Sunday, 5th January 2025

“REDRUM” ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್‌- ಚಿತ್ರದ ಟೈಟಲ್‌ನಲ್ಲೇ ಇದೆ ಭಾರೀ ಟ್ವಿಸ್ಟ್‌!

ಬೆಂಗಳೂರು: ನೈಜ ಘಟನೆ ಆಧಾರಿತ ಕಥಾವಸ್ತುವಿನ ಜೊತೆಗೆ ತೆರೆ ಕಾಣಲು ಸಿದ್ದವಾಗಿರುವ ರೆಡ್‌ರಮ್‌(REDRUM Movie) ಸಿನಿಮಾದ ರೊಮ್ಯಾಂಟಿಕ್‌ ಸಾಂಗ್‌ವೊಂದು ರಿಲೀಸ್‌(Song Release) ಆಗಿದೆ. ಅಶೋಕ್ ದೇವನಾಂಪ್ರಿಯ, ಮೋಹನ್ ರಾಜ್ ಹಾಗೂ ಹನಿ ಚೌಧರಿ ನಿರ್ಮಾಣದ, ಪ್ರಮೋದ್ ಜೋಯಿಸ್ ನಿರ್ದೇಶನದ ಹಾಗೂ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿರುವ “REDRUM” ಚಿತ್ರದ “ಅನುಪಮ” ಎಂಬ ರೊಮ್ಯಾಂಟಿಕ್ ಸಾಂಗ್ FMD ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಿರ್ದೇಶಕರೇ ಬರೆದಿರುವ ಈ ಹಾಡನ್ನು “ಸರಿಗಮಪ” ಖ್ಯಾತಿಯ ದರ್ಶನ್ ನಾರಾಯಣ್ ಹಾಡಿದ್ದಾರೆ. ಹಾಡು‌ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಸಂತಸ ಹಂಚಿಕೊಂಡರು.

ಇದು ನನ್ನ ನಿರ್ದೇಶನದ ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಪ್ರಮೋದ್ ಜೋಯಿಸ್, ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಸಿನಿಮಾದೊಳಗೆ ನಡೆಯುವ ಸಿನಿಮಾ ಕಥೆಯೂ ಹೌದು‌. ನಿರ್ದೇಶಕನೊಬ್ಬ ತನ್ನ ಟ್ರೇಲರ್ ಬಿಡುಗಡೆ ಮಾಡಿದಾಗ, ಆ ಟ್ರೇಲರ್ ಬಾರಿ ಸಂಚಲನ ಉಂಟು ಮಾಡುತ್ತದೆ‌. ಆ ಮೂಲಕ ಚಿತ್ರದ ಕಥೆ ಶುರುವಾಗುತ್ತದೆ. ಉತ್ತರ ಭಾರತದಲ್ಲಿ ನಡೆದ ನೈಜಘಟನೆ ಆಧರಿಸಿರುವ ಈ ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರಭಾರತದಲ್ಲೇ ನಡೆದಿದೆ‌. “REDRUM” ಹೆಸರನ್ನು ನೀವು ಕನ್ನಡಿಯಲ್ಲಿ ನೋಡಿದಾಗ “MURDER” ಎಂದು ಆಗುತ್ತದೆ‌. ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಇದು ಸೂಕ್ತ ಶೀರ್ಷಿಕೆಯೂ ಆಗಿದೆ. ಕಾರ್ಯಕಾರಿ ನಿರ್ಮಾಪಕರೂ ಆಗಿರುವ ಅಫ್ಜಲ್, ಮುಂಬೈನ ರಾಜವೀರ್, ಪ್ರಾಚಿ ಶರ್ಮ, ದ್ರಿತೇಶ್, ವಿನಯ್ ಸೂರ್ಯ, ಯತಿರಾಜ್, ಮಧುರ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎರಡು ಹಾಡುಗಳು ಚಿತ್ರದಲ್ಲಿದ್ದು, ಇಂದು ನಾನೇ ಬರೆದಿರುವ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು ದರ್ಶನ್ ನಾರಾಯಣ್ ಹಾಡಿದ್ದಾರೆ. ಸದ್ಯದಲ್ಲೇ ಚಿತ್ರ ಸೆನ್ಸಾರ್ ಮುಂದೆ ಹಾಜರಾಗಲಿದೆ ಎಂದರು‌.

ನಾನು ಕಾರ್ಯಕಾರಿ ನಿರ್ಮಾಪಕನಾಗಿರುವುದರ ಜೊತೆಗೆ ಈ ಚಿತ್ರದ ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ಹೈದರಾಬಾದ್ ನ FMD ಮ್ಯೂಸಿಕ್ ನ ಮೂಲಕ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ಸಹ ನಿರ್ಮಾಪಕರೂ ಆಗಿರುವ ರಮೇಶ್ ಭಂಡಾರಿ ಅವರ ಸಾರಥ್ಯದ ಈ ಆಡಿಯೋ ಕಂಪನಿ ನಮ್ಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಅಡಿಯಿಟ್ಟಿದೆ. ನವೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದು ನಟ ಹಾಗೂ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದರು. ನಟ ದ್ರಿತೀಶ್ ಹಾಗೂ ನಟಿ ಪ್ರಾಚಿ ಶರ್ಮ ಹಾಡಿನ‌ ಅನುಭವ ಹಂಚಿಕೊಂಡರು. ದರ್ಶನ್ ನಾರಾಯಣ್ ಹಾಡಿನ ಬಗ್ಗೆ ಮಾತನಾಡಿ, ನಾಲ್ಕು ಸಾಲುಗಳನ್ನು ಹಾಡಿದರು. ಸಹ ನಿರ್ಮಾಪಕ ಹಾಗೂ ಮ್ಯೂಸಿಕ್ ಸಂಸ್ಥೆ ಮಾಲೀಕರಾದ ರಮೇಶ್ ಭಂಡಾರಿ, ಶ್ರೀನಿವಾಸ್ ಹಾಗೂ ಛಾಯಾಗ್ರಾಹಕ ಶಂಕು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

 ಚಿತ್ರದ ಟೈಟಲ್‌ನಲ್ಲಿದೆ ʻಮರ್ಡರ್‌ʼ ಮಿಸ್ಟ್ರಿ

ಇನ್ನು ಚಿತ್ರದ ಟೈಟಲ್‌ ಭಾರೀ ಕುತೂಹಲ ಮೂಡಿಸಿದೆ. ರೆಡ್‌ರಮ್‌ ಅಂದ್ರೆ ಏನು? ಅದರ ಅರ್ಥ ಏನು ಎಂಬ ಪ್ರಶ್ನೆ ಮೂಡುವುದು ಸಹಜ. REDRUM ಎಂಬ ಪದವನ್ನು ಕನ್ನಡಿ ಎದುರು ಹಿಡಿದಾಗ ಮತ್ತೊಂದು ಶೀರ್ಷಿಕೆ ಅನಾವರಣಗೊಳ್ಳುತ್ತದೆ. ಈ REDRUM ಎಂಬ ಪದ ಕನ್ನಡಿಯುಲ್ಲಿ ಮರ್ಡರ್‌ ಎಂದು ಕಾಣುತ್ತದೆ. ಹೀಗಾಗಿ ಟೈಟಲ್‌ನಲ್ಲೇ ಸಖತ್‌ ಟ್ವಿಸ್ಟ್‌ ಇರುವ ಈ ಚಿತ್ರ ಬಹಳ ಕುತೂಹಲ ಮೂಡಿಸಿರುವುದು ನಿಜ.

Leave a Reply

Your email address will not be published. Required fields are marked *