ಇಂಡಿ: ನೂತನ ಪುರಸಭೆ ಅಧ್ಯಕ್ಷರಾಗಿ ಲಿಂಬಾಜಿ ರಾಠೋಡ ಉಪಾಧ್ಯಕ್ಷರಾಗಿ ಜಹಾಂಗೀರ ಸೌದಾಗರ ಅಧಿಕಾರ ಪದಗ್ರಹಣ ಸಮಾರಂಭ ಪುರಸಭೆ ಕಾರ್ಯಾಲಯದಲ್ಲಿ ನಡೆಯಿತು.
ಅಧಿಕಾರ ಅಂತಸ್ತು ಶಾಶ್ವತ ಅಲ್ಲ ಇರುವದಿನಗಳಲ್ಲಿ ಜನಮಾನಸದಲ್ಲಿ ಉಳಿಯುವಂತೆ ಕೆಲಸ ಕಾರ್ಯ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ .ನನಗೆ ಪುರಸಭೆ ಅಧ್ಯಕ್ಷರನ್ನಾಗಿ ಮಾಡಲು ಶಾಸಕ ಯಶವಂತರಾಯ ಗೌಡ ಪಾಟೀಲ ಕೊಡುಗೆ ಎಂದಿಗೂ ಮರೇಯುವಂತಿಲ್ಲ ನಮ್ಮ ಬಂಜಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿರುವುದು ಇಡೀ ಸಮುದಾಯ ಸೇರಿದಂತೆ ನಾನು ಕೂಡಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪರೋಕ್ಷವಾಗಿ ಅಪರೋಕ್ಷವಾಗಿ ಅನೇಕ ಕಾಣದ ಕೈಗಳು ನನಗೆ ಅಧ್ಯಕ್ಷರಾಗಲು ಸಹಕಾರ ನೀಡಿದ್ದಾರೆ. ಪಟ್ಟಣದ ಅಭಿವೃದ್ದಿ ಪ್ರಥಮ ಆದ್ಯತೆ ನೀಡುವ ಮೂಲಕ ಯಾವುದೇ ಕೆಲಸ ಕಾರ್ಯಗಳು ಇಡೀ ಪುರಸಭೆಯ ೨೩ ಸದಸ್ಯರ ಗಮನಕ್ಕೆ ತಂದು ಮಾಡುವದಾಗಿ ಹೇಳಿದ ಅವರು ನನಗೆ ಅಧಿಕಾರಕ್ಕಿಂತ ಶಾಸಕರ ವಿಶ್ವಾಸ ಉಳಿಸುವಂತಹ ಕೆಲಸ ಕಾರ್ಯಗಳು ಮಾಡುತ್ತೇನೆ. ಪಟ್ಟಣದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುವುದು ಸೇರಿದಂತೆ ಪಟ್ಟಣದ ಮೂಲಭೂತ ಸೌಲಭ್ಯಗಳಿಗೆ ಆದ್ಯತ್ಯೆ ನೀಡಲಾಗುವುದು ಅಭಿವೃದ್ದಿಗೆ ಬೇಕಾದ ಅನುಧಾನ ಶಾಸಕರಿಂದ ಸಹಕಾರ ಪಡೆದು ೨೩ ವಾರ್ಡಗಳಿಗೆ ಹಂಚಿಕೆ ಮಾಡಲಾಗುವುದು ಒಟ್ಟಾರೆ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದರು.
ಅನೀಲಗೌಡ ಬಿರಾದಾರ, ಉಮೇಶ ದೇಗಿನಾಳ, ಶಬ್ಬೀರ ಖಾಜಿ, ಅಯೂಬ ಬಾಗವಾನ, ಮುಸ್ತಾಕ ಇಂಡಿಕರ್, ಇಸ್ಮಾಯಿಲ್ ಅರಬ, ಭೀಮನಗೌಡ ಪಾಟೀಲ, ಭೀಮಾಶಂಕರ ಮೂರಮನ್ , ಸತೀಶ ಕುಂಬಾರ, ಸುಧೀರ ಕರಕಟ್ಟಿ, ಸೈಪನ್, ಅಸ್ಲಂ ಕಡಣಿ, ಶ್ರೀಶೈಲ ಪೂಜಾರಿ, ಇಲಿಯಾಸ ಬೋರಾಮಣಿ, ಜಾವೀದ ಮೋಮಿನ್, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಮಠ, ರೈಸ್ ಅಷ್ಠೇಕರ್, ಸತಾರ ಬಾಗವಾನ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಮುಖಂಡರು ಇದ್ದರು.