ಜನಜಾಗೃತಿ
ಡಾ.ಅಮ್ಮಸಂದ್ರ ಸುರೇಶ್
ತಂತ್ರಜ್ಞಾನ ಮುಂದುವರಿದಂತೆ ಸೈಬರ್ ಅಪರಾಧಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮನುಷ್ಯನ ಜೀವನವನ್ನು ಸುಲಭಗೊಳಿಸಿರುವ ತಂತ್ರಜ್ಞಾನವೇ ಇಂದು ಕಂಟಕವಾಗಿ ಪರಿಣಮಿಸುತ್ತಿದೆ. ಸೈಬರ್ ಅಪರಾಧಿಗಳು ದಿನಕ್ಕೊಂದು ಹೊಸ ಮಾರ್ಗವನ್ನು ಕಂಡುಕೊಂಡು ಅಮಾಯಕರ ಲಕ್ಷಾಂತರ ಹಣವನ್ನು ದೋಚುತ್ತಿದ್ದಾರೆ. ಈ ಬಗ್ಗೆ ಎಚ್ಚರದಿಂದಿರದಿದ್ದರೆ ಜನರು ದೊಡ್ಡ ನಷ್ಟ ಅನುಭವಿಸುವುದು ಖಚಿತ.
ಆನ್‌ಲೈನ್ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎಷ್ಟೇ ಕಠಿಣ ಕಾನೂನು, ನೀತಿ-ನಿಯಮಗಳನ್ನು ರೂಪಿಸಿದರೂ ವಂಚಕರು ಅಮಾಯಕರಿಗೆ ಟೋಪಿಹಾಕುತ್ತಲೇ ಇದ್ದಾರೆ. ಈ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಕಾಲಾನುಕಾಲಕ್ಕೆ ಸೂಚಿಸುತ್ತಿದ್ದರೂ ಅಮಾಯಕರು
ಯಾಮಾರುತ್ತಲೇ ಇರುವುದು ದುರ್ದೈವದ ವಿಷಯವಾಗಿದೆ. ಪೊಲೀಸ್ ಇಲಾಖೆಗೆ ಆನ್‌ಲೈನ್ ವಂಚನೆಯನ್ನು ನಿಯಂತ್ರಿಸುವುದು ಮತ್ತು ಆರೋಪಿ ಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ.
ಕಳೆದ ೪ ವರ್ಷಗಳಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಸೈಬರ್ ವಂಚನೆಗೆ ಸಂಬಂಧಿಸಿ ೫೬,೨೬೧ ಪ್ರಕರಣಗಳು ದಾಖಲಾಗಿವೆ. ಸೈಬರ್ ವಂಚನೆಯನ್ನು ತಡೆಯುವ ಹಾಗೂ ವಂಚನೆಗೊಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಈಗಾಗಲೇ ರಾಜ್ಯದ ಪ್ರತಿ ಜಿಲ್ಲೆ ಮತ್ತು ನಗರ ವ್ಯಾಪ್ತಿಗಳಲ್ಲಿ ಒಂದೊಂದು ಸೈಬರ್ ಅಪರಾಧ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ (ರಾಜ್ಯದಲ್ಲಿ ಇಂಥ ೪೩ ಠಾಣೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ).
ಇಂಥ ಠಾಣೆ ಗಳಲ್ಲಿನ ಸಿಬ್ಬಂದಿಗೆ ಸೈಬರ್ ಅಪರಾಧಗಳ ತನಿಖಾ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ೧೯೩೦ ಮತ್ತು ೧೧೨ ಸಹಾಯ ವಾಣಿ ಆರಂಭಿಸಲಾಗಿದೆ. ಆನ್‌ಲೈನ್ ವಂಚಕರು ಜನರಿಗೆ ಮೋಸ ಮಾಡಲು ಹೊಸ ಮಾರ್ಗಗಳನ್ನು ಕಂಡು ಕೊಳ್ಳುತ್ತಿದ್ದಾರೆ. ಇಂಥ ದುರುಳರು ಬ್ಯಾಂಕ್ ಅಥವಾ ಅಂಚೆ ಕಚೇರಿ ಹೆಸರಿನಲ್ಲಿ ಕರೆಮಾಡಿ ಅಥವಾ ಎಸ್‌ಎಂಎಸ್ ಕಳಿಸಿ, ಒಟಿಪಿ ಪಡೆದು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಸೇರಿದಂತೆ ಬಹಳಷ್ಟು ಜನರನ್ನು ವಂಚಿಸುತ್ತಿದ್ದಾರೆ. ಈ ವಂಚಕರು ಅಂಚೆ ಕಚೇರಿ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕರೆಮಾಡಿ ಅಮಾಯಕರನ್ನು ಹೀಗೆ ವಂಚಿಸುತ್ತಾರೆ.
ಇಂಥ ಯಾವುದೇ ಇಲಾಖಾಧಿಕಾರಿಗಳು ಸಾರ್ವಜನಿಕರೊಂದಿಗೆ ಅಧಿಕೃತವಾಗಿ ಫೋನ್ ಮೂಲಕ ವ್ಯವಹರಿಸುವುದಿಲ್ಲ ಮತ್ತು ಸಾರ್ವಜನಿಕರ ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ವ್ಯವಹಾರಗಳಿಗೆ ಸಂಬಂಧಿಸಿದ ಒಟಿಪಿಯನ್ನು ಫೋನ್ ಮೂಲಕ ಯಾವುದೇ ಕಾರಣಕ್ಕೂ ಕೇಳುವುದಿಲ್ಲ ಎಂಬುದನ್ನು ಗ್ರಾಹಕರು ಮೊದಲು ಅರಿಯಬೇಕು. ಹೀಗಾಗಿ ಗ್ರಾಹಕರು ಒಟಿಪಿಯನ್ನು ಫೋನ್ ಮೂಲಕ ಯಾರೊಂದಿಗೂ ಹಂಚಿಕೊಳ್ಳಬಾರದು; ಆನ್‌ಲೈನ್ ಹಣ ವರ್ಗಾವಣೆ ಅಥವಾ ಒಟಿಪಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ಸಮೀಪದ ಅಂಚೆ ಕಚೇರಿಗೆ ತೆರಳಿ ಈ ಕುರಿತು ಖಾತ್ರಿಪಡಿಸಿಕೊಳ್ಳಬೇಕು.
ಯಾವುದೇ ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆ ಗಳಲ್ಲಿ ತೊಡಕುಂಟಾದಾಗ ಗ್ರಾಹಕರು ಸಮೀಪದ ಅಂಚೆ ಕಚೇರಿಗೆ ನೇರವಾಗಿ ತೆರಳಿ ಅದನ್ನು ಪರಿಹರಿಸಿಕೊಳ್ಳಬೇಕು. ಅಂಚೆ ಕಚೇರಿ ಅಥವಾ ಯುಪಿಐ ಆಧರಿತ ಆನ್‌ಲೈನ್ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಗ್ರಾಹಕರಿಗೆ ಕರೆಮಾಡುವ ವಂಚಕರು,
ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್, ಒಟಿಪಿ, ಎಟಿಎಂ ಪಿನ್ ನಂಬರ್‌ಗಳನ್ನು ಕೇಳುತ್ತಾರೆ, ಗೂಗಲ್ ಪೇ, ಫೋನ್ ಪೇ ಅಥವಾ ಯುಪಿಐ ಆಧರಿತ ಇತರೆ ಆನ್‌ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇ ಷನ್‌ಗಳ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಹೇಳುತ್ತಾರೆ ಅಥವಾ ಕೋಡ್‌ಗಳನ್ನು ಕೇಳಿಪಡೆದು ವಂಚಿಸುತ್ತಾರೆ.
ಇಂಥ ಗೌಪ್ಯ ಸಂಖ್ಯೆ/ ಮಾಹಿತಿಗಳನ್ನು ಯಾರಿಗೂ, ಯಾವ ಕಾರಣಕ್ಕೂ ನೀಡಬಾರದು; ಆನ್‌ಲೈನ್ ಹಣಕಾಸು ವ್ಯವಹಾರಕ್ಕಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಅಧಿಕೃತ ಅಪ್ಲಿಕೇಷನ್‌ಗಳನ್ನು ಗ್ರಾಹಕರು ಬಳಸಬೇಕು. ಇನ್ನು ಗ್ರಾಹಕರು ತಮ್ಮ ಮೊಬೈಲ್‌ಗಳಲ್ಲಿ ವಿವಿಧ ರೀತಿಯ ಆಪ್‌ಗಳನ್ನು ಅನಗತ್ಯವಾಗಿ ಡೌನ್‌ಲೋಡ್ ಮಾಡಿ ಇನ್ ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಅಪರಿಚಿತ ವ್ಯಕ್ತಿಗಳು ಕಳುಹಿಸುವ ಅPಓ, ಜ್ಞಿoಠಿZZಠಿಜಿಟ್ಞ ಜ್ಝಿಛಿ ಅಥವಾ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಜ್ಞಿoಠಿZ ಅಥವಾ ಕ್ಲಿಕ್ ಮಾಡಬಾರದು.
‘ನಿಮ್ಮ ಹೆಸರಿಗೆ ಒಂದು ಪಾರ್ಸಲ್/ಸ್ಪೀಡ್ ಪೋಸ್ಟ್ ಬಂದಿದೆ. ನಿಮ್ಮ ವಿಳಾಸ ಸರಿಯಿಲ್ಲದ ಕಾರಣ ಅಂಚೆ ಕಚೇರಿಯಲ್ಲಿ ಇಟ್ಟುಕೊಳ್ಳಲಾಗಿದೆ. ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಸರಿಯಾದ ವಿಳಾಸವನ್ನು ದಾಖಲಿಸಿ’ ಎಂಬ ಮೊಬೈಲ್ ಸಂದೇಶಗಳನ್ನು ಕೆಲವು ಆನ್‌ಲೈನ್ ವಂಚಕರು ಗ್ರಾಹಕರಿಗೆ
ಕಳಿಸುತ್ತಾರೆ. ಅವರಿತ್ತ ಸೂಚನೆಯಂತೆ ಒಂದೊಮ್ಮೆ ಗ್ರಾಹಕರೇದರೂ ಇಂಥ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಿವರಗಳನ್ನು ದಾಖಲಿಸಿದರೆ ವಂಚನೆ ಗೊಳಗಾಗುವುದು ಖಂಡಿತ.
ಆದ್ದರಿಂದ ಇಂಥ ಸಂದೇಶಗಳಿಗೆ ಪ್ರತಿಕ್ರಿಯಿಸಲು ಹೋಗಬಾರದು. ‘ಪಾರ್ಸಲ್‌ಗಳಲ್ಲಿ ಕೆಲವು ಸಂಶಯಾಸ್ಪದ ವಸ್ತುಗಳನ್ನು ಪತ್ತೆಮಾಡಿದ್ದೇವೆ’ ಎಂದು ಕಾನೂನು ಜಾರಿ ಪ್ರಾಧಿಕಾರದ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆಮಾಡಿ ಮೋಸ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ಗ್ರಾಹಕರು ತಮ್ಮ ಪರವಾಗಿ ವಹಿವಾಟು ನಡೆಸಲು ಅಪರಿಚಿತ ವ್ಯಕ್ತಿಗಳೊಂದಿಗೆ ತಮ್ಮ ಮೊಬೈಲ್ ಬ್ಯಾಂಕಿಂಗ್‌ನ ವಿವರಗಳನ್ನು ಹಂಚಿಕೊಳ್ಳಬಾರದು. ಉದ್ಯೋಗದ ಆ-ರ್
ಗಳ ಆಮಿಷವೊಡ್ಡುವ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸುಲಭವಾಗಿ ಹಣ ಗಳಿಸುವ ಅವಕಾಶ ನೀಡುವುದಾಗಿ ಹೇಳಿಕೊಳ್ಳುವ ಅಪರಿಚಿತರೊಂದಿಗೆ ಗ್ರಾಹಕರು ತಮ್ಮ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಳ್ಳಬಾರದು. ವಂಚಕರು ಮಾಡಿದ
ಕರೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲು ಸಾಧ್ಯವಾಗದೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡವರ ಸಂಖ್ಯೆಯೇನೂ ಕಡಿಮೆ ಯಿಲ್ಲ. ಇಂಥವರಲ್ಲಿ ಕೆಲವರು ಪೊಲೀಸರಿಗೆ ದೂರು ನೀಡಿದರೆ, ಮತ್ತೆ ಕೆಲವರು ಇದನ್ನು ಗೌಪ್ಯವಾಗಿ ಇಡುತ್ತಿದ್ದಾರೆ.
ಸೈಬರ್ ಕ್ರೈಂ ಅಪರಾಧಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ಸಿಐಡಿ ಕಚೇರಿಯಲ್ಲಿ ‘ಸಿಸಿಇಟಿಆರ್’ ಘಟಕವನ್ನು ಪ್ರಾರಂಭ ಮಾಡಲಾಗಿದೆ. ಅಲ್ಲದೆ ಕೇಂದ್ರ ಸರಕಾರ ಕೂಡ ಸಾರ್ವಜನಿಕರ ಅನುಕೂಲಕ್ಕಾಗಿ ‘ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್’ ಅನ್ನು ಪ್ರಾರಂಭಿಸಿದೆ. ಆನ್‌ಲೈನ್ ವಂಚನೆಗೊಳಗಾದವರು ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದು ಪ್ರಯಾಸದಾಯಕವಾದರೆ, ಈ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕವೇ ದೂರು ದಾಖಲಿಸಬಹುದು. ಹೀಗೆ ದೂರು ದಾಖಲಾದ ಕೆಲವೇ ಕ್ಷಣಗಳಲ್ಲಿ, ವಂಚನೆಗೊಳಗಾದವರನ್ನು ಸಂಬಂಽತ ಸೈಬರ್ ಪೊಲೀಸ್ ಠಾಣೆಯಿಂದಲೇ ದೂರವಾಣಿ ಮೂಲಕ ಸಂಪರ್ಕಿಸಲಾಗುತ್ತದೆ. ಅಗತ್ಯ ವಿವರಗಳನ್ನು ಪಡೆದ ನಂತರ ಸೈಬರ್ ಪೊಲೀಸರು ಕಾರ್ಯಪ್ರವೃತ್ತರಾಗುತ್ತಾರೆ. ಒಟ್ಟಿನಲ್ಲಿ, ಸೈಬರ್ ವಂಚನೆಯ ಕುರಿತು ಸಾರ್ವಜನಿಕರು
ಎಚ್ಚರಿಕೆಯಿಂದಿರಬೇಕು.
(ಲೇಖಕರು ಹವ್ಯಾಸಿ ಬರಹಗಾರರು)