Friday, 22nd November 2024

ಬಿಹಾರ ಡಿಸಿಎಂಗೆ ಕೊರೋನಾ ಸೋಂಕು ದೃಢ

ಪಾಟ್ನಾ: ಬಿಹಾರ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಸಂಬಂಧ ಟ್ವೀಟ್​ ಮಾಡಿದ್ದಾರೆ.

ನನಗೆ ಕೊರೋನಾ ಸೋಂಕು ದೃಢಪಟ್ಟಿದೆ. ಎರಡು ದಿನದ ಹಿಂದೆ ಜ್ವರ ಬಂದಿತ್ತು. ಇದೀಗ ನಾನು ಸ್ಥಿರವಾಗಿದ್ದೇನೆ. ಪಾಟ್ನಾದ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸದ್ಯದಲ್ಲೇ ಚುನಾವಣಾ ಕ್ಯಾಂಪೇನ್​ಗೆ ವಾಪಸ್ಸಾಗಲಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಅ. 28ರಿಂದ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಸುಶೀಲ್​ ಕುಮಾರ್​ ಮೋದಿ ಸಾಲು ಸಾಲು ಚುನಾ ವಣಾ ರ್ಯಾಲಿಗಳಲ್ಲಿ ಭಾಗಿಯಾಗಿದ್ದರು.