Thursday, 28th November 2024

KSOU: ಕರಾಮುವಿಯ ಪ್ರವೇಶಾತಿಯಲ್ಲಿ ಶುಲ್ಕ ರಿಯಾಯಿತಿ‌

ಮೈಸೂರಿನ ಕರಾಮುವಿಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಯುಜಿಸಿ ಅನುಮೋದಿತ ಕೋರ್ಸ್ ಗಳ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ., ಸ್ನಾತಕೋತ್ತರ., ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.

ಪ್ರಥಮ ವರ್ಷದ ಪ್ರವೇಶಾತಿ ಶುಲ್ಕ ವಿವರ:- ಬಿ.ಎ-ರೂ.8,400/-., ಬಿ.ಕಾಂ.-ರೂ.8,900/-.,ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-12,400/-., ಬಿ.ಸಿ.ಎ/ಬಿ.ಎಸ್ಸಿ-ರೂ.23,900/-., ಬಿ.ಎಸ್.ಡಬ್ಲ್ಯೂ-ರೂ.12,900/-., ಎಂ.ಎ-ರೂ.10,600/-., ಎಂ.ಸಿ.ಜೆ-ರೂ.16,200/-., ಎಂ.ಕಾಂ-ರೂ.12,400/-., ಎಂ.ಬಿ.ಎ–ರೂ.29,900/-.‌, ಎಂ.ಎಸ್ಸಿ/ಎಂ.ಸಿ.ಎ-ರೂ.29,700/-., ಎಂ.ಎಸ್.ಡಬ್ಲ್ಯೂ-ರೂ.21,300/-., ಎಂ.ಎಲ್.ಐ.ಎಸ್ಸಿ-ರೂ.18,150/-ಗಳಾಗಿರುತ್ತದೆ.

ಮುಂದುವರೆದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರಾಮುವಿಯಲ್ಲಿ ಪ್ರವೇಶಾತಿ ಪಡೆಯುವ ಕೆಲವೊಂದು ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮತ್ತು ಉಚಿತ ಪ್ರವೇಶಾತಿ ನೀಡಲಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ / ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ, KSRTC/BMTC/NWKSRTC/KKRTC ನೌಕರರಿಗೆ ಸ್ನಾತಕ/ಸ್ನಾತಕೋತ್ತರ ಪದವಿಗಳ ಕೋರ್ಸ್ ಗಳ ಬೋಧನಾ ಶುಲ್ಕದಲ್ಲಿ 10% ರಿಯಾಯಿತಿ ಇರುತ್ತದೆ.

ಕೋವಿಡ್ ನಿಂದ ಮರಣ ಹೊಂದಿದ ಪೋಷಕ ಮಕ್ಕಳಿಗೆ, ಟ್ರಾನ್ಸ್ ಜೆಂಡರ್ / ತೃತೀಯ ಲಿಂಗಿಗಳಿಗೆ, ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ (ಬಿ.ಎಡ್/ಎಂ.ಬಿ.ಎ ಹೊರತು ಪಡಿಸಿ) ಉಚಿತ ಪ್ರವೇಶಾತಿ ನೀಡಲಾಗುತ್ತಿದೆ.

ಹೆಚ್ಚಿನ ವಿವರಗಳಿಗಾಗಿ: ಪ್ರಾದೇಶಿಕ ನಿರ್ದೇಶಕರು, ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ರಾಜೀವ್‍ಗಾಂಧಿ ನಗರ, ಗಂಗಸಂದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816-2955580, 9844506629, 9886112434, 7349474339 ಅನ್ನು ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ ಆರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌