗಳ ಪಾತ್ರ ಬಹಳ ಮುಖ್ಯ ಎಂಬುದನ್ನು ಇದು ಒತ್ತಿ ಹೇಳುತ್ತದೆ.

ರಕ್ತ ಮತ್ತು ರಕ್ತದ ಉತ್ಪನ್ನಗಳ ಬೇಡಿಕೆಯಲ್ಲಿ ಕ್ಷಪ್ರಗತಿಯ ಹೆಚ್ಚಳವಾಗಿರುವುದನ್ನು ಪರಿಗಣಿಸಿ ಜನರ ನಡುವೆ ರಕ್ತದಾನದ ಅಗತ್ಯ ಕುರಿತು ಜಾಗೃತಿ ಹೆಚ್ಚಿಸುವುದು ಕಡ್ಡಾಯವಾಗಿರುತ್ತದೆ. 18ರಿಂದ 65 ವರ್ಷ ವಯೋಮಿತಿಯ ಹಾಗೂ ಕನಿಷ್ಟ 50 ಕೆಜಿ ತೂಕ ಹೊಂದಿರುವ ಆರೋಗ್ಯ ಪೂರ್ಣ ವ್ಯಕ್ತಿಗಳು ವರ್ಷಕ್ಕೆ 6 ಬಾರಿ ರಕ್ತದಾನ ಮಾಡಬಹುದು. ಪ್ರತಿ ಎರಡು ರಕ್ತದಾನಗಳ ನಡುವೆ ಎರಡು ತಿಂಗಳುಗಳ ಅಂತರ ಇರಬೇಕೆಂದು ಶಿಫಾರಸ್ಸು ಮಾಡಲಾಗುತ್ತದೆ.

ಪ್ಲೇಟ್‌ಲೆಟ್‌ಗಳನ್ನು ಪ್ರತಿ ಏಳು ದಿನಕ್ಕೊಮ್ಮೆ ದಾನ ಮಾಡಬಹುದು. ವರ್ಷಕ್ಕೆ 24 ಬಾರಿವರೆಗೆ ದಾನ ಮಾಡಬಹುದು. ಕೆಂಪು ರಕ್ತ ಕಣಗಳನ್ನು ಪ್ರತಿ 112 ದಿನಕ್ಕೊಮ್ಮೆ, ವರ್ಷಕ್ಕೆ ಮೂರು ಬಾರಿವರೆಗೆ ದಾನ ಮಾಡಬಹುದು. ಈ ಮಾರ್ಗದರ್ಶಿ ನಿಯಮಗಳಿಗೆ ಅಂಟಿಕೊಳ್ಳುವುದು ಮುಖ್ಯವಾಗಿರುತ್ತದೆ. ಏಕೆಂದರೆ ಈ ಅಂತರವನ್ನು ಮೀರಿದಲ್ಲಿ ರಕ್ತಹೀನತೆ ಅಥವಾ ಅನಿಮಿಯಾ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆಯಲ್ಲದೆ, ಇದರಿಂದ ಸಂಕೀರ್ಣ ತೊಂದರೆಗಳಿಗೆ ದಾರಿಯಾಗಬಹುದು. ರಕ್ತದಾನದಿಂದ ಅದನ್ನು ಪಡೆಯುವವರಿಗೆ ಮಾತ್ರ ಲಾಭವಾಗುವುದಿಲ್ಲ. ಇದರೊಂದಿಗೆ ದಾನಿಗಳಿಗೂ ಕೂಡ ಪ್ರಯೋಜನವಿರುತ್ತದೆ. ದೇಹದಲ್ಲಿ ಕಬ್ಬಿಣದ ದಾಸ್ತಾನು ಹೆಚ್ಚಾಗುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ ಅಲ್ಲದೆ, ಇದರಿಂದ ಹೃದಯ ಮತ್ತು ಯಕೃತ್ ಅಂದರೆ ಪಿತ್ತಜನಕಾಂಗದ ಕಾರ್ಯದಲ್ಲಿ ಸುಧಾರಣೆಯಾಗುತ್ತದೆ. ಆದ್ದರಿಂದ ರಕ್ತದ ಅಗತ್ಯವಿರುವವರಿಗೆ ಮಾತ್ರವಲ್ಲದೆ ಸಮಾಜದ ಒಟ್ಟಾರೆ ಆರೋಗ್ಯಕ್ಕಾಗಿ ರಕ್ತದಾನದ ಸಂಸ್ಕೃತಿಯನ್ನು ಪೋಷಿಸುವುದು ಬಹಳ ಮುಖ್ಯವಾಗಿರುತ್ತದೆ.

ಅತ್ಯಂತ ಸಾಮಾನ್ಯವಾದ ರಕ್ತದ ವಿಧಗಳಾದ “ಒ’’ ಪಾಸಿಟಿವ್ ಮತ್ತು “ಎ’’ ಪಾಸಿಟಿವ್‌ಗಳಲ್ಲಿ ಅತ್ಯಂತ ಹೆಚ್ಚಿನ ರಕ್ತದಾನಗಳ ಅಗತ್ಯ ಇರುತ್ತದೆ. ಇಂತಹ ವಿಧದ ರಕ್ತ ಹೊಂದಿರುವ ದಾನಿಗಳಿಂದ ಸಂಪೂರ್ಣ ರಕ್ತದಾನಗಳನ್ನು ಬಹಳಷ್ಟು ಪ್ರೋತ್ಸಾಹಿಸಲಾಗುತ್ತದೆ. ಏಕೆಂದರೆ ಇವರ ರಕ್ತವನ್ನು ಮೂರು ಪ್ರಮುಖವಾದ ರಕ್ತದ ಬಿಡಿಭಾಗಗಳಾಗಿ ಪ್ರತ್ಯೇಕಿಸಬಹುದಲ್ಲದೆ, ಈ ಮೂಲಕ ಅವುಗಳ ಬಳಕೆಯನ್ನು ಗರಿಷ್ಟಗೊಳಿಸಬಹುದು. ಈ ಬಿಡಿ ಭಾಗಗಳಲ್ಲಿ ತಾಜಾ ಗಣೀಕೃತ ಪ್ಲಾಸ್ಮಾ, ಪ್ಲೇಟ್‌ಲೆಟ್‌ಗಳು(ಇವು ಸಿಂಗಲ್ ಡೋನರ್ ಪ್ಲೇಟ್‌ಲೆಟ್ ಮತ್ತು ರ‍್ಯಾಂಡಮ್ ಡೋನರ್ ಪ್ಲೇಟ್‌ಲೆಟ್‌ಗಳಾಗಿ ಲಭ್ಯವಿರುತ್ತದೆ.)ಮತ್ತು ಪ್ಯಾಕ್ ಮಾಡಲಾದ ಕೆಂಪು ರಕ್ತಕಣಗಳು ಸೇರಿರುತ್ತವೆ. ದಾನಿಯ ರಕ್ತವನ್ನು ಸಂಗ್ರಹಿಸಿದಾಗ ಅದನ್ನು ಮೊದಲು ಸಾಂಕ್ರಾಮಿಕ ರೋಗಗಳಿಗಾಗಿ ಪರೀಕ್ಷೆ ಮಾಡಲಾಗುತ್ತದೆ. ನಂತರ ಅದನ್ನು ಪ್ಲಾಸ್ಮಾ, ಪ್ಲೇಟ್‌ಲೆಟ್‌ಗಳು ಮತ್ತು ಆರ್‌ಬಿಸಿ ಅಂದರೆ ಕೆಂಪು ರಕ್ತಕಣಗಳಾಗಿ ವಿಂಗಡಿಸಲು ಸಂಸ್ಕರಣೆ ಕೈಗೊಳ್ಳಲಾಗುತ್ತದೆ. ಇದರಿಂದ ಒಂದು ರಕ್ತದಾನ ಮೂರು ಜೀವಗಳನ್ನು ಉಳಿಸಬಹುದು ಎಂಬುದು ತಿಳಿದುಬರುತ್ತದೆ.

ರಕ್ತದಾನಕ್ಕೆ ಮುನ್ನ ಸಿದ್ಧತೆ ಬಹಳ ಮುಖ್ಯವಾಗಿರುತ್ತದೆ. ಸಾಕಷ್ಟು ನೀರಿನ ಸೇವನೆ ಮತ್ತು ಏಳು ಗಂಟೆಗಳ ವಿಶ್ರಾಂತಿಯುತ ನಿದ್ರೆಯ ಶಿಫಾರಸ್ಸು ಮಾಡಲಾಗುತ್ತದೆ. ಮದ್ಯ ಸೇವನೆ ಮತ್ತು ಕೊಬ್ಬಿರುವ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಲು ಶಿಫಾರಸ್ಸು ಮಾಡಲಾಗುತ್ತದೆ. ಈ ಮೂಲಕ ಸಾಂಕ್ರಾಮಿಕ ರೋಗಗಳಿಗೆ ಪರೀಕ್ಷೆ ನಡೆಸುವ ಖಾತ್ರಿ ಮಾಡಿಕೊಳ್ಳಲಾಗುತ್ತದೆ. ರಕ್ತದಾನದ ನಂತರ ದೇಹದ ಕಬ್ಬಿಣದ ಮಟ್ಟವನ್ನು ಮತ್ತೆ ತುಂಬಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಇದಕ್ಕಾಗಿ ಕಬ್ಬಿಣದಿಂದ ಸಮೃದ್ಧವಾದ ಆಹಾರ ಪದಾರ್ಥಗಳು ಅಥವಾ ಬದಲಿ ಪದಾರ್ಥಗಳು ಅಲ್ಲದೆ, ವಿಟಮಿನ್ ಸಿ ಉನ್ನತ ಪ್ರಮಾಣದಲ್ಲಿರುವ ಪದಾರ್ಥಗಳನ್ನು ಸೇವಿಸಲು ಶಿಫಾರಸ್ಸು ಮಾಡಲಾಗುತ್ತದೆ. ಇವುಗಳಿಂದ ದೇಹವು ಕಬ್ಬಿಣದ ಅಂಶವನ್ನು ಹೀರಿಕೊಳ್ಳು ವುದು ಹೆಚ್ಚುತ್ತದೆ. ರಕ್ತದಾನದ ನಂತರ ಕೆಂಪು ರಕ್ತಕಣಗಳ ಸಂಖ್ಯೆ ಮತ್ತು ಹಿಮೋಗ್ಲೋಬಿನ್ ಮಟ್ಟಗಳಲ್ಲಿ ತಾತ್ಕಾಲಿಕವಾಗಿ ಇಳಿಕೆಯಾಗುವುದರಿಂದ ಈ ಪದಾರ್ಥಗಳನ್ನು ಸೇವಿಸಲು ಶಿಫಾರಸ್ಸು ಮಾಡಲಾಗುತ್ತದೆ.

ರಕ್ತದ ವಿಧಗಳಲ್ಲಿನ ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಮುಖ್ಯವಾಗಿ ನಾಲ್ಕು ರಕ್ತದ ವಿಧಗಳಿವೆ. ಇವು ಎ, ಬಿ, ಎಬಿ ಮತ್ತು ಒ ಆಗಿದ್ದು, ರಕ್ತ ವರ್ಗಾವಣೆಯ ಹೊಂದಾಣಿಕೆಯಲ್ಲಿ ಇವು ಅನನ್ಯ ಪಾತ್ರವಹಿಸುತ್ತವೆ. ಒ ನೆಗೆಟಿವ್ ರಕ್ತ ಹೊಂದಿರುವ ವ್ಯಕ್ತಿಗಳು ಸಾರ್ವತ್ರಿಕ ದಾನಿಗಳಾಗಿರುತ್ತಾರೆ. ಎಬಿ ನೆಗೆಟಿವ್ ಹೊಂದಿರುವ ವ್ಯಕ್ತಿಗಳು ಪ್ಲಾಸ್ಮಾದ ಸಾರ್ವತ್ರಿಕ ದಾನಿಗಳಾಗಿರುತ್ತಾರೆ. ದೊಡ್ಡ ಪ್ರಮಾಣದಲ್ಲಿ ರಕ್ತ ವರ್ಗಾವಣೆ ಇರುವ ರೋಗಿಗಳಿಗೆ ಇವರು ಸೂಕ್ತರಾಗಿರುತ್ತಾರೆ.

ರಕ್ತದಾನದ ಕಾರ್ಯವು ಜೀವವನ್ನು ಉಳಿಸುವಂತಹ ನಿಸ್ವಾರ್ಥ ಮತ್ತು ಅಮೂಲ್ಯ ಕೊಡುಗೆಯಾಗಿದೆ. ವಿಭಿನ್ನ ರಕ್ತದ ಉತ್ಪನ್ನಗಳನ್ನು ಕುರಿತು ತಿಳಿದುಕೊಳ್ಳುವುದರಿಂದ, ರಕ್ತದಾನದ ಮಾರ್ಗದರ್ಶಿ ನಿಯಮಗಳಿಗೆ ಅಂಟಿಕೊಳ್ಳುವುದರಿ0ದ ಮತ್ತು ಈ ಕುರಿತು ಜಾಗೃತಿಯನ್ನು ಪ್ರೋತ್ಸಾಹಿಸುವು ದರಿಂದ ರಕ್ತದ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ನಾವು ತುಂಬಬಹುದು. ಇದರೊಂದಿಗೆ ಹೆಚ್ಚು ಆರೋಗ್ಯಕರ ಮತ್ತು ಸ್ಥಿರವಾದ ಸಮಾಜದ ಖಾತ್ರಿ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *