Sunday, 5th January 2025

ಪರೀಕ್ಷೆಗಳನ್ನು ಬಿಡದ ಅಕ್ರಮದ ನಂಟು

ವಿದ್ಯಮಾನ

ಆದರ್ಶ್ ಶೆಟ್ಟಿ, ಉಪ್ಪಿನಂಗಡಿ

ಹುದ್ದೆಗಳಿಗೆ ನಕಲಿ ಅಂಕಪಟ್ಟಿ, ಪ್ರಮಾಣ ಪತ್ರವನ್ನು ದುಡ್ಡು ಕೊಟ್ಟು ಮಾಡಿಸಿ ಹುದ್ದೆಗಳನ್ನು ಪಡೆಯುವ ಸಾಕಷ್ಟು ಪ್ರಕರಣಗಳು ನಡೆದಿವೆ. ಗ್ರಾಮ ಲೆಕ್ಕಿಗ ಹುದ್ದೆಯು ಕೂಡ ಪಿಯುಸಿ ಅಂಕಗಳ ಆಧಾರದಲ್ಲಿ ನೇಮಕಾತಿ ನಡೆಸಲಾಗುತ್ತಿದ್ದು, ಇಲ್ಲೂ ನಕಲಿ ಅಂಕಪಟ್ಟಿಗಳು ಸಲ್ಲಿಕೆಯಾದ ಪ್ರಕರಣಗಳು ನಡೆದಿವೆ.

ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಎಂಬುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಲ್ಲಿಲ್ಲದ ನಂಟು. ಯಾವುದೇ ಒಂದು ಸರಕಾರಿ ಉದ್ಯೋಗ ಪಡೆ
ಯಲು, ಶಿಕ್ಷಣ, ವೃತ್ತಿ ಶಿಕ್ಷಣ, ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಕೇಂದ್ರ ಅಥವಾ ರಾಜ್ಯ ಸರಕಾರ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕದ ಆಧಾರದಲ್ಲಿ ಆ ಸ್ಥಾನವನ್ನು ಅಥವಾ ಹುzಯನ್ನು ತುಂಬುವ ನಿಯಮ ಜಾರಿಯಲ್ಲಿದೆ. ಅದು ಸರಕಾರಿ ವ್ಯವಸ್ಥೆಯಲ್ಲಿನ ಕೆಪಿಎಸ್‌ಸಿ ಯಿಂದ ಹಿಡಿದು ಯಾವುದೇ ಹುದ್ದೆಯಿರಲಿ ಅಥವಾ ನೀಟ್, ಕೆ-ಸೆಟ್, ಸಿಇಟಿಯಂತಹ ಯಾವುದೇ ಪ್ರವೇಶ ಪರೀಕ್ಷೆಗಳಿರಲಿ ಇದಕ್ಕಾಗಿ ಲಕ್ಷಾಂತರ
ಮಂದಿ ಅಭ್ಯರ್ಥಿಗಳು ವಿಶೇಷ ತರಗತಿಯಿಂದ ಹಿಡಿದು ಹಗಲು ರಾತ್ರಿ ಕಷ್ಟಪಟ್ಟು ಕಲಿತು ತೇರ್ಗಡೆ ಹೊಂದಲು ಸಾಕಷ್ಟು ಮಂದಿ ಪರಿಶ್ರಮ ಪಡುತ್ತಾರೆ.

ಇದಕ್ಕಾಗಿ ಹೆತ್ತವರು, ಪೋಷಕರು ಕೂಡ ತಮ್ಮ ಮಕ್ಕಳ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುತ್ತಾರೆ. ಪಾರದರ್ಶಕತೆಯ ಆಧಾರದಲ್ಲಿ ನಡೆಯ ಬೇಕಾದ ಪ್ರವೇಶ ಪರೀಕ್ಷೆಗಳಿಗೆ ಕೂಡ ಅಕ್ರಮ, ಭ್ರಷ್ಟಾಚಾರದ ವಾಸನೆ ಬಡಿದಿರುವುದು ಬಹಳ ಕಳವಳಕಾರಿ ವಿಚಾರ. ಇನ್ನು ಸರಕಾರಿ ಹುದ್ದೆಗಳ ನೇಮಕಾತಿಯ ಕಥೆ ಬೇರೆಯೇ ಇದೆ. ಇನ್ನು ಕೇಂದ್ರ ಸ್ವಾಮ್ಯದ ಅಧೀನದಲ್ಲಿ ನಡೆಸಲಾಗುವ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ -ಯುಜಿ ೨೦೨೪ರ ಫಲಿತಾಂಶದಲ್ಲಿ ಬಾರಿ ಅಕ್ರಮ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ವಿವಾದದ ಬಿರುಗಾಳಿ ಎಬ್ಬಿಸಿರುವ ನೀಟ್ ಪರೀಕ್ಷೆಯಲ್ಲಿ ದೇಶದ ೪,೭೫೦ ಪರೀಕ್ಷಾ ಕೇಂದ್ರಗಳಲ್ಲಿ ೨೪ ಲಕ್ಷಕ್ಕೂ ಅಧಿಕ ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು ಇದರ ಪೈಕಿ ಒಂದೇ ಪರೀಕ್ಷಾ ಕೇಂದ್ರದ ೬೭ ಕ್ಕೂ ಮಿಕ್ಕಿ ವಿದ್ಯಾರ್ಥಿ
ಗಳು ಗರಿಷ್ಠ ಅಂಕ ಗಳಿಸಿರುವುದು ಹಾಗೂ ನಿರೀಕ್ಷಿತ ದಿನಕ್ಕಿಂತ ಮುಂಚಿತವಾಗಿ ಫಲಿತಾಂಶ ಪ್ರಕಟಿಸಿರುವುದು ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ದುಷ್ಕೃತ್ಯವನ್ನು ಪುಷ್ಠಿಕರಿಸಿದೆ.

ಅದಲ್ಲದೇ ಬಿಹಾರ ಹಾಗೂ ಗುಜರಾತ್ ರಾಜ್ಯವೇ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲವೆಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದ್ದು, ಈ ಹಿನ್ನೆಲೆ
ಯಲ್ಲಿ ಎನ್‌ಟಿಎ ಮಹಾನಿರ್ದೇಶಕರ ತಲೆ ದಂಡವಾಗಿ ಪ್ರಕರಣದ ತನಿಖೆ ಸಿಬಿಐ ಅಂಗಳ ತಲುಪಿ ಪರೀಕ್ಷೆ ಮುಂದೂಡಲ್ಪಟ್ಟಿದೆ. ಪ್ರಕರಣದ ತನಿಖೆ ಗಿಳಿದ ಕೇಂದ್ರದ ಸಿಬಿಐ ಅಧಿಕಾರಿಗಳ ಮೇಲೆಯೇ ಬಿಹಾರದಲ್ಲಿ ನಾಗರಿಕರಿಂದ ಹ ನಡೆದು ತನಿಖೆಗೆ ಅಡ್ಡಿ ಉಂಟಾಗಿದೆ. ಭವಿಷ್ಯದಲ್ಲಿ  ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳು ಒಂದೆಡೆಯಾದರೆ, ಮತ್ತೊಂದೆಡೆ ದೇಶದ ಅತಿ ದೊಡ್ಡ ಪ್ರವೇಶ ಪರೀಕ್ಷೆ ಎನಿಸುವ ನೀಟ್‌ನಲ್ಲಿ ಅಕ್ರಮ ನಡೆದಿರುವುದು ಅಧಿಕಾರಿಗಳ ಸ್ವಾರ್ಥ ಸಾಧನೆ ಕೀಳು ಮಟ್ಟಕ್ಕಿಳಿದಿರುವುದನ್ನು ಎತ್ತಿ ತೋರಿಸಿದೆ.

ಈ ಅಕ್ರಮ ಬಿಹಾರ ಹಾಗೂ ಗುಜರಾತ್‌ನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಂಡು ಬಂದಿರುವುದರ ಹಿಂದೆ ಕೆಲ ಶಿಕ್ಷಕರ ಮತ್ತು ಕಾಣದ ಕೈಗಳು ಕೆಲಸ ಮಾಡಿರುವ ಗುಮಾನಿಯಿದೆ. ನೀಟ್ ಪ್ರವೇಶ ಪರೀಕ್ಷೆಗೆಂದೇ ಹಲವಾರು ತಿಂಗಳುಗಳಿಂದ ಶ್ರಮ ಪಟ್ಟು ವೈದ್ಯರಾಗುವ ಕನಸಿನೊಂದಿಗೆ ಪೂರ್ವ
ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಸ್ವಾರ್ಥ ಸಾಧಕ ಅಧಿಕಾರಿಗಳಿಂದ ಭವಿಷ್ಯಕ್ಕೆ ಕೊಳ್ಳಿಯಿಟ್ಟಂತಾಗಿರುವುದು ಸುಳ್ಳಲ್ಲ. ಇನ್ನು ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕೂಡ ೫-೬ ಲಕ್ಷ ರುಪಾಯಿಗಳಿಗೆ ಮಾರಾಟವಾಗಿದೆಯೆಂದರೆ ಇದರ ಹಿಂದೆ ಕೋಟ್ಯಾಂತರ ರುಪಾಯಿಗಳ ವ್ಯವಹಾರ ನಡೆದು ಬಹುದೊಡ್ಡ ಜಾಲವೇ ಇದರ ಹಿಂದಿರುವುದನ್ನು ಅಲ್ಲಗಳೆಯುವಂತಿಲ್ಲ.

ಈ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ಎಂಬುವುದು ಕೇವಲ ನೀಟ್ ಪ್ರವೇಶ ಪರೀಕ್ಷೆಗೆ ಮಾತ್ರ ಸೀಮಿತವಾದಂತಿಲ್ಲ. ಅರ್ಹತಾ ಪರೀಕ್ಷೆ, ಅಥವಾ ಲಾಭದಾ ಯಕ ಹುದ್ದೆ ಯಾವುದೇ ಇರಲಿ ಇದರ ಹಿಂದೆ ಅಕ್ರಮಕ್ಕೆಂದೆ ಜಾಲ ಬಹುದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿರುವುದನ್ನು ಹಲವಾರು ಪರೀಕ್ಷೆಗಳಲ್ಲಿ ಈ ಹಿಂದೆ ಕಂಡು ಬಂದಿದೆ. ಇನ್ನು ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆಸುವ ಕೆಸೆಟ್ ಅರ್ಹತಾ ಪರೀಕ್ಷೆಯಲ್ಲಿ ಕೂಡ ಈ ಹಿಂದೆ ಅಕ್ರಮದ ವಿಚಾರ ಗಳು ಬೆಳಕಿಗೆ ಬಂದಿದ್ದವು.

ಪ್ರಮಾಣ ಪತ್ರ ಕ್ಕಾಗಿ ೫ ರಿಂದ ೬ ಲಕ್ಷದವರೆಗೆ ಬೇಡಿಕೆ ಇದ್ದು,ಇದಕ್ಕೆಂದೇ ಮಧ್ಯವರ್ತಿಗಳು ಕಾರ್ಯಾಚರಣೆ ನಡೆಸುತ್ತಿರುವುದು ಕೂಡ ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ಅಕ್ರಮದ ಮೂಲಕ ಹುದ್ದೆ ಗಿಟ್ಟಿಸಿಕೊಂಡರೆ, ಅಥವಾ ಇಂತಹ ಅಕ್ರಮ ಗಳಲ್ಲಿ ಭಾಗಿಯಾದರೆ ಇಂತಹವರಿಂದ ಯಾವ ನೈತಿಕ ಶಿಕ್ಷಣವನ್ನು ಸಮಾಜ ಪಡೆಯ ಬಹುದು? ಇನ್ನು ವಿದ್ಯಾರ್ಥಿಗಳ ಭವಿಷ್ಯ ವನ್ನೇ ನಿರ್ಧರಿಸುವ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದುಗೊಂಡು ಬೇರೆಯೇ ಹೊಸ ಪ್ರಶ್ನೆ ಪತ್ರಿಕೆಯ ಮೂಲಕ ಪರೀಕ್ಷೆ ನಡೆದ ನಿದರ್ಶನ ನಮ್ಮ
ರಾಜ್ಯದ ನಡೆದಿತ್ತು. ಇದರ ಹಿಂದೆ ಬಹುದೊಡ್ಡ ಪ್ರಭಾವಿಗಳು, ಮಧ್ಯವರ್ತಿಗಳು, ಅಧಿಕಾರಿ ವೃಂದ ರಾಜಕಾರಣಿಗಳ ಪಾತ್ರವು ಕಂಡು ಬಂದಿತ್ತು. ಇನ್ನು ಎಸ್‌ಎಸ್ ಎಲ್‌ಸಿ, ಪಿಯುಸಿ ಮೌಲ್ಯಮಾಪನದ ಎಡವಟ್ಟುಗಳು ಕೂಡ ವಿದ್ಯಾರ್ಥಿಗಳ ಫಲಿತಾಂಶ ಗಳನ್ನು ಅಲ ಕಲ ಮಾಡಿದ ನಿದರ್ಶನಗಳಿವೆ.

ಇತ್ತೀಚೆಗೆ ಮೌಲ್ಯಮಾಪಕರ ಎಡವಟ್ಟಿನಿಂದ ವಿದ್ಯಾರ್ಥಿಯೊಬ್ಬನಿಗೆ ೬೨೫ ರಲ್ಲಿ ೬೨೩ ಅಂಕಗಳು ಬಂದಿದ್ದು ಫಲಿತಾಂಶ ಕಂಡು ಆ ವಿದ್ಯಾರ್ಥಿ ಪ್ರಾಮಾಣಿಕತೆಯಿಂದ ತಾನೊಬ್ಬ ಕುರಿಗಾಹಿಯಾಗಿದ್ದು ತನಗೆ ಓದಲು ಮತ್ತು ಬರೆಯಲು ಅಷ್ಟಾಗಿ ಬರುತ್ತಿರಲಿಲ್ಲ. ಈ ಅಂಕ ನನಗೆ ಸಲ್ಲಬೇಕಾದದ್ದಲ್ಲ ಎಂದು ತಿಳಿಸಿ ಮೌಲ್ಯಮಾಪಕರ ಮುಖಕ್ಕೆ ಚಪ್ಪಲಿ ಸುತ್ತಿಹೊಡೆದಂತೆ ತಿಳಿಸಿರುವುದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಆದರೆ ವಾರ್ತಾವಾಹಿನಿಗಳು
ದರ್ಶನ್, ಪ್ರಜ್ವಲ, ನಿವೇದಿತಾ ಚಂದನ್ ಗೌಡ ವಿಚಾರದಲ್ಲಿ ಮಗ್ನರಾಗಿದ್ದರಿಂದ ಈ ಬಾಲಕನ ಪ್ರಾಮಾಣಿಕತೆ, ಮೌಲ್ಯಮಾಪನಕರ ಎಡವಟ್ಟು ಬೆಳಕಿಗೆ ಬಾರದೆ ಅಷ್ಟಕ್ಕೇ ಠುಸ್ಸಾಯಿತು.

ಆತನಿಗೆ ಕನ್ನಡ ಮತ್ತು ಇಂಗ್ಲಿಷ್ ಓದಲು ಬರುವುದಿಲ್ಲ. ಸರಿಯಾಗಿ ದಿನಪತ್ರಿಕೆಯನ್ನೂ ಓದಲಾಗದ ವ್ಯಕ್ತಿ. ಇಂತಹ ಸ್ಥಿತಿಯಲ್ಲೂ ಆತ ಎಸ್‌ಎಸ್‌ಎಲ್‌ಸಿ ಯಲ್ಲಿ ೬೨೫ ಕ್ಕೆ ೬೨೩ ಅಂಕ ಪಡೆದು ಶೇ. ೯೯.೫೨ ಫಲಿತಾಂಶ ಪಡೆದು ಇದೇ ಅಂಕದ ಆಧಾರದಲ್ಲಿ ಯಾದಗಿರಿ ಜಿಲ್ಲೆಸತ್ರ ನ್ಯಾಯಾಲಯದಲ್ಲಿ ೭ ನೇ ತರಗತಿ ಅರ್ಹತೆಯ ಜವಾನ ಹುದ್ದೆಯ ಆಯ್ಕೆಪಟ್ಟಿ ಯಲ್ಲಿ ಹೆಸರಿರುವುದನ್ನು ಮನಗಂಡು ಖುದ್ದು ಕೊಪ್ಪಳ ಜಿಲ್ಲೆ ನ್ಯಾಯಾಧೀಶರೇ ಪೋಲೀಸ ರಿಗೆ ತನಿಖೆ ನಡೆಸಲು ಸೂಚಿಸಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ನ್ಯಾಯಾಲಯ ದಲ್ಲಿ ಜವಾನ ಹುದ್ದೆಗೆ ೭ ನೇ ತರಗತಿಯಲ್ಲಿ ಗಳಿಸಿರುವ ಅಂಕ ಮೆರಿಟ್ ಆಧಾರದಲ್ಲಿ ನೇಮಕಾತಿ ನಡೆಸಲಾಗುತ್ತದೆ. ಈ ಹಿಂದೆ ೭ ನೇ
ತರಗತಿಗೂ ಪಬ್ಲಿಕ್ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಬದಲಾದ ದಿನಗಳಲ್ಲಿ ಈ ಪದ್ಧತಿ ಯನ್ನು ಸರಕಾರ ಕೈ ಬಿಟ್ಟು ಸಾಮಾನ್ಯ ಪರೀಕ್ಷೆ ಯನ್ನೇ ೭ ನೇ ತರಗತಿಗೆ ಪ್ರಸ್ತುತ ನಡೆಸಲಾಗುತ್ತಿದ್ದು, ಇಂತಹ ಹುದ್ದೆಗಳಿಗೆ ನಕಲಿ ಅಂಕಪಟ್ಟಿ, ಪ್ರಮಾಣ ಪತ್ರವನ್ನು ದುಡ್ಡು ಕೊಟ್ಟು ಮಾಡಿಸಿ ಹುದ್ದೆಗಳನ್ನು ಪಡೆಯುವ ಸಾಕಷ್ಟು ಪ್ರಕರಣ ಗಳು ನಡೆದಿವೆ. ಇನ್ನು ಪಿಯುಸಿ ಅರ್ಹತೆಯ ಗ್ರಾಮ ಲೆಕ್ಕಿಗ ಹುದ್ದೆಯು ಕೂಡ ಪಿಯುಸಿಯಲ್ಲಿ ಗಳಿಸಿದ ಮೆರಿಟ್ ಅಂಕಗಳ ಆಧಾರದಲ್ಲಿ ನೇಮಕಾತಿಯನ್ನು ನಡೆಸಲಾಗುತ್ತಿದ್ದು, ಇಲ್ಲೂ ಹಲವಾರು ನಕಲಿ ಅಂಕಪಟ್ಟಿಗಳು ಸಲ್ಲಿಕೆಯಾಗಿ ಕೊನೆಗೆ ಆ ಹುದ್ದೆಗಳ ನೇಮಕಾತಿ
ಸ್ಥಗಿತಗೊಂಡ ಪ್ರಕರಣಗಳು ಕೂಡ ನಡೆದಿವೆ.

ಸರಕಾರಿ ಹುದ್ದೆಗಳನ್ನು ಪಡೆಯಲು ಇಂದು ಪೈಪೋಟಿ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಜವಾನ ಹುದ್ದೆಗೆ ೫ ಲಕ್ಷದಿಂದ ಹಿಡಿದು ಕೋಟಿ ಗಟ್ಟಲೆಯವರೆಗೆ ಉನ್ನತ ಹುದ್ದೆಗೆ ನೀಡುವ ಮಂದಿ ನಮ್ಮಲ್ಲಿದ್ದಾರೆ. ಇದಕ್ಕಾಗಿ ಹೊಲ ಆಸ್ತಿ, ಮನೆ ಅಡವಿಟ್ಟು ಕೊನೆಗೆ ಆಸ್ತಿಯೂ ಇಲ್ಲದೆ ಹುದ್ದೆಯೂ
ಇಲ್ಲದೆ ಪ್ರಾಣಕಳೆದುಕೊಂಡ,ಬೀದಿಗೆ ಬಂದ ಉದ್ಯೋಗಾಕಾಂಕ್ಷಿಗಳನ್ನು ಕಾಣಬಹುದು. ಈ ಹಿಂದೆ ರಾಜ್ಯದಲ್ಲಿ ನಡೆದ ಕೆಪಿಎಸ್ ಸಿ ಗಜೆಟೆಡ್ ಪ್ರೊಬೆಷ ನರಿ ಹುದ್ದೆ, ಪಿಎಸ್‌ಐ ಹುದ್ದೆ, ಕೆಪಿಟಿಸಿಎಲ್ ಇಂಧನ ಇಲಾಖೆಯಲ್ಲಿ ನಡೆದ ಗೋಲು ಮಾಲ್ ರಾಜ್ಯದಲ್ಲಿ ಗದ್ದಲ ವನ್ನೆಬ್ಬಿಸಿತ್ತು. ಪಿಎಸ್‌ಐ ಹುದ್ದೆಗಳ ಲ್ಲಂತೂ ಒಎಂಆರ್ ಶೀಟ್‌ನಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಅಧಿಕಾರಿ ವರ್ಗದವರೇ ತುಂಬಿ ಅಂಕ ನೀಡಿರುವುದು, ಕಾಪಿ ಮಾಡಲು ಅವಕಾಶ
ನೀಡಿರು ವುದು, ಮೈಕ್ರೋ ಫೋನ್‌ಗಳನ್ನು ಬಳಸಿ ಉತ್ತರ ಬರೆದಿರುವುದು.

ಸಂದರ್ಶನದ ವೇಳೆ ನೀಡಲಾಗುವ ಅಂಕಗಳಲ್ಲಿ ಸ್ವಜನಪಕ್ಷ ಪಾತ, ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಪ್ರಕರಣಗಳು ಕಂಡು ಬಂದು ಆ
ನೇಮಕಾತಿ ಪ್ರಕ್ರಿಯೆ ಕೋರ್ಟ್ ಮೆಟ್ಟಿಲೇರಿ ಸ್ಥಗಿತಗೊಂಡಿದೆ. ಇಲ್ಲೂ ಹುದ್ದೆಗೆ ೬೦ ಲಕ್ಷ ದಿಂದ ಒಂದು ಕೋಟಿ ರುಪಾಯಿಗಳ ವರೆಗೆ ಹಣ ಕೈ ಬದಲಾಗು ತ್ತವೆ. ಇತ್ತೀಚಿನ ಕಳೆದೊಂದು ದಶಕಗಳಿಂದ ಯಾವುದೇ ಸರಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಯೆಂಬುವುದು ಸುಸೂತ್ರವಾಗಿ ಅಂತ್ಯಗೊಂಡ ನಿದರ್ಶನವೇ ಇಲ್ಲ. ಅದು ಒಂದೋ ಕೋರ್ಟ್ ಮೆಟ್ಟಿಲೇರಿ ಸ್ಥಗಿತಗೊಳ್ಳವುದು ಇಲ್ಲದಿದ್ದರೆ ಮರು ನೇಮಕಾತಿಗೆ ಆದೇಶ ಗೊಳ್ಳುತ್ತದೆ. ಈ ಹಿಂದೆಲ್ಲ ನೇಮಕಾತಿ ಪ್ರಕ್ರಿಯೆಗಳು ಕೇವಲ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಎಂದೆಲ್ಲ ೬ ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದವು.

ಇಲ್ಲಿ ರಾಜಕಾರಣದ ಪ್ರಭಾವ, ಅಧಿಕಾರಿಗಳ ಪ್ರಭಾವ, ಅಕ್ರಮ ಲಂಚದ ಕಾರಣಕ್ಕೆ ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಾಕಷ್ಟು ಅನ್ಯಾಯಗಳಾಗುತ್ತಿದೆ. ಇಂತಹ ಅಕ್ರಮಗಳ ಕೂಪಕ್ಕೆ ಪ್ರತಿಭಾವಂತ ಅಭ್ಯರ್ಥಿಗಳು ಸರಕಾರಿ ಹುದ್ದೆಯಿಂದ ವಂಚಿತರಾಗಿ ವಯಸ್ಸಿನಲ್ಲಿ ಮಿತಿ ದಾಟಿ ಕೊನೆಗೆ ಸ್ವಂತ ಉದ್ಯೋಗ, ಖಾಸಗಿ ಕಂಪನಿಗಳ ಮೊರೆಹೋಗಬೇಕಾದ ಅನಿವಾರ್ಯತೆಗೆ ತಲು ಪುತ್ತಾರೆ. ಇಂತಹ ಅಕ್ರಮ, ದಂಧೆ, ಭ್ರಷ್ಟಾ ಚಾರದ ಕೂಪವಾಗಿರುವ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕತೆಗೆ ತಂದು ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಗಳು ನಮ್ಮ ವ್ಯವಸ್ಥೆಗಳಿಂದಾಗಬೇಕು.

Leave a Reply

Your email address will not be published. Required fields are marked *