ಸಾಧನೆ-ಸಂಕಲ್ಪ
ಗಿರಿರಾಜ್ ಸಿಂಗ್
ನಾವು ೨೦೨೪ರ ಆಗಸ್ಟ್ ೭ರಂದು ೧೦ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತಿದ್ದೇವೆ. ನಿಮಗೆ ತಿಳಿದಿರುವಂತೆ ೧೯೦೫ರ ಆಗಸ್ಟ್ ೭ರಂದು ಕೋಲ್ಕತ್ತಾದ ಟೌನ್‌ಹಾಲ್‌ನಲ್ಲಿ ಸ್ವದೇಶಿ ಚಳವಳಿಯನ್ನು ಆರಂಭಿಸಲಾಗಿತ್ತು. ನಮ್ಮ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಚಳವಳಿಯು ದೇಶೀಯ ಉತ್ಪನ್ನಗಳು ಮತ್ತು ಉತ್ಪಾದನಾ ವಿಧಾನಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿತ್ತು. ಈ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲು ಮತ್ತು ನಮ್ಮ ಕೈಮಗ್ಗ ಪರಂಪರೆಯನ್ನು ಆಚರಿಸಲು, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೦೧೫ರಲ್ಲಿ ಆಗಸ್ಟ್ ೭ರ ದಿನವನ್ನು ‘ರಾಷ್ಟ್ರೀಯ ಕೈಮಗ್ಗ ದಿನ’ವೆಂದು ಘೋಷಿಸಿದರು.
ಈ ಕಾರ್ಯಕ್ರಮವು ಭಾರತದ ಕೈಮಗ್ಗ ಕಾರ್ಮಿಕರನ್ನು ಗೌರವಿಸಲು ಮತ್ತು ಕೈಮಗ್ಗ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ. ಕೈಮಗ್ಗ ಕ್ಷೇತ್ರವು ಗ್ರಾಮೀಣ ಮತ್ತು ಅರೆ-ಗ್ರಾಮೀಣ
ಜೀವನೋಪಾಯದ ಮಹತ್ವದ ಮೂಲವಾಗಿದ್ದು, ೩೫ ಲಕ್ಷಕ್ಕೂ ಅಽಕ ಜನರು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ೨೫ ಲಕ್ಷಕ್ಕೂ ಅಽಕ ಮಹಿಳೆಯರು ಎಂಬುದು ಗಮನಾರ್ಹ. ಹಾಗಾಗಿ, ಈ ಕ್ಷೇತ್ರವು ಮಹಿಳೆಯರ ಆರ್ಥಿಕ ಸಬಲೀಕರಣದ ಪ್ರಮುಖ ಮೂಲವಾಗಿದೆ. ಜವಳಿ ಸಚಿವಾಲಯವು ದೇಶಾದ್ಯಂತ ಕೈಮಗ್ಗ ಕ್ಷೇತ್ರವನ್ನು ಉತ್ತೇಜಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ.
ಗೌರವಾನ್ವಿತ ಪ್ರಧಾನ ಮಂತ್ರಿ ಅವರು ೨೮ ಜುಲೈ ೨೦೨೪ರಂದು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವಲ್ಲಿ ಕೈಮಗ್ಗ ಕ್ಷೇತ್ರಕ್ಕಿರುವ ಪ್ರಾಮುಖ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಆ ಬಗ್ಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಕೈಮಗ್ಗ ಉತ್ಪನ್ನ ಗಳನ್ನು ಮತ್ತು ಸುಸ್ಥಿರ -ಷನ್ ಅನ್ನು ಪ್ರೋತ್ಸಾಹಿಸಲು ಆಧುನಿಕ ತಂತ್ರeನವನ್ನು ಬಳಸುತ್ತಿರುವ ನವೋದ್ಯಮಗಳತ್ತ ಅವರು ಗಮನ ಸೆಳೆದಿದ್ದರು. ಸ್ಥಳೀಯ ಕೈಮಗ್ಗ ಉತ್ಪನ್ನ ಗಳನ್ನು ಜನಪ್ರಿಯಗೊಳಿಸಲು ಮತ್ತು
IqsPಟbಠಿIqsPಜಿbಛಿ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಅವರು ನಾಗರಿಕರಿಗೆ ಕರೆ ನೀಡಿದ್ದರು.
ಕಳೆದ ಕೆಲವು ವರ್ಷಗಳಲ್ಲಿ, ಭಾರತದ ಕೈಮಗ್ಗ ಕ್ಷೇತ್ರವು ಸುಸ್ಥಿರತೆ ಮತ್ತು ನಿಧಾನಗತಿಯ -ಷನ್‌ನ ದಾರಿದೀಪವಾಗಿ ಹೊರಹೊಮುತ್ತಿದೆ. ಇಂದು ನಾವು ಕೈಮಗ್ಗದ ಪುನರುತ್ಥಾನವನ್ನು ಆಚರಿಸುತ್ತಿರುವಾಗ ಗಾತ್ರಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡುವ ಪ್ರಾಮುಖ್ಯವನ್ನು ಒತ್ತಿಹೇಳಲು ನಾನು ಬಯಸುತ್ತೇನೆ ಮತ್ತು ಕೈಮಗ್ಗ ಕ್ಷೇತ್ರದಲ್ಲಿ ಸುಸ್ಥಿರ ವೇಗವನ್ನು ಕಾಪಾಡಿಕೊಳ್ಳಲು ಭಾರತದ ಜನರಿಗೆ ಒತ್ತಾಯಪಡಿಸುತ್ತೇನೆ. ಕೈಮಗ್ಗ ನೇಯ್ಗೆ ಒಂದು ಪಾರಂಪರಿಕ ಕರಕುಶಲ ಕೆಲಸವಾಗಿದ್ದು ಅದು ನಿಧಾನ, ಸುಸ್ಥಿರ ಮತ್ತು ನೈತಿಕ ಶೈಲಿಯ ತತ್ವಗಳನ್ನು
ಒಳಗೊಂಡಿದೆ.
ಕಳೆದ ದಶಕದಲ್ಲಿ ಸರಕಾರದ ನಿರಂತರ ಪ್ರಯತ್ನಗಳ ಜತೆಗೆ ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳತ್ತ ಜನರ ಗಮನಾರ್ಹ ಪರಿವರ್ತನೆಯಿಂದ ಅದು ವೇಗದ -ಷನ್ ಅಗಿ ಬದಲಾಗು
ತ್ತಿರುವುದು ಕಂಡುಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಮ್ಮೆಯಿಂದ ಭಾರತೀಯ ಕೈಮಗ್ಗದ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಜಾಗತಿಕವಾಗಿ ಅವುಗಳನ್ನು
ಪ್ರಚಾರ ಮಾಡುತ್ತಾರೆ ಮತ್ತು ಅದರ ಯಶಸ್ಸಿನ ಬಹು ದೊಡ್ಡ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಹೆಚ್ಚಿನ ಜನರು ಆ ಆಂದೋಲನಕ್ಕೆ ಕೈಜೋಡಿಸಲು ಇದು ಸಕಾಲ. ಸುಸ್ಥಿರತೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಕೈಮಗ್ಗ ವಲಯವು ಮಹಿಳೆಯರು ಮತ್ತು ದುರ್ಬಲ ಸಮು ದಾಯಗಳನ್ನು ಸಬಲೀಕರಣಗೊಳಿಸಲು ಗಮನಾರ್ಹ ಅವಕಾಶಗಳನ್ನು ನೀಡುತ್ತದೆ, ಅವರಿಗೆ ಆರ್ಥಿಕ ಭವಿಷ್ಯವನ್ನು ಒದಗಿಸುತ್ತದೆ ಮತ್ತು ಅವರ ಕುಶಲತೆಯ ಬಗ್ಗೆ ಹೆಮ್ಮೆಯನ್ನು ಮೂಡಿಸುತ್ತದೆ. ಮಹಿಳೆಯರು ಸ್ಪಿನ್ನರ್, ಡೈಯರ್ ಮತ್ತು ನೇಕಾರರಾಗಿ ಕ್ಷೇತ್ರವನ್ನು ಉನ್ನತೀಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರ ಅಮೂಲ್ಯ ಕೊಡುಗೆಗಳನ್ನು ಶ್ಲಾಘಿಸುತ್ತೇನೆ. ಸಾಂಪ್ರದಾಯಿಕ ಸಮುದಾಯಗಳು ಮತ್ತು ವಿಶೇಷವಾಗಿ ದೇಶಾದ್ಯಂತದ ಮಹಿಳೆಯರ ಕೊಡುಗೆಗಳನ್ನು ನಾನು ಸಂಪೂರ್ಣವಾಗಿ ಗುರುತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಅವರಿಲ್ಲದಿದ್ದರೆ ಕೈಮಗ್ಗ ಕ್ಷೇತ್ರವು ದೊಡ್ಡ ಅನಾನುಕೂಲತೆಯನ್ನು ಎದುರಿಸಬೇಕಾಗುತ್ತದೆ. ಅವರ ಕೊಡುಗೆಗಳನ್ನು ಉಳಿಸಿಕೊಳ್ಳಲು ಮತ್ತು ಸುಸ್ಥಿರಗೊಳಿಸಲು ಅವರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವುದು ಕಡ್ಡಾಯವಾಗಿದೆ.
ಅಲ್ಲದೆ, ಕೈಮಗ್ಗ ಕ್ಷೇತ್ರದಲ್ಲಿ ಅನೇಕ ಮಹಿಳಾ ನೇತೃತ್ವದ ಸಹಕಾರ ಸಂಘಗಳು ಮತ್ತು ಸ್ವ-ಸಹಾಯ ಗುಂಪುಗಳು ಹೊರಹೊಮ್ಮಿವೆ. ಈ ಸಂಸ್ಥೆಗಳು ತರಬೇತಿ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು ಮಾತ್ರವಲ್ಲದೆ ಒಗ್ಗಟ್ಟು ಹಾಗೂ ಸಾಮೂಹಿಕ ಶಕ್ತಿಯನ್ನು ಬೆಳೆಸುವ ಬೆಂಬಲ ಜಾಲವನ್ನು ಸಹ ಒದಗಿಸುತ್ತವೆ. ಒಗ್ಗೂಡುವ ಮೂಲಕ, ಮಹಿಳಾ ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ದೊರಕಿಸಿಕೊಡಬಹುದು, ದೊಡ್ಡ ಮಾರುಕಟ್ಟೆಗಳನ್ನು ಹೊಂದಬಹುದು ಮತ್ತು ನ್ಯಾಯಯುತ ವೇತನ ಹಾಗೂ ಉತ್ತಮ ದುಡಿಯುವ ಪರಿಸ್ಥಿತಿಗಳಿಗಾಗಿ ಸಲಹೆ ನೀಡಬಹುದು. ನೇಯ್ಗೆ ಕೌಶಲಗಳು, ವಿನ್ಯಾಸ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಾಮರ್ಥ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಶೈಕ್ಷಣಿಕ ಕಾರ್ಯಕ್ರಮಗಳು
ಹಾಗೂ ಉಪಕ್ರಮಗಳು ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುತ್ತವೆ.
ಹೊಸ ತಂತ್ರಗಳಲ್ಲಿ ನೈಪುಣ್ಯ ಸಾಧಿಸುವ ಮೂಲಕ ಮತ್ತು ಆಧುನಿಕ ವಿನ್ಯಾಸಗಳನ್ನು ಅನ್ವೇಷಿಸುವ ಮೂಲಕ, ಮಹಿಳಾ ನೇಕಾರರು ತಮ್ಮ ಕರಕುಶಲತೆಯ ಸುಸ್ಥಿರತೆಯನ್ನು ಖಾತ್ರಿಪಡಿಸುವ ಮೂಲಕ ಸಮಕಾಲೀನ ಮಾರುಕಟ್ಟೆಗಳನ್ನು ಆಕರ್ಷಿಸಬಲ್ಲ ಉತ್ತಮ-ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬಹುದು. ಕಸೂತಿ ಮತ್ತು ಪ್ರಿಂಟಿಂಗ್‌ಗಳು ಮೌಲ್ಯವರ್ಧನೆಯನ್ನು ಮಾಡಿ ಕೈಮಗ್ಗವನ್ನು ವೃದ್ಧಿಸುವುದೇ ಅಲ್ಲದೆ ಸಾಂಪ್ರದಾಯಿಕ ಜವಳಿಗಳಿಗೆ ಹೊಸ ಜೀವವನ್ನು ನೀಡುತ್ತವೆ, ನವೀನ ಮತ್ತು ಹೆಚ್ಚು ಅಪೇಕ್ಷೆಯ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ಕಸೂತಿ, ಸೂಜಿ ಕೆಲಸಗಳನ್ನು ಒಳಗೊಂಡಿರುವ ಒಂದು ಸಂಕೀರ್ಣವಾದ ಕಲಾಪ್ರಕಾರ, ಕೈಮಗ್ಗದ ಬಟ್ಟೆಗಳಿಗೆ ಆಳ ಮತ್ತು ವೈಶಿಷ್ಟ್ಯವನ್ನು ಸೇರಿಸುತ್ತದೆ. ಜರ್ದೋಜಿ, ಕಂಠ, ಅಥವಾ ಚಿಕಂಕರಿಯಂಥ ವಿವಿಧ ತಂತ್ರಗಳನ್ನು ಸಂಯೋಜಿಸುವ ಮೂಲಕ, ಕುಶಲಕರ್ಮಿಗಳು ಸರಳವಾದ ಕೈಮಗ್ಗದ ಜವಳಿಗಳನ್ನು ವಿಸ್ತೃತವಾದ, ಒಂದು-ರೀತಿಯ ತುಣುಕುಗಳಾಗಿ
ಪರಿವರ್ತಿಸಬಹುದು. ಇದು ಸೌಂದರ್ಯದ ಆಕರ್ಷಣೆ ಯನ್ನು ಮಾತ್ರವಲ್ಲದೆ ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನು ವೃದ್ಧಿಸುತ್ತದೆ,
ಕುಶಲಕರ್ಮಿಗಳಿಗೆ ಉತ್ತಮ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ. ಕೈಮಗ್ಗದ ಬಟ್ಟೆಗಳೊಂದಿಗೆ ಈ ಮೌಲ್ಯವರ್ಧನೆಯ ತಂತ್ರಗಳನ್ನು ಸಂಯೋಜಿಸುವುದು ಸಾಂಪ್ರದಾಯಿಕ ಮತ್ತು ಸಮಕಾಲೀನ ಮಾರುಕಟ್ಟೆಗಳಿಗೆ ಇಷ್ಟವಾಗುವಂಥ ಉತ್ಪನ್ನಗಳನ್ನು ರೂಪಿಸುತ್ತದೆ. ಈ ಯೋಜನೆಯು ಶತಮಾನಗಳಷ್ಟು ಹಳೆಯದಾದ ಕರಕುಶಲ ಕಲೆಗಳನ್ನು ಸಂರಕ್ಷಿಸುತ್ತದೆ ಮತ್ತು ಪುನರುಜ್ಜೀವನಗೊಳಿಸುತ್ತದೆ. ಜತೆಗೆ ಕೈಯಿಂದ ಮಾಡಿದ, ಪರಿಸರ-ಸ್ನೇಹಿ ಜವಳಿ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಸುಸ್ಥಿರ ಫ್ಯಾಷನ್ ಅನ್ನು ಉತ್ತೇಜಿಸುತ್ತದೆ.
ಕೈಮಗ್ಗ ಉದ್ಯಮದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯಗಳ ಸಂಯೋಜನೆಯಿಂದ ನೇಕಾರರು ಅನುಭವಿಸುತ್ತಿರುವ ದುಷ್ಪರಿಣಾಮವನ್ನು ನಿವಾರಿಸಲು, ಉತ್ಪಾದಕತೆ ಹೆಚ್ಚಳಕ್ಕೆ
ನೆರವಾಗಲಿದೆ ಮತ್ತು ಈ ಸಾಂಪ್ರದಾಯಿಕ ಕರಕುಶಲತೆ ಸಂರಕ್ಷಿಸಲು ಉತ್ತಮ ಭರವಸೆಯನ್ನು ಹೊಂದಿದೆ. ಅತ್ಯಾಧುನಿಕ ಪ್ರಗತಿಗಳು ಕೈಮಗ್ಗ ನೇಯ್ಗೆಗೆ ಸಂಬಂಧಿಸಿದ ಭೌತಿಕ ಒತ್ತಡವನ್ನು ಗಮನಾರ್ಹವಾಗಿ ನಿವಾರಿಸುತ್ತವೆ ಮತ್ತು ಇಡೀ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಕಡಿಮೆ ಶ್ರಮದಾಯಕವಾಗಿಸುತ್ತದೆ. ಹೆಚ್ಚುವರಿಯಾಗಿ, ಕಂಪ್ಯೂಟರ್-ಸಹಾಯದ ವಿನ್ಯಾಸ (ಸಿಎಡಿ) ಸಾಫ್ಟ್ ವೇರ್ ನೇಕಾರರನ್ನು ನೇಯ್ಗೆ ಆರಂಭಿಸುವ ಮೊದಲು ಸಂಕೀರ್ಣ ಮಾದರಿಗಳು ಮತ್ತು ಬಣ್ಣ ಸಂಯೋಜನೆಗಳೊಂದಿಗೆ ಪ್ರಯೋಗಿಸಲು ಶಕ್ತಗೊಳಿಸುತ್ತದೆ. ಇದು ಸಮಯವನ್ನು ಉಳಿಸುವುದಲ್ಲದೆ ದೋಷಗಳ ಅಪಾಯವನ್ನು ತಗ್ಗಿಸುತ್ತದೆ ಮತ್ತು ಇದು ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಕಾರಣ ವಾಗುತ್ತದೆ.
ಡಿಜಿಟಲ್ ವೇದಿಕೆಗಳು ಮತ್ತು ಇ-ವಾಣಿಜ್ಯ ಜಾಲತಾಣಗಳು ನೇಕಾರರಿಗೆ ವ್ಯಾಪಕ ಮಾರುಕಟ್ಟೆಗಳ ಲಭ್ಯತೆಯನ್ನು ಒದಗಿಸುತ್ತವೆ, ಅವರನ್ನು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕಿಸುತ್ತವೆ ಮತ್ತು ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತವೆ. ಈ ವರ್ಷ ರಾಷ್ಟ್ರೀಯ ಕೈಮಗ್ಗ ದಿನವನ್ನು ಸ್ಮರಿಸುವುದಕ್ಕಾಗಿ, ಇಂದು ನಾನು ಎರಡು ಪ್ರತಿeಗಳನ್ನು ಕೈಗೊಳ್ಳುವಂತೆ
ಎಲ್ಲರಿಗೂ ಮನವಿ ಮಾಡುತ್ತೇನೆ. ಅವೆಂದರೆ, ಕೈಮಗ್ಗ ಉತ್ಪನ್ನದ ಜತೆ ಸೆಲಿ ತೆಗೆದುಕೊಳ್ಳಬೇಕು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಂಚಿಕೊಳ್ಳಬೇಕು; ಎರಡನೆಯದಾಗಿ ಕೈಮಗ್ಗದ ಉತ್ಪನ್ನವನ್ನು ತಮ್ಮ ಕಪಾಟುಗಳು ಮತ್ತು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ಮಾಡಬೇಕು. ಕೈಮಗ್ಗದ ಉತ್ಪನ್ನಗಳ ಪ್ರತಿಯೊಂದು ತುಣುಕೂ ವಿಭಿನ್ನವಾಗಿವೆ. ನೇಕಾರರು ಉತ್ಪನ್ನಗಳನ್ನು ಕಾಳಜಿ ಮತ್ತು ಗಮನದಿಂದ ನೇಯುತ್ತಿದ್ದು, ಅದು ಅವರ ಬದ್ಧತೆ ಮತ್ತು ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ. ಕೈಮಗ್ಗ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ, ನಾವು ಸಾಂಪ್ರ ದಾಯಿಕ ಜವಳಿಗಳ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಆಚರಿಸುತ್ತೇವೆ ಮತ್ತು ಆ ಮೂಲಕ ಕುಶಲಕರ್ಮಿಗಳ ಜೀವನೋಪಾಯಕ್ಕೆ ಕೊಡುಗೆ ನೀಡುತ್ತೇವೆ, ಅವರ ಅಮೂಲ್ಯ ಕೌಶಲಗಳನ್ನು ಭವಿಷ್ಯದ ಪೀಳಿಗೆಗೆ ವರ್ಗಾಯಿಸುವುದನ್ನು ನಾವು ಖಾತ್ರಿಪಡಿಸಿಕೊಳ್ಳುತ್ತೇವೆ.
ಕೈಮಗ್ಗ ಉದ್ಯಮದಲ್ಲಿ ಗುಣಮಟ್ಟ, ಸ್ಥಿರತೆ ಮತ್ತು ತಂತ್ರeನಕ್ಕೆ ಆದ್ಯತೆ ನೀಡುವುದು ಅತ್ಯಂತ ಮುಖ್ಯವಾಗಿದೆ. ನವೀನ ವಸ್ತುಗಳು ಮತ್ತು ವಿಧಾನಗಳನ್ನು ಪರಿಚಯಿಸುವ ಮೂಲಕ ಕೈಮಗ್ಗ
ನೇಯ್ಗೆ ಹೆಚ್ಚು ಆಕರ್ಷಕವಾಗಬಹುದು. ಪ್ರತಿಯೊಬ್ಬರೂ ಪ್ರಾದೇಶಿಕ ಕುಶಲಕರ್ಮಿಗಳು ಮತ್ತು ಸಾಂಪ್ರದಾಯಿಕ ನೇಯ್ಗೆ ಸಮುದಾಯಗಳನ್ನು ಬೆಂಬಲಿಸಬೇಕು ಹಾಗೂ ತಮ್ಮ ಬಟ್ಟೆ ಖರೀದಿಗಳ ಬಗ್ಗೆ ಎಚ್ಚರದಿಂದಿರಬೇಕು. ಅದು ನಮ್ಮ ಮೇಲೆ, ಅವುಗಳನ್ನು ತಯಾರಿಸಿದ ಜನರು ಮತ್ತು ಭೂಮಿ ಯ ಮೇಲೆ ಪರಿಣಾಮ ಬೀರುತ್ತದೆ. ಕೈಮಗ್ಗದ ಉತ್ಪನ್ನಗಳು, ನ್ಯಾಯಯುತ ವ್ಯಾಪಾರ, ಪ್ರಾದೇಶಿಕ ಉತ್ಪಾದನೆ, ಸುಸ್ಥಿರತೆ ಮತ್ತು ಕರಕುಶಲತೆಯ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ ಆಂದೋಲನವು ಬೆಳೆವಣಿಗೆಯಾಗಲು ಸಹಾಯ ಮಾಡುತ್ತದೆ ಮತ್ತು ಕೈಮಗ್ಗ ನೇಕಾರರಿಗೆ ಸಲ್ಲಬೇಕಾದ ನಿಜವಾದ ಬೆಲೆ ಮತ್ತು ಗೌರವವನ್ನು ಸಲ್ಲಿಸುತ್ತದೆ.
ಕೈಮಗ್ಗ ಉದ್ಯಮವನ್ನು ಬೆಂಬಲಿಸುವ ಮೂಲಕ ನಾವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರ ಜತೆಗೆ, ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆ
ಯಲ್ಲೂ ಯಶಸ್ಸು ಸಾಽಸಿದ್ದೇವೆ ಮತ್ತು ವಿಶ್ವಸಂಸ್ಥೆಯ (ಎಸ್ ಡಿಜಿ) ೨೦೩೦ರ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ, ಹಲವನ್ನು ಸಾಧಿಸಲು ಅದು ಸಹಾಯಕವಾಗಿದೆ.
(ಲೇಖಕರು ಕೇಂದ್ರ ಜವಳಿ ಸಚಿವರು)