ಪಾವಗಡ: ಮರೆಯಲಾಗದ ನಿಡುಗಲ್ಲು ಕೃತಿ ಬಿಡುಗಡೆ ನೂರಾರು ದೇವ ನೆಲೆಗಳ ತಾಣವಾಗಿರುವ ನಿಡುಗಲ್ ಸಾವಿರಕ್ಕೂ ಹೆಚ್ಚಿನ ವರ್ಷದಿಂದ ಇತಿಹಾಸವನ್ನು ಹೊಂದಿದ್ದು, ಅಲ್ಲಿರುವ ಐತಿಹಾಸಿಕ ಪರಂಪರೆಯ ಸ್ಮಾರಕಗಳೆಲ್ಲವೂ ಪಾಳು ಬಿಡ್ಡು ಹಾಳಾಗುವ ಹಂತ ತಲುಪಿದೆ. ಅವುಗಳನ್ನು ರಕ್ಷಿಸಿಡುವ ಕೆಲಸವಾಗಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳ ನುಡಿದರು.
ಅವರು ನಿಡುಗಲ್ ವೀರಭದ್ರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಾವಗಡ ನಿಡುಗಲ್ಲಿನ ವೀರಭಧ್ರಸ್ವಾಮಿ ದೇವಾಲಯದ ಆವರಣದಲ್ಲಿನ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಂಶೋಧಕರಾದ ಡಾ. ಡಿ.ಎನ್. ಯೋಗೀಶ್ವರಪ್ಪ ಮತ್ತು ಅನಿತ ಮಂಜುನಾಥ ರಚಿಸಿರುವ ಮರೆಯಲಾಗದ ನಿಡುಗಲ್ಲು ಕೃತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಚಿತ್ತಯ್ಯ ಪೂಜಾರ್ ಮಾತನಾಡಿ ಹಲವಾರು ರಾಜ ಮನೆತನಗಳು ಆಳ್ವಿಕೆ ನಡೆಸಿದ ನಿಡುಗಲ್ ಪ್ರತ್ಯೇಕ ವೈಶಾಲ್ಯತೆ ಮತ್ತು ಸ್ವರೂಪದಲ್ಲಿ ವಿಜಯನಗರದ ರಾಜಧಾನಿ ಹಂಪೆಯAತೆ ಕಾಣುತ್ತದೆ. ಇಲ್ಲಿ ಅಸಂಖ್ಯಾತ ಸ್ಮಾರಕಗಳ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಿಧಿಗಳ್ಳರ ಆಸೆಗೆ ಬಲಿಯಾಗುತ್ತಿವೆ. ಇವುಗಳನ್ನೆಲ್ಲಾ ಸರ್ಕಾರ ಒಂದೆಡೆ ಸೇರಿಸಿ ಐತಿಹಾಸಿಕ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಚಾರಣ ಪ್ರವಾಸಿಗರ ಸ್ವರ್ಗತಾಣವನ್ನಾಗಿ ಮಾಡಬಹುದು ಎಂದರು.
ಕೃತಿಯನ್ನು ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾದ ಎಲ್.ಪಿ ರಾಜು ಮಾತನಾಡಿ ನಿಡುಗಲ್ಲಿನ ಬಗ್ಗೆ ಇದುವರೆಗೆ ಬಂದಿರುವ ಎಲ್ಲಾ ಕೃತಿಗಳಿಗಿಂತ ಇದು ಬಿನ್ನವಾಗಿದ್ದು ಬಹುಮುಖ್ಯವಾಗಿ ಯುರೋಪಿಯನ್ನರ ಅಧಿಕೃತ ದಾಖಲೆಗಳನ್ನಾಧಿರಿಸಿ ರಚನೆಯಾಗಿರುವುದು ಮತ್ತು ಹೆಚ್ಚಿನ ಸಂಶೋಧನೆಗೆ ಮಾರ್ಗತೋರಿಸಿದ್ದು ಇದೊಂದು ಉತ್ತಮ ಕೃತಿಯಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ ಪ್ರಕೃತಿಯ ಮಡಿಲಿನಲ್ಲಿರುವ ನಿಡುಗಲ್ಲಿನಲ್ಲಿ 18ನೇ ಶತಮಾನದಲ್ಲಿ ನಿಡುಗಲ್ ಚನ್ನಪ್ಪನೆಂಬ ಕವಿ ನೆಲೆಸಿದ್ದು ಶಿಖರದ ಬಸವನ ತಾರಾವಳಿ ರಚಿಸಿದ್ದು ಅದು ನಿಡುಗಲ್ಲಿನ ಜಾತ್ರೆಯ ವೈಭವವನ್ನು ವಣ ðಸುತ್ತದೆ. ಆ ಜಾತ್ರೆ ಇಂದಿಗೂ ಶ್ರಾವಣ ಮಾಸದಲ್ಲಿ ಮುಂದುವರೆದಿರುವುದು ನಮ್ಮ ಪರಂಪರೆಯ ದ್ಯೋತಕವಾಗಿದೆ ಎಂದರು.
ಕೃತಿಕಾರರಾದ ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪನವರು ಮಾತನಾಡಿ ನಿಡುಗಲ್ 1800ರಲ್ಲಿ ಜಿಲ್ಲಾ ಕೇಂದ್ರವಾಗಿದ್ದು ಅಂದು ಅದಕ್ಕೆ ನಾಲ್ಕು ತಾಲ್ಲೂಕುಗಳಿದ್ದವು. ಅಲ್ಲಿ ಅಮುಲ್ದಾರರ ಕಛೇರಿ ಇತ್ತು. ಅಲ್ಲಿದ್ದ ದಾಖಲೆಗಳನ್ನು ಗಮನಿಸಿ ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕಂಜಿಯು ನಿಡುಗಲ್ಲಿನ ಬಗ್ಗೆ ವರದಿ ಸಿದ್ಧಪಡಿಸಿ ಈಸ್ಟ್ ಇಂಡಿಯಾ ಕಂಪನಿಗೆ 1803ರಲ್ಲಿ ಸಲ್ಲಿಸಿದ್ದನು. ಅದು 540 ಪುಟಗಳ ವರದಿ ಲಂಡನ್ನಿನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಅದನ್ನಾಧರಿಸಿ ಈ ಕೃತಿಯನ್ನು ರಚಿಸಲಾಗಿದೆ ಎಂದರು.
ಕ್ರಿ.ಶ 1790 ರಲ್ಲಿ ಹತ್ತುಸಾವಿರ ಮನೆಗಳು ನಿಡುಗಲ್ಲಿನಲ್ಲಿದ್ದು ಆ ವೈಭವದ ಸಾವಿರದ ಮುನ್ನೂರು ವರ್ಷಗಳ ನಾಗರೀಕತೆ ನಶಿಸಿಹೋಯಿತು. ಈಗ ಪಾಳುಬಿದ್ದಿದ್ದ ವೀರಭದ್ರ ಸ್ವಾಮಿ ದೇಗುಲ, ಜೈನಬಸದಿ, ಮಲ್ಲಿಕಾರ್ಜುನ, ಸೋಮೇಶ್ವರÀ, ನಗರೇಶ್ವರ ದೇಗುಲಗಳನ್ನು ಜೀರ್ಣೋದ್ದಾರ ಮಾಡುವ ಮೂಲಕ ಮತ್ತೊಮ್ಮೆ ನಿಡುಗಲ್ಲಿನ ನಾಗರೀಕತೆಯ ಪುನರ್ಸ್ಥಾಪನೆ ಮಾಡಲಾಗಿರುವುದು ಹೆಮ್ಮೆಯ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಸಂಶೋಧಕರಾದ ಡಾ. ವಿ. ಚೆಲುವರಾಜ್, ಜಾನಪದ ವಿದ್ವಾಂಸರಾದ ಸಣ್ಣನಾಗಪ್ಪ, ಸಂಶೋಧಕ ಹೊ.ಮ. ನಾಗರಾಜು ಮುದ್ರಕರಾದ ಸತೀಶ್ ಹೆಬ್ಬಾಕ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿಶಾಸಕ ಕೆ.ಎಂ. ತಿಮ್ಮರಾಯಪ್ಪ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕರಿಯಣ್ಣ, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಂ.ಬಿ. ಸದಾಶಿವಯ್ಯ ಹಾಜರಿದ್ದರು. ಟ್ರಸ್ಟ್ನ ಗೌರವಾಧ್ಯಕ್ಷ ನಿಜಗುಣ ಟಿ. ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ನ ಕೋಶಾಧ್ಯಕ್ಷ ವಿಶ್ವನಾಥ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಡಾ. ಬಿ. ನಂಜುAಡಸ್ವಾಮಿ, ಡಾ. ಜಗದೀಶ್, ಡಾ. ಚಂದ್ರಶೇಖರ್ ಇವರಿಗೆ ಗೌರವ ಪ್ರತಿಗಳನ್ನು ನೀಡಲಾಯಿತು.
ಪಾವಗಡ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಟ್ಟಾನರಸಿಂಹ ಮೂರ್ತಿ ಸ್ವಾಗತಿಸಿದರು. ಡಾ. ಬಿ. ನಂಜುAಡಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟಿ.ಆರ್ ಜಗದೀಶ್ ವಂದಿಸಿದರು. ಅನಿತ ಮಂಜುನಾಥ ನಿರೂಪಿಸಿದರು. ಲಖಿತ ಪ್ರಾರ್ಥಿಸಿದರು.
ಭಾವಚಿತ್ರ: ಡಾ. ಡಿ.ಎನ್. ಯೋಗೀಶ್ವರಪ್ಪ ಮತ್ತು ಅನಿತ ಮಂಜುನಾಥ ರಚಿಸಿರುವ ಮರೆಯಲಾಗದ ನಿಡುಗಲ್ಲು ಎಂಬ ಕೃತಿಯನ್ನು ನಿಡುಗಲ್ಲಿನ ಸಮುದಾಯ ಭವನದಲ್ಲಿ ಚಿತ್ರದುರ್ಗದ ಸಂಸದ ಗೋವಿಂದ ಕಾರಚೋಳ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಮಾಜಿಶಾಸಕ ಕೆ.ಎಂ. ತಿಮ್ಮರಾಯಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಕೃತಿಕಾರ ಡಾ. ಡಿ.ಎನ್. ಯೋಗೀಶ್ವರಪ್ಪ, ಡಾ. ಚಿತ್ತಯ್ಯ ಪೂಜಾರಿ, ಡಾ. ಎಲ್.ಪಿ ರಾಜು, ಡಾ. ಬಿ ನಂಜುAಡಸ್ವಾಮಿ, ಪ್ರೊ. ಎಂ ಬಿ ಸದಾಶಿವಯ್ಯ, ಪ್ರೊ. ಕರಿಯಣ್ಣ, ಕಟ್ಟಾ ನರಸಿಂಹ ಮೂರ್ತಿ ಅನಿತ ಮಂಜುನಾಥ್ ಇತರರಿದ್ದಾರೆ.