Monday, 25th November 2024

ಚಾಂಗ್ಲಾಂಗ್‌ನಲ್ಲಿ 4.2 ತೀವ್ರತೆ ಭೂಕಂಪ

ಚಾಂಗ್ಲಾಂಗ್ : ಮಧ್ಯರಾತ್ರಿ ಭೂಮಿ ಕಂಪಿಸಿ, ಮನೆಯಲ್ಲಿರುವ ಸಾಮಗ್ರಿಗಳೆಲ್ಲ ನೆಲಕ್ಕುರುಳಿವೆ. ಇದರಿಂದ ಜನರು ದಿಕ್ಕಾ ಪಾಲಾಗಿ ಓಡಿಬಂದಿರುವ ಘಟನೆ ನಡೆದಿದೆ. 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್‌ಸಿಎಸ್) ನೀಡಿರುವ ಮಾಹಿತಿಯ ಬುಧವಾರ ಬೆಳಿಗ್ಗೆ 1.25ಕ್ಕೆ ಚಾಂಗ್ಲಾಂಗ್‌ನಲ್ಲಿ ಭೂ ಕಂಪ ಸಂಭವಿಸಿದೆ.

ಸದ್ಯ ಯಾವುದೇ ಸಾವು-ನೋವಾದ ಕುರಿತು ವರದಿಯಾಗಿಲ್ಲ. ಅರುಣಾಚಲ ಪ್ರದೇಶ ಮಾತ್ರವಲ್ಲದೇ ದೇಶದ ಹಲವೆಡೆ ಕಳೆದ ಕೆಲ ದಿನಗಳಿಂದ ಭೂಕಂಪನದ ಅನುಭವ ಆಗುತ್ತಲೇ ಇದ್ದು, ಕಡಿಮೆ ತೀವ್ರತೆಯ ಹಿನ್ನೆಲೆಯಲ್ಲಿ ಅಷ್ಟಾಗಿ ಜನರಿಗೆ ತಿಳಿದುಬರುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.