Monday, 25th November 2024

ಪಾಕಿಸ್ತಾನದಲ್ಲಿ ಜು.13 -18 ರವರೆಗೆ ಸಾಮಾಜಿಕ ಮಾಧ್ಯಮಕ್ಕೆ ನಿಷೇಧ

ವದೆಹಲಿ: ಇಸ್ಲಾಮಿಕ್ ತಿಂಗಳಾದ ರಂಜಾನ್ ಸಮಯದಲ್ಲಿ “ದ್ವೇಷ ವಿಷಯಗಳನ್ನು” ನಿಯಂತ್ರಿಸುವ ಅಗತ್ಯವನ್ನು ಉಲ್ಲೇಖಿಸಿ ಪಾಕಿಸ್ತಾನ ಸರ್ಕಾರವು ಜು.13 ರಿಂದ 18 ರವರೆಗೆ ಆರು ದಿನಗಳ ಕಾಲ ಯೂಟ್ಯೂಬ್, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟಿಕ್ಟಾಕ್ ಅನ್ನು ನಿಷೇಧಿಸಲು ಸಜ್ಜಾಗಿದೆ.

120 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ಪ್ರಾಂತ್ಯವಾದ ಪಂಜಾಬಿನಲ್ಲಿ 6 ರಿಂದ 11 ಮೊಹರಂ (ಜುಲೈ 13-18) ಸಮಯದಲ್ಲಿ ಯೂಟ್ಯೂಬ್, ಎಕ್ಸ್, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟಿಕ್ಟಾಕ್ ಅನ್ನು ನಿಷೇಧಿಸಲು ಮುಖ್ಯಮಂತ್ರಿ ಮರಿಯಮ್ ನವಾಜ್ ಅವರ ಕಾನೂನು ಮತ್ತು ಸುವ್ಯವಸ್ಥೆ ಕ್ಯಾಬಿನೆಟ್ ಸಮಿತಿಯು ಶಿಫಾರಸು ಮಾಡಿದೆ ಎಂದು ಪಂಜಾಬ್ ಸರ್ಕಾರ ಲಾಹೋರಿನಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಮರ್ಯಮ್ ನವಾಜ್ ಅವರ ಪಂಜಾಬ್ ಸರ್ಕಾರವು ಆರು ದಿನಗಳವರೆಗೆ (ಜುಲೈ 13-18) ಇಂಟರ್ನೆಟ್ನಲ್ಲಿ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡುವಂತೆ ಕೇಂದ್ರದಲ್ಲಿನ ತನ್ನ ಚಿಕ್ಕಪ್ಪ ಶೆಹಬಾಜ್ ಷರೀಫ್ ಅವರ ಸರ್ಕಾರವನ್ನು ವಿನಂತಿಸಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಈಗಾಗಲೇ ಸಾಮಾಜಿಕ ಮಾಧ್ಯಮವನ್ನು “ಕೆಟ್ಟ ಮಾಧ್ಯಮ” ಎಂದು ಘೋಷಿಸಿದ್ದಾರೆ.

ವಿದೇಶಾಂಗ ಸಚಿವರ ಖಾತೆಯನ್ನೂ ಹೊಂದಿರುವ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕರೆ ನೀಡಿದ್ದರು. ಶೆಹಬಾಜ್ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ಎಕ್ಸ್ ಅನ್ನು ಮುಚ್ಚಿತ್ತು