ನವದೆಹಲಿ: ಆಗಸ್ಟ್ ತಿಂಗಳ ಆರಂಭದಲ್ಲೇ ಜನರಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳಲ್ಲಿ ಬೆಲೆ ಹೆಚ್ಚಳ ಮಾಡಲಾಗಿದೆ.
ಆಗಸ್ಟ್ 1 ರಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಜಾರಿಗೆ ಬರಲಿದೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 8.50 ರೂಪಾಯಿ ಹೆಚ್ಚಳ ಮಾಡಲಾಗಿದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ದುಬಾರಿಯಾಗಲಿವೆ.
ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಹೊಸ ಬೆಲೆಗಳು ಆಗಸ್ಟ್ 1, 2024 ರಂದು ಜಾರಿಗೆ ಬಂದಿವೆ. ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1646 ರೂ.ನಿಂದ 1652.50 ರೂ.ಗೆ ಏರಿಕೆಯಾಗಿದೆ.
ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 8.50 ರೂಪಾಯಿಗಳಷ್ಟು ಹೆಚ್ಚಾಗಿದೆ. 19 ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ 1756 ರೂಪಾಯಿಗಳ ಬದಲಿಗೆ 1764.5 ರೂಪಾಯಿಗಳಿಗೆ ಲಭ್ಯವಿರುತ್ತದೆ.
ಮುಂಬೈನಲ್ಲೂ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸಿಲಿಂಡರ್ ಬೆಲೆ 1598 ರಿಂದ 1605 ರೂ.ಗೆ ಅಂದರೆ 7 ರೂ ಏರಿಕೆಯಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1809.50 ರೂ.ನಿಂದ 1817 ರೂ.ಗೆ ಏರಿಕೆಯಾಗಿದೆ.
ಜುಲೈ 1 ರಂದು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 30 ರೂ ಕಡಿಮೆಯಾಗಿತ್ತು. ಇದರಿಂದಾಗಿ ಅದರ ಬೆಲೆ 1676 ರೂ ರಿಂದ 1646 ರೂಪಾಯಿಗೆ ಇಳಿದಿತ್ತು.
ಮಹಿಳಾ ದಿನದಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 100 ರೂಪಾಯಿ ಇಳಿಸುವ ಮೂಲಕ ಕೇಂದ್ರ ಸರ್ಕಾರ ಮಹಿಳೆಯರಿಗೆ ಬಿಗ್ ರಿಲೀಫ್ ನೀಡಿದೆ.