Friday, 22nd November 2024

Mysore News: ಮೈಸೂರಿನ ಉತ್ತರಾದಿ ಮಠದಲ್ಲಿ ಸಂಭ್ರಮದಿಂದ ಶ್ರೀ ಧನ್ವಂತರಿ ಜಯಂತಿ

Mysore News

ಮೈಸೂರು: ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಸಪ್ತರಾತ್ರೋತ್ಸವದೊಂದಿಗೆ ಧನ್ವಂತರಿ ಜಯಂತಿ ಸಂಭ್ರಮದಿಂದ (Mysore News) ನೆರವೇರಿತು.

ದೇಶದಲ್ಲಿಯೇ ಅತಿ ದೊಡ್ಡದಾದ ಧನ್ವಂತರಿ ಸನ್ನಿಧಾನದಲ್ಲಿ ಗುರುವಾರ ಬೆಳಗ್ಗೆ 8ಕ್ಕೆ ಸ್ವಾಮಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮಹಾಮಂಗಳಾರತಿ ನೆರವೇರಿತು. ನೂರಾರು ಭಕ್ತರು ಧನ್ವಂತರಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಸಾಮೂಹಿಕವಾಗಿ ಶ್ರೀ ಹರಿವಾಯು ಸ್ತುತಿ ಪಾರಾಯಣ ನೆರವೇರಿತು.

ಈ ಸುದ್ದಿಯನ್ನೂ ಓದಿ | Ban For Phone Use: ಸ್ವೀಡನ್‌ನಲ್ಲಿ ಮಕ್ಕಳ ಮೊಬೈಲ್ ವೀಕ್ಷಣೆಗೆ ಕಾಲಮಿತಿ! ಉಳಿದ ದೇಶಗಳಲ್ಲೂ ಮೊಬೈಲ್‌ ಪರಿಣಾಮದ ಕಳವಳ

ಮಹಾಯಾಗ

ಲೋಕ ಕಲ್ಯಾಣಾರ್ಥವಾಗಿ ಮತ್ತು ಸರ್ವರ ಆರೋಗ್ಯ ಪಾಲನೆ ಸಂಕಲ್ಪದೊಂದಿಗೆ ಶ್ರೀಮಠದಲ್ಲಿ ಗುರುವಾರ ಬೆಳಗಿನ ಅವಧಿಯಲ್ಲಿ 10,000 ಅಮೃತ ಬಳ್ಳಿ ಆಹುತಿಯೊಂದಿಗೆ ಮಹಾ ಧನ್ವಂತರಿ ಯಾಗ ಭಕ್ತಿ ಭಾವದಿಂದ ನೆರವೇರಿದ್ದು ವಿಶೇಷವಾಗಿತ್ತು.

ಹಿರಿಯ ವಿದ್ವಾಂಸರಾದಗೋವಿಂದಾಚಾರ್ಯ ಮತ್ತು ಶೈಲಾ ದಂಪತಿ ಮಹಾ ಧನ್ವಂತರಿ ಯಾಗಕ್ಕೆ ಪೂರ್ಣಾಹುತಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ನಂತರ 500ಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ಸಾಂಸ್ಕೃತಿಕ ವೈವಿಧ್ಯ

ಸಪ್ತ ರಾತ್ರೋತ್ಸವದ ಅಂಗವಾಗಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ಪ್ರತಿದಿನವೂ ಧನ್ವಂತರಿ ದೇವರಿಗೆ ಒಂದೊಂದು ವಿಶೇಷ ಅಲಂಕಾರ ಸಂಜೆ ರವಿಕುಮಾರ್ ನೇತೃತ್ವದಲ್ಲಿ ನವ, ಯುವ ಕಲಾವಿದರಿಂದ ಸಂಗೀತ ಮತ್ತು ನೃತ್ಯೋತ್ಸವ ರಂಜನೆ ನೀಡಿತು.

ಈ ಸುದ್ದಿಯನ್ನೂ ಓದಿ | Reliance Jio: ರಿಲಯನ್ಸ್ ಜಿಯೊ ವಾರ್ಷಿಕೋತ್ಸವ ಆಫರ್; ಆಯ್ದ ರೀಚಾರ್ಜ್‌ ಮೇಲೆ 700 ರೂ. ಮೌಲ್ಯದ ಬೆನಿಫಿಟ್‌

ನಿತ್ಯವೂ ಪ್ರಮುಖ ಬೀದಿಗಳಲ್ಲಿ ಶ್ರೀ ಧನ್ವಂತರಿ ಉತ್ಸವ ಮೂರ್ತಿಯ ವಿವಿಧ ವಾಹನೋತ್ಸವ, ಸನ್ನಿಧಿಯಲ್ಲಿ ಸ್ವಸ್ತಿವಾಚನ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಿತು.