Friday, 22nd November 2024

Haryana Election : ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

Haryana Election

ನವದೆಹಲಿ: ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Election) ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಹಾಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಲಾಡ್ವಾ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಹರಿಯಾಣ ಸಚಿವ ಅನಿಲ್ ವಿಜ್ ಅವರನ್ನು ಅಂಬಾಲಾ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದ್ದು, ಬಿಜೆಪಿ ರಾಜ್ಯಸಭಾ ಸಂಸದೆ ಕಿರಣ್ ಚೌಧರಿ ಅವರ ಪುತ್ರಿ ಶ್ರುತಿ ಚೌಧರಿ ಅವರಿಗೆ ತೋಶಮ್ ಸ್ಥಾನದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ಸಿಕ್ಕಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಶ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಕ್ಷದ (ಜೆಜೆಪಿ) ಮೂವರು ಮಾಜಿ ಶಾಸಕರಾದ ದೇವೇಂದ್ರ ಬಬ್ಲಿ, ರಾಮ್ ಕುಮಾರ್ ಗೌತಮ್ ಮತ್ತು ಅನೂಪ್ ಧನಕ್ ಅವರಿಗೆ ಕ್ರಮವಾಗಿ ತೋಹಾನಾ, ಸಫಿಡಾನ್ ಮತ್ತು ಉಕ್ಲಾನಾ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಟಿಕೆಟ್ ಸಿಕ್ಕಿದೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸಲು ಅವಕಾಶ ಪಡೆದ ಇತರ ಪ್ರಮುಖ ವ್ಯಕ್ತಿಗಳಲ್ಲಿ ರತಿಯಾದಿಂದ ಮಾಜಿ ಬಿಜೆಪಿ ಸಂಸದೆ ಸುನೀತಾ ದುಗ್ಗಲ್, ಮಾಜಿ ಬಿಜೆಪಿ ಲೋಕಸಭಾ ಸಂಸದ ಕುಲದೀಪ್ ಬಿಷ್ಣೋಯ್ ಅವರ ಪುತ್ರ ಭವ್ಯಾ ಬಿಷ್ಣೋಯ್ ಆದಂಪುರದಿಂದ ಮತ್ತು ಕೇಂದ್ರ ಯೋಜನೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ರಾವ್ ಇಂದರ್ಜಿತ್ ಸಿಂಗ್ ಅವರ ಪುತ್ರಿ ಆರತಿ ಸಿಂಗ್ ಅಟೆಲಿಯಿಂದ ಸ್ಪರ್ಧಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi : ರಾಹುಲ್‌ ಗಾಂಧಿ ಅಪ್ಪ ರಾಜೀವ್‌ ಗಾಂಧಿಗಿಂತಲೂ ಚತುರ ಎಂದು ಹೊಗಳಿದ ಸ್ಯಾಮ್‌ ಪಿತ್ರೋಡಾ

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮತ್ತು ಪಕ್ಷದ ಹೈಕಮಾಂಡ್ ಸಂಪರ್ಕಿಸದಿದ್ದರೆ ಬಂಡಾಯ ಏಳುವುದಾಗಿ ಬೆದರಿಕೆ ಹಾಕಿದ್ದ ರಾವ್ ನರ್ಬೀರ್ ಸಿಂಗ್ ಅವರನ್ನು ಬಾದ್ಶಾಪುರದಿಂದ ಕಣಕ್ಕಿಳಿಸಲಾಗಿದೆ. ಆಗಸ್ಟ್ 29 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಚರ್ಚಿಸಿ ಅಂತಿಮಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು