Sunday, 5th January 2025

ಪಾಕಿಸ್ತಾನದಲ್ಲಿ ಕಿಲೋ ಟೊಮೆಟೊ 200 ರೂ., ಕೋಳಿ ಕೆಜಿಗೆ 700 ರೂ., ನಿಂಬೆಹಣ್ಣು ಕೆಜಿಗೆ 480 ರೂ.ಗೆ ಮಾರಾಟ

ಲಾಹೋರ್ : ಪಾಕಿಸ್ತಾನದಲ್ಲಿ ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ವಾರದ ಹಿಂದೆ ಒಂದು ಕಿಲೋ ಟೊಮೆಟೊ 100 ರೂಪಾಯಿ ಇತ್ತು. ಇದೀಗ 200 ರೂಪಾಯಿ ಆಗಿದೆ.

ಈದ್ ಅಲ್-ಅದ್ಹಾ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿರುವುದರಿಂದ ವ್ಯಾಪಾರಿ ಗಳು ಬೆಲೆ ಏರಿಕೆ ಮಾಡಿದ್ದಾರೆ. ಮತ್ತು ಲಾಹೋರ್‌’ನಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಗಾರರು ಟೊಮೆಟೊ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೊಮೇಟೊ ಸಾಗಾಟ ನಿಷೇಧಿಸಲು ಸೆಕ್ಷನ್ 144 ಘೋಷಿಸಬೇಕಾದ ಪರಿಸ್ಥಿತಿ ಇದೆ.

ಪಾಕಿಸ್ತಾನ ಸರ್ಕಾರ ಎಷ್ಟು ಪ್ರಯತ್ನ ಮಾಡಿದರೂ ಮಾರುಕಟ್ಟೆ ಬೆಲೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಅಲ್ಲಿನ ಸರಕಾರ ನಿಗದಿಪಡಿಸಿದ ಬೆಲೆಯನ್ನ ವ್ಯಾಪಾರಿಗಳು ಕಡೆಗಣಿಸುತ್ತಿದ್ದಾರೆ. ಸರಕಾರಿ ದರದಲ್ಲಿ ದುಪ್ಪಟ್ಟು ದರದಲ್ಲಿ ತರಕಾರಿ ಮಾರಾಟವಾಗುತ್ತಿದೆ. ಅದರಲ್ಲೂ ಹಸಿ ಮೆಣಸಿನಕಾಯಿ, ನಿಂಬೆ ಬೆಲೆ ದುಪ್ಪಟ್ಟಾಗಿದೆ. ಶುಂಠಿ, ಬೆಳ್ಳುಳ್ಳಿ ಶೇ.40ರಿಂದ 50ರಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ನಿಂಬೆಹಣ್ಣು ಕೆಜಿಗೆ 480 ರೂ.ಗೆ ಮಾರಾಟವಾಗುತ್ತಿದೆ. ಕೋಳಿಯ ಅಧಿಕೃತ ಬೆಲೆ ಕೆಜಿಗೆ 494 ರೂ.ಗಳಾಗಿದ್ದರೆ ವ್ಯಾಪಾರಿಗಳು 56 ರೂ.ಗಳಷ್ಟು ಹೆಚ್ಚಿಸಿ ಕೆಜಿಗೆ 520 ರಿಂದ 700 ರೂಪಾಯಿ.

ಆಲೂಗಡ್ಡೆ ಬೆಲೆ ಕೆಜಿಗೆ 75 ರಿಂದ 80 ರೂ. ಇನ್ನೊಂದೆಡೆ ಪಾಕಿಸ್ತಾನ ಸರ್ಕಾರ ಎ ದರ್ಜೆಯ ಈರುಳ್ಳಿ ಕೆ.ಜಿ.ಗೆ 100ರಿಂದ 105 ರೂ.ಗೆ ನಿಗದಿ ಮಾಡಿದರೆ ಮಾರುಕಟ್ಟೆಯಲ್ಲಿ ಕೆಜಿಗೆ 150 ರೂಪಾಯಿ. ಕ

Leave a Reply

Your email address will not be published. Required fields are marked *