Saturday, 14th December 2024

ಮಂಕಿಫಾಕ್ಸ್: ಜಾಗೃತಿ ಅಗತ್ಯ

ಕರೋನಾ ನಂತರ ಇದೀಗ ಮಂಕಿಫಾಕ್ಸ್ ಹರಡುವ ಭೀತಿ ಜಗತ್ತನ್ನು ಕಾಡುತ್ತಿದೆ. ಕೋವಿಡ್‌ನಂತೆ ಮಂಕಿ ಫಾಕ್ಸ್ ಕೂಡ ಸಾಂಕ್ರಾಮಿಕ ಕಾಯಿಲೆಯಾಗಿದೆ. ಆ.೧೪ರಂದು ವಿಶ್ವ ಆರೋಗ್ಯಸಂಸ್ಥೆ ಈ ಸೋಂಕು ಸಂಬಂಧ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. ಈಗಾಗಲೇ ೭೦ ಕ್ಕೂ ಹೆಚ್ಚು ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಈಗಾಗಲೇ ಐದು ಪ್ರಕರಣಗಳು ವರದಿಯಾಗಿದ್ದು, ನಮ್ಮ ನೆರೆಯ ರಾಜ್ಯಗಳಾದ ಕೇರಳ, ಆಂಧ್ರ ಮತ್ತು ತೆಲಂಗಾಣದ ಅನೇಕ ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ನಮ್ಮ ರಾಜ್ಯದಲ್ಲಿ ಈ ಸೋಂಕು ಹರಡುವ ಅಪಾಯ ಕಡಿಮೆ ಇದೆ ಎಂದು ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಆದರೆ ಡೆಂಘೀ, ಮಲೇರಿಯಾ ದಂತಹ ಸೊಳ್ಳೆಯಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟಲಾಗದೆ ಪ್ರತೀ ವರ್ಷ ಲಕ್ಷಾಂತರ ಜನರನ್ನು ಬಲಿಗೊಡು ತ್ತಿರುವ ನಮಗೆ ಝಿಕಾ, ಮಂಕಿ ಫಾಕ್ಸ್ ನಂತಹ ಇನ್ನಷ್ಟು ಸೋಂಕನ್ನು ಎದುರಿಸುವುದು ಸವಾಲಿನ ಸಂಗತಿ. ಹಾಗೆಂದು ಮಂಕಿ ಫಾಕ್ಸ್ ಹೊಸ ರೋಗ ವಲ್ಲ. ೧೯೭೦ರಲ್ಲೂ ಇದು ಕಾಣಿಸಿ ಕೊಂಡಿತ್ತು. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಈ ರೋಗಲಕ್ಷಣಗಳನ್ನು ಗುಣಪಡಿಸಬಹುದು. ಆದರೆ ಸೋಂಕು ಹರಡದಂತೆ ತಡೆಯುವುದು ತಡೆಯುವುದು ಕಷ್ಟದ ಕೆಲಸ. ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುವ ಈ ರೋಗ ಸಿಡುಬಿನಂತೆ ಕಾಣುವ ದದ್ದು ಗಳನ್ನು ಹೊಂದಿರುತ್ತದೆ.

ಜ್ವರ, ತಲೆ ನೋವು, ಸ್ನಾಯು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಕೀವು ತುಂಬಿದ ಗುಳ್ಳೆಗಳು ಈ ಸಮಸ್ಯೆಯ ರೋಗಲಕ್ಷಣಗಳಾಗಿವೆ. ಪ್ರಾಥಮಿಕವಾಗಿ ಸೋಂಕಿತ ಪ್ರಾಣಿಗಳು ಅದರಲ್ಲೂ ವಿಶೇಷವಾಗಿ ಇಲಿಗಳು ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ಈ ವೈರಸ್ ಮನುಷ್ಯರಿಗೆ ಹರಡುತ್ತದೆ. ಲಭ್ಯ ಮಾಹಿತಿ ಪ್ರಕಾರ ಈ ರೋಗವು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿದೆ. ಶೇ.೯೮
ಮಂಕಿಪಾಕ್ಸ್ ಸೋಂಕಿತರು ಸಲಿಂಗಕಾಮಿಗಳಾಗಿzರೆ. ಅದು ಅವರಿಂದ ಇತರರಿಗೆ ಹರಡಿದೆ.

ಪ್ರಕೃತಿ ವಿರುದ್ಧವಾದ ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ಕೋರುತ್ತಿರುವವರಿಗೆ ಮಂಕಿ ಫಾಕ್ಸ್ ಎಚ್ಚರಿಕೆ ಗಂಟೆಯಾಗಿದೆ. ಈ ರೋಗವನ್ನು ಎದುರಿಸಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ೫೦ ಹಾಸಿಗೆಯ ಕೊಠಡಿ ಸಿದ್ದ ಮಾಡಲಾಗಿದೆ. ಆದರೆ ರೋಗ ಬಾರದಂತೆ ನೋಡಿಕೊಳ್ಳಲು ಹೆಚ್ಚು ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ.