Friday, 20th September 2024

ವಾರದೊಳಗೆ ಕೊರೋನಾ ವೈರಸ್’ಗೆ ಲಸಿಕೆ ಸಿದ್ದ: ಟ್ರಂಪ್

ವಾಷಿಂಗ್ಟನ್ : ಸಾಂಕ್ರಾಮಿಕ ಕೊರೊನಾ ವೈರಸ್ ಗೆ ಲಸಿಕೆ ಸಿದ್ಧವಾಗಿದ್ದು, ಈ ವಾರದಲ್ಲಿ ಅದನ್ನು ಅಧಿಕೃತವಾಗಿ ಘೋಷಿಸ ಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಡೆಮಾಕ್ರಟಿಕ್ ಚಾಲೆಂಜರ್ ಜೋ ಬಿಡೆನ್ ಅವರೊಂದಿಗೆ ಅಧ್ಯಕ್ಷೀಯ ಚರ್ಚೆಯ ಸಂದರ್ಭದಲ್ಲಿ ಟ್ರಂಪ್ ಅವರು ಕೋವಿಡ್ 19 ಲಸಿಕೆ ಸಿದ್ಧವಾಗಿದೆ ಎಂದು ಘೋಷಣೆ ಮಾಡಿದ್ದಾರೆ.

ನ.3 ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಚುನಾವಣೆಗೂ ಮುನ್ನವೇ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದಲ್ಲಿ ಕೋವಿಡ್ 19 ಗೆ ಲಸಿಕೆ ಸಿದ್ಧವಾಗಿದ್ದು, ಒಂದು ವಾರದಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿ ದ್ದಾರೆ.