Sunday, 5th January 2025

ಉದ್ಯೋಗ ಸೃಷ್ಟಿ: ಭಾರತಕ್ಕೆ 3ನೇ ಸ್ಥಾನ !

ಅನಿಸಿಕೆ

ಸಿದ್ದಾರ್ಥ ಸುಪಲಿ

ಜಗತ್ತಿನಲ್ಲಿ ಕರೋನಾ ವೈರಸ್ ರೋಗ ವ್ಯಾಪಿಸಿದ ಹಿನ್ನೆಲೆಯಲ್ಲಿ ಹಲವಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತ ದಂಥ ರಾಷ್ಟ್ರದಲ್ಲಿ ಪ್ರತಿಶತ ಐವತ್ತರಷ್ಟು ಜನರು ಯುವ ಜನಾಂಗವಾಗಿದೆ. ದೇಶದಲ್ಲಿ ಯುವ ಸಮುದಾಯ  ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ.

ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಾದ ಗಾಳಿ, ಸೌರಶಾಖ, ಭೂಶಾಖ, ಜಲವಿದ್ಯುತ್, ಅಲೆಗಳು, ಜೀವರಾಶಿಗಳ ಮೂಲಕ ತಂತ್ರಾಂಶಗಳ ಬಳಕೆ ಮಾಡಿಕೊಂಡು ಹೊಸ ತರಹದ ಉದ್ಯೋಗಗಳನ್ನು ಕಲ್ಪಿಸಬಹುದಾಗಿದೆ. ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಲ್ಲಿ ಚೀನಾ ಹಾಗೂ ಬ್ರೆಜಿಲ್ ದೇಶಗಳ ನಂತರ ಭಾರತವು ಅತ್ಯಂತ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವು ದರಲ್ಲಿ ಯಶಸ್ವಿಯಾಗುತ್ತಿದೆ. ಭಾರತವು ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಲ್ಲಿ 8.24 ಲಕ್ಷ ಜನರು ಉದ್ಯೋಗ ಪಡೆದು ಕೊಂಡಿದ್ದಾರೆ. ಈ ಮಾಹಿತಿಯು ಅಂತಾರಾಷ್ಟ್ರೀಯ ನವೀಕರಿಸಬಹುದಾದ ಶಕ್ತಿ ಏಜೆನ್ಸಿ ‘ಈರೇನಾ’ ತಿಳಿಸಿದೆ.

ಸೌರ ಪೋಟೊವೊಲ್ಟಾಯಿಕ್ ಭಾಗವು ಬಹುದೊಡ್ಡ ಸಂಖ್ಯೆಯಲ್ಲಿ ನೇರ ನೇಮಕಾತಿ ಮೂಲಕ ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷ ವಾಗಿ ಉದ್ಯೋಗವನ್ನು ಭಾರತದಲ್ಲಿ ಒದಗಿಸುತ್ತಿವೆ. ಸೌರ ಶಕ್ತಿ ಇಲಾಖೆಯ ಅನುಸಾರ ಆನ್-ಗ್ರಿಡ್ 1,09,000 ಉದ್ಯೋ ಗಾವಕಾಶ ಗಳನ್ನೂ, ಆಫ್ -ಗ್ರಿಡ್ 95,000 ನೌಕರಿಯನ್ನು ಸೇರಿ ಒಟ್ಟು 2,04,000 ಉದ್ಯೋಗಗಳನ್ನು ಸೃಷ್ಟಿಸಿದೆ. ಜಗತ್ತಿನ ಜಲವಿದ್ಯುತ್ ಭಾಗದಲ್ಲಿ 1.93 ದಶಲಕ್ಷ ಜನರು ಉದ್ಯೋಗದಲ್ಲಿದ್ದು, ಇದರಲ್ಲಿ ಭಾರತದ 3,67,000 ಜನರು ಕಾರ್ಯ ನಿರ್ವಹಿಸು ತ್ತಿದ್ದಾರೆ.

ಭಾರತವು ನಾಲ್ಕನೇ ಅತೀ ದೊಡ್ಡ ಪವನ ಶಕ್ತಿಯ ಸಂಪನ್ಮೂಲಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು, ಸುಮಾರು 63,000 ಉದ್ಯೋಗಗಳು ಇಲ್ಲಿ ಲಭ್ಯವಿದೆ. ಸೌರಶಾಖ ಮತ್ತು ತಂಪು ನೀಡುವ ವಸ್ತು ತಯಾರಿಕಾ ಕೇಂದ್ರಗಳಲ್ಲಿ 23,000 ಜನರಿಗೆ
ಉದ್ಯೋಗ ನೀಡಿದೆ. ದ್ರವ ಜೈವಿಕ ಇಂಧನ ಭಾಗದಲ್ಲಿ ಭಾರತ ಅಷ್ಟು ಯಶಸ್ವಿಯಾಗದಿದ್ದರೂ, ಸುಮಾರು 35,000  ಉದ್ಯೋಗ ವನ್ನು ನಿರ್ಮಿಸಲಾಗಿದೆ. ಸೊಲಿಡ್ ಬಯೋಮಾಸ್ ಹಾಗೂ ಜೈವಿಕ ಅನಿಲಗಳ ತಯಾರಿಕಾ ಭಾಗಗಳಲ್ಲಿಯು ಉದ್ಯೋಗಗಳನ್ನು ದೊರಕಿಸಿಕೊಟ್ಟಿದೆ.

ಈರೇನಾದ ಪ್ರಕಾರ (ಡಿ.ಆರ್.ಇ) ಡಿಸೇಂಟ್ರಲೈಜಡ್ ರಿನಿವೇಬಲ್ ಎನರ್ಜಿ (ಕೇಂದ್ರಿಕೃತ ನವೀಕರಿಸುವ ಶಕ್ತಿ ಕೇಂದ್ರದ) ಕಂಪನಿ ಗಳ ಹಾಗೂ ಇದಕ್ಕೆ ಸಂಬಂಧಿಸಿದ ಭಾಗಗಳಲ್ಲಿ 95,000 ಜನರು ಉದ್ಯೋಗವನ್ನು ಮಾಡುತ್ತಿದ್ದು ಇದು 2022-23 ರ ವೇಳೆಗೆ ದ್ವಿಗುಣಗೊಳ್ಳುವುದಾಗಿ ತಿಳಿಸಿದೆ. ಅಲ್ಲದೆ, ಡಿ.ಆರ್.ಇ ಕೇಂದ್ರವು ಇನ್ನೂ ಐದು ಪಟ್ಟು ಹೆಚ್ಚಿನ ಉದ್ಯೋಗಗಳನ್ನು ಸ್ಥಳೀಯವಾಗಿ ಸಮುದಾಯಗಳಲ್ಲಿ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೇಂದ್ರ ಸರಕಾರದ ಸೂರ್ಯ ಮಿತ್ರ ಸೋಲಾರ್ ಪವರ್ ಪ್ಲಾಂಟ್ ಯೊಜನೆಯು 2022ರ ಹೊತ್ತಿಗೆ 100 ಗೀಗಾ ವ್ಯಾಟ್ ವಿದ್ಯುತ್  ಉತ್ಪಾದಿಸುವ ಯೋಜನೆ ಹೊಂದಿದೆ. ದೇಶದ ಯುವಕರಿಗೆ ಉಚಿತ ತರಬೇತಿ, ಊಟದ ವ್ಯವಸ್ಥೆ, ವಸತಿ ಒದಗಿಸುವುದು, ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿದೆ. ಇಡೀ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಉಚಿತ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನಂತರ ಪ್ರಮಾಣ ಪತ್ರ ನೀಡಿ ಉದ್ಯೋಗ ನೀಡುವ ಗುರಿ ಹೊಂದಿದೆ.

ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಲ್ಲಿ ಉದ್ಯೋಗಗಳು ಬಹುಸಂಖ್ಯೆಯಲ್ಲಿ 2012ನೇ ಸಾಲಿನಿಂದ ಶುರುವಾಗಿದ್ದು, ಹಿಂದಿನ ವರ್ಷದಲ್ಲಿ 11.5 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದು, ಸೌರಶಕ್ತಿಯ ಪೋಟೊವೋಲ್ಟಾಯಿಕ್ ಭಾಗದಿಂದ 3.8 ದಶಲಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ.

Leave a Reply

Your email address will not be published. Required fields are marked *